ಪುರೋಹಿತರು ವರನಿಗೆ ಆರತಿ ತಗೋಳ್ಳಪ್ಪ ಎಂದು ಹಿಡಿದಾಗ, ವರ ಮಾಡಿದ ಕೆಲಸ ನೋಡಿ ಬಿದ್ದುಬಿದ್ದು ನಕ್ಕ ಜನ !!! ವೀಡಿಯೋ ವೈರಲ್!

ಮದುವೆ ಸಮಾರಂಭಗಳಲ್ಲಿ ಹೆಚ್ಚಿನ ಫನ್ನಿ ವೀಡಿಯೋ ನೋಡೇ ನೋಡ್ತೀವಿ. ಅಂತಹುದೇ ಒಂದು ವಿಚಿತ್ರ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಪುರೋಹಿತರು ಆರತಿಯನ್ನು ತೆಗೆದುಕೊಳ್ಳುವಂತೆ ವರನ ಮುಂದಿಟ್ಟಾಗ ಆತ ಮಾಡಿದ ಆವಾಂತರ ಕಂಡು ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ.  ಈ ವೀಡಿಯೋವನ್ನು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಫ್ಯಾಬ್ ವೆಡ್ಡಿಂಗ್ಸ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದೆ.
“ಹಿಂದು ವಿವಾಹ ಪದ್ಧತಿಯಲ್ಲಿ ಮಾಡಬಾರದ್ದೇನು?” ಎಂಬ ಶೀರ್ಷಿಕೆಯನ್ನು ನೀಡಿದೆ.

ಈ ಫನ್ನಿ ವಿಡಿಯೋದಲ್ಲಿ ಪುರೋಹಿತರು ದೇವರಿಗೆ ಆರತಿ ಮಾಡಿದ ಬಳಿಕ ಸ್ವೀಕರಿಸುವಂತೆ ಹಿಡಿದಿದ್ದಾರೆ. ಆಗ ಒಬ್ಬ ವರ ಸರಿಯಾದ ಕ್ರಮದಲ್ಲಿ ಆರತಿ ಸ್ವೀಕರಿಸಿದರೆ, ಇನ್ನೊಬ್ಬಾತ ಕೇಕ್ ಮೇಲಿನ ಕ್ಯಾಂಡಲ್ ಆರಿಸುವಂತೆ ಆರತಿಯನ್ನು ಊದಿದ್ದಾನೆ.

ಪಕ್ಕದಲ್ಲಿ ಕುಳಿತವ ಮತ್ತು ಪುರೋಹಿತರು ಒಂದು ಕ್ಷಣ ಕಕ್ಕಾಬಿಕ್ಕಿಯಾದರು. ಬಳಿಕ ಹೊಟ್ಟೆ ಹುಣ್ಣಾಗುವಂತೆ ನಕ್ಕರು. ಒಂದು ಕ್ಷಣ ಆರತಿ ಕೆಡಿಸಿದಾತ ಕೂಡ ಕಕ್ಕಾಬಿಕ್ಕಿಯಾದ. ಬಳಿಕ ಆತನೂ ಪೆದ್ದು ಪೆದ್ದಾಗಿ ನಗುವ ದೃಶ್ಯವಿದೆ. ಸಂಪ್ರದಾಯ ಆಚಾರ ವಿಚಾರಗಳನ್ನು ಸ್ವಲ್ಪ ಕಲಿತರೆ ಅದು ಕೂಡಾ ಮದುವೆ ಸಂದರ್ಭದಲ್ಲಿ ತಿಳಿದುಕೊಂಡರೆ ಮತ್ತೂ ಒಳ್ಳೆಯದು ಅಲ್ವೇ.

Leave A Reply

Your email address will not be published.