ಉದ್ಘಾಟನೆ ಸಮಯದಲ್ಲೇ ಮುರಿದು ಬಿದ್ದ ಸೇತುವೆ, ಪತ್ನಿಯೊಂದಿಗೆ ಮೋರಿಗೆ ಬಿದ್ದ ಮೇಯರ್!
ಭ್ರಷ್ಟಾಚಾರ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಇದೆ. ಸೇತುವೆ ಉದ್ಘಾಟನೆಗೆ ಆಗಮಿಸಿದ್ದ ಮೇಯರ್ ತನ್ನ ಪತ್ನಿಯ ಸಮೇತ ಮೋರಿಗೆ ಬಿದ್ದಿರುವ ಘಟನೆಯ ವೀಡಿಯೋವೊಂದು ವೈರಲ್ ಆಗಿದೆ.
ನಗರದ ಮೇಯರ್ ಹಾಗೂ ಇತರ ಅಧಿಕಾರಿಗಳು ಈ ಸೇತುವೆಯನ್ನು ಉದ್ಘಾಟನೆ ಮಾಡಲು ಬಂದಿದ್ದರು. ಸುಮಾರು 30ಕ್ಕಿಂತ ಅಧಿಕ ವ್ಯಕ್ತಿಗಳು ಒಮ್ಮೆಲೇ ಸೇತುವೆಯನ್ನು ಏರಿದ್ದರ ಪರಿಣಾಮವಾಗಿಯೇನೋ ಮೇಯರ್ ಅವರ ಪತ್ನಿ ಸಮೇತ ಮೋರಿಗೆ ಬಿದ್ದಿದ್ದಾರೆ. ಈ ವಿಡಿಯೋ ಅಂತರ್ಜಾಲದಲ್ಲಿ ಈಗ ವೈರಲ್ ಆಗುತ್ತಿದೆ.
ಪ್ರಕರಣವು ಮೆಕ್ಸಿಕೋದ ಕುರ್ನಿವಾಕಾದಲ್ಲಿ ನಡೆದಿದೆ. ಆ ಮೇಯರ್ ನದಿಯ ಮೇಲೆ ಕಾಲುಸಂಕವನ್ನು ಉದ್ಘಾಟನೆ ಮಾಡುತ್ತಿದ್ದರು. ಮರದ ಹಲಗೆಗಳು ಮತ್ತು ಲೋಹದ ಸರಪಳಿಗಳಿಂದ ಮಾಡಲ್ಪಟ್ಟ ಈ ಸೇತುವೆಯನ್ನು ಮರು ನಿರ್ಮಿಸಲಾಗಿತ್ತು.
ವೀಡಿಯೋ ನೋಡಿದಾಗ ಸರಪಳಿಯಿಂದ ಬೋರ್ಡ್‌ಗಳು ಬೇರ್ಪಟ್ಟಿದ್ದರಿಂದ ಈ ಘಟನೆ ನಡೆದಿದೆ. ಎಂದು ಹೇಳಲಾಗಿದೆ. ಅದರಲ್ಲೂ ಒಬ್ಬ ವ್ಯಕ್ತಿ ಲೋಹದ ಸರಪಳಿ ಹಿಡಿದುಕೊಂಡು ನೇತಾಡುತ್ತಿರುವ ದೃಶ್ಯ ಕೂಡ ದಾಖಲಾಗಿದೆ.
ಸಿಟಿ ಕೌನ್ಸಿಲ್ ಸದಸ್ಯರು ಮತ್ತು ಇತರ ಸ್ಥಳೀಯ ಅಧಿಕಾರಿಗಳು ಕಲ್ಲುಗಳ ಮೇಲೆ 3 ಮೀಟರ್ (10 ಅಡಿ) ಕೆಳಗೆ ಬಿದ್ದಿದ್ದಾರೆ. ಕಲ್ಲುಗಳೇ ತುಂಬಿದ್ದ ಮೋರಿಯಲ್ಲಿ ಬಿದ್ದವರಲ್ಲಿ ಮೇಯರ್, ಅವರ ಪತ್ನಿ, ಹಲವಾರು ಅಧಿಕಾರಿಗಳು ಮತ್ತು ವರದಿಗಾರರು ಸೇರಿದ್ದು, ಗಾಯಗೊಂಡ ಅನೇಕ ಜನರನ್ನು ಸ್ಥಳೀಯ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ದಾಖಲಿಸಲಾಗಿದೆ.
ವರದಿಯ ಪ್ರಕಾರ, ಮೇಯರ್ ಜೋಸ್ ಲೂಯಿಸ್ ಅವರನ್ನು ಸಹ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಣ್ಣಪುಟ್ಟ ಗಾಯಗಳಿಂದ ಮೇಯರ್ ಅಪಾಯದಿಂದ ಪಾರಾಗಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಸೇತುವೆಯನ್ನು ಹತ್ತಿದ ಕಾರಣ ಈ ಘಟನೆ ಸಂಭವಿಸಿದೆ. ಎಂದು ಹೇಳಲಾಗಿದೆ.