ನೀವು ನಿಮ್ಮ ಆಫೀಸಿನಲ್ಲಿಯೇ ಯಾರನ್ನಾದರೂ ಪ್ರೀತಿ ಮಾಡುತ್ತೀರಾ ? ಅಂಥವರು ಇದನ್ನು ಓದಲೇ ಬೇಕು!

ಪ್ರೀತಿ ಎನ್ನುವುದು ಹಾಗೆಯೇ, ಯಾವಾಗ, ಎಲ್ಲಿ ಮತ್ತು ಯಾರ ಮೇಲೆ ಹುಟ್ಟುತ್ತೆ ‌ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರ ಲೈಫ್ ನಲ್ಲಿ ಒಂದಲ್ಲ ಒಂದು ಬಾರಿ ಈ ಪ್ರೀತಿ ನಡೆಯುತ್ತೆ. ಓದುವ ಸಂದರ್ಭ ಅಥವಾ ಕೆಲಸದ ಸಂದರ್ಭದಲ್ಲಿರಬಹುದು, ಹೀಗೆ ಒಂದಲ್ಲ ಒಂದು ಸಂದರ್ಭದಲ್ಲಿ ಯಾರ ಮೇಲಾದರೂ ಲವ್ ಆಗುತ್ತೆ. ಇವತ್ತು ನಾವು ಇಲ್ಲಿ ಹೇಳೋಕೆ ಹೊರಟಿರೋದು ಆಫೀಸಿನಲ್ಲಿ ನಡೆಯೋ ಲವ್ ಬಗ್ಗೆ…

ಆಫೀಸ್‌ನಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಪ್ರೀತಿ ಹುಟ್ಟಿದರೆ,ಅದು ಮತ್ತೊಬ್ಬರಿಗೆ ಗೊತ್ತಾಗುವುದು ಕೂಡಾ ಅಷ್ಟೇ ಬೇಗ. ಗಾಸಿಪ್ ಶುರು ಆಗುತ್ತದೆ. ಗಾಸಿಪ್ ತಡೆಗಟ್ಟಲು ನೀವು ಈ ವಿಷಯಗಳನ್ನು ಯಾವತ್ತೂ ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ, ನೀವು ಕೆಲಸವನ್ನೂ ಕಳೆದುಕೊಳ್ಳುವ ಚಾನ್ಸ್ ಕೂಡ ಹೆಚ್ಚು.

ಆಫೀಸ್ ಅಥವಾ ಕಾಲೇಜು ಎಲ್ಲೇ ಇರಲಿ, ಒಂದು ಹುಡುಗ ಮತ್ತು ಹುಡುಗಿ ಜೊತೆಯಾಗಿ ಮಾತನಾಡಿದರೆ ಸಾಕು. ಅವರ ನಡುವೆ ಏನೂ ಇಲ್ಲದಿದ್ದರೂ.. ಏನೋ ಇದೆ ಎಂದು ಭಾವಿಸುವ ಬಹಳಷ್ಟು ಮಂದಿ ತುಂಬಾ ಇದ್ದಾರೆ.

ನೀವು ಕಚೇರಿಯಲ್ಲಿ ನಿಮ್ಮ ಕೊಲಿಗ್ ಜೊತೆ ಡೇಟಿಂಗ್ ಮಾಡುತ್ತಿದ್ದರೆ. ನೀವು ತುಂಬಾ ಜಾಗೃತೆ ವಹಿಸಿಕೊಳ್ಳುವುದು ಒಳ್ಳೆಯದು. ವಿಶೇಷವಾಗಿ ಏನಾದರೂ ತಪ್ಪಾದರೆ ಅದು ನಿಮ್ಮ ಕರಿಯರ್ ಗೆ ಮುಳುವಾಗಬಹುದು ಅನ್ನೋದು ನೆನಪಿರಲಿ. ಕೆಲವೊಮ್ಮೆ ನೀವು ನಿಮ್ಮ ಕೆಲಸಕ್ಕೆ ಕುತ್ತು ಕೂಡಾ ತರಬಹುದು.

