ಅದ್ಧೂರಿಯಾಗಿ ನೆರವೇರಿತು ಗೌಡ್ರ ಮರಿ ಮೊಮ್ಮಗನ ನಾಮಕರಣ ಶಾಸ್ತ್ರ !! | ಕುಮಾರಸ್ವಾಮಿ ಮೊಮ್ಮಗನ ಹೆಸರೇನು ಗೊತ್ತಾ??

ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರ ಮೊಮ್ಮಗನ ನಾಮಕರಣ ಶಾಸ್ತ್ರ ಇಂದು ಅದ್ದೂರಿಯಾಗಿ ನೆರವೇರಿದ್ದು, ದೇವೇಗೌಡರ ಮರಿಮೊಮ್ಮಗನ ಹೆಸರು ಏನಿರಬಹುದು? ಎಂದು ಕುತೂಹಲದಿಂದ ಕಾದಿದ್ದ ಅಭಿಮಾನಿಗಳಿಗೆ ಉತ್ತರ ಸಿಕ್ಕಿದೆ.

 

ಸ್ಯಾಂಡಲ್​ವುಡ್ ನಟ ಹಾಗೂ ರಾಜಕಾರಣಿ ನಿಖಿಲ್​ ಕುಮಾರಸ್ವಾಮಿ ಹಾಗೂ ರೇವತಿ 2020ರ ಏಪ್ರಿಲ್​ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ರಾಮನಗರದಲ್ಲಿ ವಿವಾಹ ಸಮಾರಂಭ ನೆರವೇರಿತ್ತು. 2021ರ ಸೆಪ್ಟೆಂಬರ್ 24ರಂದು ಈ ದಂಪತಿ ಪುತ್ರನನ್ನು ಬರಮಾಡಿಕೊಂಡಿದ್ದರು. ಇದೀಗ ಪುಟ್ಟ ಕಂದನಿಗೆ ಹೆಸರಿಡುವ ಮೂಲಕ ಸಂಭ್ರಮ ಹಂಚಿಕೊಂಡಿದ್ದು, ಪುತ್ರನಿಗೆ ‘ಅವ್ಯಾನ್​​ ದೇವ್’ ಎಂದು ನಾಮಕರಣ ಮಾಡಲಾಗಿದೆ.

ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ಮಾಜಿ ಪ್ರಧಾನಿ ಹೆಚ್​​.ಡಿ.ದೇವೇಗೌಡ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು. 10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ಕುಟುಂಬಸ್ಥರು ಪ್ರಪೌತ್ರ ಜನನ ಶಾಂತಿ, ನಾಮಕರಣ, ಕನಕಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

Leave A Reply

Your email address will not be published.