ಅಪರೂಪದ ಬೃಹತ್ ಕಡಲೇಡಿಯನ್ನು ಹಿಡಿದ ಮೀನುಗಾರ!
ಇತ್ತೀಚೆಗೆ ಅಂತೂ ಮೀನುಗಾರರಿಗೆ ವಿಭಿನ್ನವಾದ ಮೀನುಗಳು ಆಗಾಗ್ಲೇ ದೊರಕುತ್ತಿದ್ದು, ಅವರ ಮುಖದಲ್ಲಿ ನಗು ತರಿಸುತ್ತಿದೆ. ಈ ಮೀನುಗಾರಿಕೆ ಎಂಬುದು ಒಂದು ವೃತ್ತಿಯಾದರೂ ಬುದ್ದಿವಂತಿಕೆ ಮುಖ್ಯ ಎಂದೇ ಹೇಳಬಹುದು. ಯಾಕಂದ್ರೆ ಎಲ್ಲಾ ಮೀನುಗಾರರಿಗೆ ಎಲ್ಲಾ ತರದ ಮೀನುಗಳನ್ನು ಹಿಡಿಯಲು ಸಾಧ್ಯವಿಲ್ಲ.
ಆದರೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೀನುಗಾರರೊಬ್ಬರು
ಇತ್ತೀಚೆಗೆ 100 ವರ್ಷದ ದೈತ್ಯಾಕಾರದ ಕಡಲೇಡಿಯನ್ನು ಹಿಡಿದಿದ್ದು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದಾರೆ. ಅಲ್ಲದೆ “ಇದು ನಾವು ಹಿಡಿದಿರುವ ಅತಿ ದೊಡ್ಡ ಗಾತ್ರದ ಕಡಲೇಡಿ” ಎಂದು ಹೇಳಿಕೊಂಡಿದ್ದಾರೆ.
ವಿಡಿಯೋದಲ್ಲಿ ಜಾಕೋಬ್ ಮೀನಿನ ಕುರಿತು ವಿವರಿಸಿದ್ದು, “ಕಡಲೇಡಿಯಲ್ಲಿ ಸಣ್ಣ ಉಗುರುಗಳು ಇದ್ದ ಕಾರಣ ಅದನ್ನು ಸುಲಭವಾಗಿ ಹಿಡಿಯಲು ಸಾಧ್ಯವಾಯಿತು.
ತನ್ನ ಜೀವನದ ಒಂದು ಹಂತದಲ್ಲಿ ಉಗುರುಗಳನ್ನು ಕಳೆದುಕೊಂಡಿದೆ. ಅದಾಗ್ಯೂ ಕೆಲವು ಹೊಸ ಉಗುರುಗಳು ಬೆಳೆದಿವೆ. ಆದರೆ ಈ ಉಗುರುಗಳು
ಅದರ ದೇಹಕ್ಕೆ ಹೊಂದಿಕೆಯಾಗುವುದಿಲ್ಲ. ದೇಹವು ಬಲಶಾಲಿಯಾಗಿದೆ” ಎಂದು ಹೇಳಿದ್ದಾರೆ.
ಅಲ್ಲದೆ, ತನ್ನ ಬಗ್ಗೆ ಹೇಳಿಕೊಂಡಿರುವ ಜಾಕೋಬ್, “ತಾನು ನಾಲ್ಕನೇ ತಲೆಮಾರಿನ ಮೀನುಗಾರ ಎಂದು ಬಹಿರಂಗಪಡಿಸಿದ್ದು, ನಾವು ಹಿಡಿದಿರುವ ಕಡಲೇಡಿಗೆ ಸುಮಾರು 100 ವರ್ಷ ಆಗಿರಬಹುದು. ತನಗಿಂತ ಮೊದಲು ಮೀನುಗಾರರಾಗಿದ್ದ ತನ್ನ ಕುಟುಂಬವು ಈ ಕಡಲೇಡಿಯನ್ನು ಹಿಡಿದಿರುವ ಸಾಧ್ಯತೆಯಿದೆ ಎಂದಿದ್ದಾರೆ.
ಜಾಕೋಬ್ ಪ್ರಕಾರ, ಕಡಲೇಡಿ ವರ್ಷದಿಂದ ವರ್ಷಕ್ಕೆ ಅದೇ ಪ್ರದೇಶದ ಮೂಲಕ ವಲಸೆ ಹೋಗುವ ಸಾಧ್ಯತೆಯಿದೆ. ಈ ಕಡಲೇಡಿಗೆ ವಯಸ್ಸಾದ ಕಾರಣ ಉಗುರುಗಳ ಮೇಲೆ ಯಾವುದೇ ಹಲ್ಲುಗಳಿಲ್ಲ. ಆದಾಗ್ಯೂ ಕಠಿಣಚರ್ಮ ಹೊಂದಿದ್ದು, ಆರೋಗ್ಯಕರವಾಗಿದೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಇದು ಉತ್ತಮ ಸ್ಥಿತಿಯಲ್ಲಿದೆ. ಅದರ ಬಾಲದ ಗಾತ್ರ ನನ್ನ ಎರಡೂ ಕೈಗಳ ಗಾತ್ರದಷ್ಟಿದೆ ಎಂದು ವಿವರಿಸಿದರು.
ಆದರೆ ಕಡಲೇಡಿಯನ್ನು ಸಾಯಿಸದೆ ಮತ್ತೆ ನೀರಿಗೆ ಬಿಡುವ ಮೂಲಕ ಬದುಕು ನೀಡಿದ್ದಾರೆ. ಕಡಲೇಡಿಯನ್ನು ನೀರಿಗೆ ಬಿಡುವ ಮೊದಲು ಜಾಕೋಬ್, ಕಡಲೇಡಿಯ ಉಗುರುಗಳ
ಸಂಧಿಯಲ್ಲಿ ಮೀನನ್ನು ಇಟ್ಟು ನೀರಿಗೆ ಬಿಟ್ಟಿದ್ದಾರೆ. ಈ ವೇಳೆ ಅವರು “ನೀನು ಹೋಗು, ಹೋಗು ಕೆಲವು ಮರಿಗಳನ್ನು ಮಾಡು” ಎಂದು ಹೇಳಿದ್ದಾರೆ. ಮಾಹಿತಿಯ ಪ್ರಕಾರ, ಮೈನೆಯಲ್ಲಿ ಕಡಲೇಡಿಯನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಇಂಥ ಗಾತ್ರದ ಕಡಲೇಡಿಗಳನ್ನು ಸಂತಾನೋತ್ಪತ್ತಿಯ ಉದ್ದೇಶಗಳಿಗಾಗಿ ರಕ್ಷಿಸಲಾಗುತ್ತಿದೆ.
ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಮೀನುಗಾರ ಜಾಕೋಬ್ ನೋಲ್ಸ್ ಈ ಕಡಲೇಡಿಯನ್ನು ಹಿಡಿದಿರುವ ವಿಡಿಯೋ ವೈರಲ್ ಆಗುತ್ತಿದೆ.