ಕಚೇರಿಯ ಹೊರಗೆ ಎಷ್ಟು ಸಮಯ ಕಳೆದರೂ ನೀವಿಬ್ಬರು ತೊಂದರೆ ಇಲ್ಲ. ಆದರೆ ನೀವು ಕಚೇರಿಯೊಳಗೆ ಮಾತ್ರ ಆದಷ್ಟು ಪ್ರೊಫೆಶನಲ್ ಆಗಿರಿ. ನಿಮ್ಮಿಬ್ಬರ ನಡುವೆ ನಡೆದ ಯಾವುದೇ ವಿಷಯಗಳನ್ನು ಕೆಲಸದ ಸಮಯದಲ್ಲಿ ತರಲೇಬಾರದು. ಏಕೆಂದರೆ ನಿಮ್ಮ ವಿಷಯಗಳು ಕಚೇರಿ ಕೆಲಸದ ಮೇಲೆ ಪರಿಣಾಮ ಬೀರುತ್ತವೆ. ಆಗ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದು ಆಫೀಸ್ ನಲ್ಲಿ ನಿಮ್ಮ ಮೇಲೆ ನೆಗೆಟಿವ್ ಎಫೆಕ್ಟ್ ಬೀರುವ ಸಾಧ್ಯತೆ ಹೆಚ್ಚು.

ನಿಮಗೇನಾದರೂ ಆಫೀಸಿನಲ್ಲಿ ಯಾರ ಮೇಲಾದರೂ ಪ್ರೀತಿಯಾದರೆ ನಿಮ್ಮ ಸಂಬಂಧದ ಬಗ್ಗೆ ಇತರರಿಗೆ ಹೇಳದೇ ಇರುವುದು ಉತ್ತಮ. ಸಾಮಾನ್ಯವಾಗಿ, ಯಾರಾದರೂ ಪ್ರೀತಿಯಲ್ಲಿದ್ದಾಗ, ಅವರು ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಈ ವಿಷಯಗಳ ಬಗ್ಗೆ ಹೇಳುತ್ತಾರೆ. ಇದು ಒಳ್ಳೆಯ ವಿಷಯವಾಗಿದ್ದರೂ ಕೂಡಾ, ನಿಮ್ಮ ಆಫೀಸ್ ನ ಹುಡುಗಿಯನ್ನೇ ನೀವು ಪ್ರೀತಿಸುತ್ತಿದ್ದರೆ, ಕಚೇರಿಯಲ್ಲಿ ಈ ವಿಷಯ ಬಗ್ಗೆ ಸಾಧ್ಯವಾದಷ್ಟು ಚರ್ಚಿಸದಿರುವುದು ಉತ್ತಮ.

ನಿಮ್ಮಿಬ್ಬರ ಮಧ್ಯೆ ಯಾವುದೇ ಜಗಳಗಳಾದಲ್ಲಿ ಅದರ ಬಗ್ಗೆ ಯಾರಿಗೂ ಹೇಳಬೇಡಿ. ಯಾವುದೇ ಸಂಬಂಧವಿರಲಿ ಮನಸ್ತಾಪ ಬಂದೇ ಬರುತ್ತವೆ. ಪ್ರೀತಿ ಇರುವಲ್ಲಿ ಜಗಳ ಮತ್ತು ಸಂಘರ್ಷ ಇರೋದು ಸಾಮಾನ್ಯ. ನೀವು ನಿಮ್ಮ ಕಲೀಗ್ ಜೊತೆ ಡೇಟಿಂಗ್ ಮಾಡುತ್ತಿರುವಾಗ ಜಗಳವಾದರೆ, ಇದನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ವಿಶೇಷವಾಗಿ ಆಫೀಸ್ ನಲ್ಲಿ ಇದನ್ನು ಹೇಳಲೇ ಬಾರದು. ಇತರರೊಂದಿಗೆ ಹಂಚಿಕೊಂಡರೆ ನಿಮ್ಮ ಮೇಲೆ ನಿಮ್ಮ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತೆ. ಅದಕ್ಕಾಗಿಯೇ ನಿಮ್ಮ ಪರ್ಸನಲ್ ವಿಷಯಗಳನ್ನು ಆಫೀಸ್ ನಿಂದ ದೂರ ಇರಿಸಿ.

ನೀವು ಡೇಟಿಂಗ್ ಮಾಡುತ್ತಿದ್ದರೆ, ಆಫೀಸ್ ನಲ್ಲಿದ್ದಾಗ ಸಂಗಾತಿಯ ಬಗ್ಗೆ ಯೋಚನೆ ಖಂಡಿತಾ ಬರುತ್ತೆ. ಆಗ ಒಂದು ಸಣ್ಣ ಮೆಸೇಜ್ ಕಳುಹಿಸಿ. ಆಫೀಸ್ ನ ಎಲ್ಲಾ ಒತ್ತಡ ದೂರ ಹೋಗುತ್ತದೆ. ಸಂಗಾತಿ ಜೊತೆ ಮಾತನಾಡಲು ಕಚೇರಿ ಮೇಲ್ ಬಳಸದೇ ಇರುವುದು ಉತ್ತಮ. ಇದು ಬೇರೆಯವರಿಗೆ ತಿಳಿಯಬಹುದು.

Leave A Reply

Your email address will not be published.