ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ ಪ್ರತಿಷ್ಠಿತ ಕಂಪನಿಯ ಅಗ್ಗದ ಹೊಸ ಸ್ಮಾರ್ಟ್ ಫೋನ್ !!

‌ಭಾರತದಲ್ಲಿ ಹೊಸ ಮೊಬೈಲ್ ಫೋನ್ ಒಂದು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. Motorola ಕಂಪೆನಿಯು Moto G82 5G ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಫೋನ್ ಈಗಾಗಲೇ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಆದ್ದರಿಂದ ಈ ಫೋನ್ ನ ವೈಶಿಷ್ಟ್ಯಗಳ ಬಗ್ಗೆ ಈಗಾಗಲೇ ಎಲ್ಲವೂ ಬಹಿರಂಗವಾಗಿದೆ.

ಈ ಹೊಸ Moto G82 5G ಫೋನ್ 6.6-ಇಂಚಿನ ಡಿಸ್ಪ್ಲೇ, 50MP ಕ್ಯಾಮೆರಾ ಮತ್ತು 5,000mAh ಬ್ಯಾಟರಿಯನ್ನು ಹೊಂದಿರಲಿದೆ. ಭಾರತದಲ್ಲಿ ಮಾತ್ರ Motorola Moto G82 5G 6GB + 128GB ಮೆಮೊರಿ ಕಾನ್ಫಿಗರೇಶನ್‌ಗಾಗಿ ಬಾಕ್ಸ್ ಬೆಲೆ 23,999 ರೂ. ಆಗಿರಲಿದೆ. ಆದರೂ ರಿಯಾಯಿತಿ ನಂತರ ಈ ಫೋನ್ ಸುಮಾರು 19,000 ರೂಪಾಯಿಗೆ ಲಭ್ಯವಿರಲಿದೆ.

Motorola Moto G82 5G 6.6-ಇಂಚಿನ 10-ಬಿಟ್ FHD+ 120Hz ಪೋಲ್ಡ್ ಡಿಸ್ಪ್ಲೇ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್, 50MP (ವೈಡ್, OIS) + 8MP (ಅಲ್ಟ್ರಾವೈಡ್) + 2MP (ಮ್ಯಾಕ್ರೋ) ಟ್ರಿಪಲ್ ಕ್ಯಾಮೆರಾ ಸಿಸ್ಟಮ್ ಮತ್ತು 16MP ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ. ಇತರ ವಿಶೇಷಣಗಳೆಂದರೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಡಾಲ್ಬಿ ಅಟ್ಮಾಸ್-ಬೆಂಬಲಿತ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಸ್ಪ್ಲಾಶ್ ರೆಸಿಸ್ಟೆನ್ಸ್ ಗಾಗಿ IP52 ರೇಟಿಂಗ್, Android 12 ಮತ್ತು 13 5G ಬ್ಯಾಂಡ್‌ಗಳು ಸೇರಿವೆ.

ಇದು 30W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದ್ದು, 5,000mAh ಬ್ಯಾಟರಿಯನ್ನು ಈ ಫೋನ್ ಹೊಂದಿದೆ. ಇದು ಗ್ರೇ ಅಥವಾ ವೈಟ್ ಲಿಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಫೋನ್ ಕೊಳ್ಳುವ ಆಯ್ಕೆಯಲ್ಲಿ ನೀವೂ ಕೂಡ ಮುಳುಗಿದ್ದರೆ ಈ ಹೊಸ ಫೋನ್ ನ ಆಯ್ಕೆ ನಿಮಗೆ ಉತ್ತಮವೆಂದು ಹೇಳಬಹುದು.

Leave A Reply

Your email address will not be published.