ಕೋಮುವಾದಿಗಳನ್ನು ನಾನು ವಿರೋಧಿಸುತ್ತೆನೆ.
ಧಾರವಾಡ: ರಾಜಕೀಯ ಸೇರಿದಂತೆ ಇತರೆ ವಿಚಾರಗಳಲ್ಲಿ ನಾನು ಕೋಮುವಾದಿಗಳನ್ನು ವಿರೋಧಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಂಗಳವಾರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಜೆಡಿಎಸ್ ನವರು ಕೋಮುವಾದಿಗಳನ್ನು ವಿರೋಧಿಸುವುದಾದರೆ ನಮ್ಮ ವಿರುದ್ಧ ಅಭ್ಯರ್ಥಿಗಳನ್ನು ಯಾಕೆ ಹಾಕಬೇಕಿತ್ತು ಎಂದು ತಿರುಗೇಟು ನೀಡಿದರು.
ಕೋಮುವಾದಿಗಳನ್ನು ಸೋಲಿಸಲು ಕೈ-ತೆನೆ ಒಂದಾಗಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಹಾಗಿದ್ದಲ್ಲಿ ನಮ್ಮ ಅಭ್ಯರ್ಥಿಗಳ ವಿರುದ್ಧ ಅಭ್ಯರ್ಥಿಗಳನ್ನು ಹಾಕಬಾರದಿತ್ತು. ಕೋಮುವಾದಿಗಳನ್ನು ಸೋಲಿಸುವುದಾದರೆ ನಮ್ಮ ಅಭ್ಯರ್ಥಿಗಳಿಗೆ ಜೆಡಿಎಸ್ ನವರು ಮತ ಹಾಕಲಿ ಎಂದರು.
ಈ ಹಿಂದೆ ನಾವು ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ 37 ಶಾಸಕರನ್ನು ಹೊಂದಿದ್ದ ಕುಮಾರಸ್ವಾಮಿ ಅವರನ್ನೆ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇವು. ದೇವೇಗೌಡರು ಪ್ರಧಾನಮಂತ್ರಿಯಾಗಲು ನಾವೇ ಬೆಂಬಲ ನೀಡಿದ್ದೇವು. ಇದೀಗ ಕೋಮುವಾದಿಗಳನ್ನು ಸೋಲಿಸಲು ಜೆಡಿಎಸ್ ನವರು ನಮಗೆ ಬೆಂಬಲ ನೀಡಲಿ ಎಂದು ಹೇಳಿದರು.
ನಾನು ಹಾಗೂ ಯಡಿಯೂರಪ್ಪ ಅವರು ಭೇಟಿಯಾಗಿರುವುದು ಯಾವುದೇ ರಾಜಕೀಯ ವಿಷಯಕ್ಕಲ್ಲ. ಇದರ ಹಿಂದೆ ಯಾವುದೇ ರಾಜಕೀಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.