ಮೊನ್ನೆ ಉಡುಪಿಯಲ್ಲಿ ಫಸ್ಟ್ ನೈಟ್ ನ ಪ್ರಯುಕ್ತ ಎದ್ದಿತ್ತು ; ಇಂದು ಮಂಗಳೂರಿನಲ್ಲಿ ಮದುವೆಯ ಶುಭ ಹಾರೈಕೆಗಾಗಿ ಎದ್ದು ನಿಂತಿತು- ತಮಾಷೆಯ ಬ್ಯಾನರ್ !

ಮತ್ತೆ ದೊಡ್ಡದಾಗಿ ಎದ್ದಿದೆ; ಮೊನ್ನೆ ಫಸ್ಟ್ ನೈಟಿನ ನಿಮಿತ್ತ ಎದ್ದಿತ್ತು‌. ಇವತ್ತು ಮದುವೆ ಸಂದರ್ಭ ಎದ್ದು ನಿಂತಿದೆ – ಬ್ಯಾನರು!!

ಇವತ್ತು ತಮ್ಮ ಜೀವದ ಗೆಳೆಯನ ಸಾಂಸಾರಿಕ ಪಯಣದ ದಿನಗಣನೆಯ ನೆಪದಲ್ಲಿ ಮಿತ್ರರು ತಮ್ಮ ಕ್ರಿಯೇಟಿವಿಟಿ ಯನ್ನು ಜಗಜ್ಜಾಹೀರು ಮಾಡಿದ್ದಾರೆ. ಅವರ ಮಿತ್ರ ಮದುವೆಯಾಗುತ್ತಿದ್ದಾರಂತೆ. ತುಂಬಾ ಖುಷಿಯಿಂದ ಒಂದಿಷ್ಟು ನಂಜಿನಿಂದ ಗೆಳೆಯರೆಲ್ಲ ಸೇರಿ ಕಟೌಟ್ ಹಾಕಿದ್ದಾರೆ.

ಕೆಜೆ ಪೀಠದ ಅಧಿಪತಿ, ಗ್ರೂಪಿನ ಸ್ಟ್ರಾಂಗ್ ಪಿಲ್ಲರ್, ಅಖಿಲ ಭಾರತೀಯ ಸೋಡ ಸಂಘದ ಅಧ್ಯಕ್ಷ, ರಸಿಕರ ರಾಜ, ಬೋರಿ (ಗೂಳಿ) ಮಾರ್ತಾಂಡ, ಬೋರಿ ಸಾರ್ವಭೌಮ, ಬೋರಿ ