ಗ್ರಾಮೀಣ ಬ್ಯಾಂಕ್ ನಲ್ಲಿ ಬೃಹತ್ ನೇಮಕಾತಿ | ಒಟ್ಟು 8106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| ಅರ್ಜಿ ಸಲ್ಲಿಸಲು ಜೂನ್ 27 ಕೊನೆಯ ದಿನಾಂಕ
ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ) ( IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 07-06-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-06-2022
ಹುದ್ದೆಗಳ ಸಂಖ್ಯೆ : 8106
ಅರ್ಜಿ ಸಲ್ಲಿಸುವ ಬಗೆ : ಆನ್ಲೈನ್
ಹುದ್ದೆಗಳ ವಿವರ :
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್ ) : 4483
ಆಫೀಸರ್ ಸ್ಕೇಲ್-1: 2676
ಆಫೀಸರ್ ಸ್ಕೇಲ್-2 (ಅಗ್ರಿಕಲ್ಟರ್ ಆಫೀಸರ್): 12
ಆಫೀಸರ್ ಸ್ಕೇಲ್-2 (ಮಾರ್ಕೆಟಿಂಗ್ ಮ್ಯಾನೇಜರ್) :06
ಆಫೀಸರ್ ಸ್ಕೇಲ್-2(ಟ್ರೆಸರಿ ಮ್ಯಾನೇಜರ್): 10
ಆಫೀಸರ್ ಸ್ಕೇಲ್-2 ( ಲಾ) -18
ಆಫೀಸರ್ ಸ್ಕೇಲ್-2 (CA): 19
ಆಫೀಸರ್ ಸ್ಕೇಲ್-2 (IT):57
ಆಫೀಸರ್ ಸ್ಕೇಲ್-2 (ಜೆನೆರಲ್ ಬ್ಯಾಂಕಿಂಗ್ ಆಫೀಸರ್) : 745
ಆಫೀಸರ್ ಸ್ಕೇಲ್-3 : 80
ವಿದ್ಯಾರ್ಹತೆ: ಐಬಿಪಿಎಸ್ ಆರ್ಆರ್ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಸಿಎ / ಪದವಿ / ಎಂಬಿಎ (ಸಂಬಂಧಿಸಿದ ವಿಷಯ) ಪಾಸ್ ಮಾಡಿರಬೇಕು. ಆಫೀಸರ್ ಸ್ಕೇಲ್-2, 3 ಹುದ್ದೆಗಳಿಗೆ ಕಾರ್ಯಾನುಭವಗಳನ್ನು ನೋಟಿಫಿಕೇಶನ್ನಲ್ಲಿ ರೆಫರ್ ಮಾಡಬಹುದು.
ವಯೋಮಿತಿ: ಕನಿಷ್ಠ 18 ವರ್ಷ ಆಗಿರುವ, ಗರಿಷ್ಠ 40 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆವಾರು ವಯಸ್ಸಿನ ಅರ್ಹತೆಗಳನ್ನು ಅಧಿಸೂಚನೆಯಲ್ಲಿ ಓದಿ ತಿಳಿದುಕೊಳ್ಳಿ.
ವೇತನಶ್ರೇಣಿ: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ) ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ವೇತನಶ್ರೇಣಿ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ: ಎಸ್ಸಿ / ಎಸ್ಟಿ / ಅಂಗವಿಕಲ ಅಭ್ಯರ್ಥಿಗಳಿಗೆ ರೂ.175. ಸಾಮಾನ್ಯ, ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂ.850.
ಆಯ್ಕೆ ವಿಧಾನ: ಆನ್ಲೈನ್ ಪರೀಕ್ಷೆ (ಪ್ರಿಲಿಮಿನರಿ, ಮುಖ್ಯ ಪರೀಕ್ಷೆ) ಜೊತೆಗೆ, ಸಂದರ್ಶನವನ್ನು ನಡೆಸಿ ಮೇಲೆ ತಿಳಿಸಿದ ವಿವಿಧ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ಆನ್ಲೈನ್ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.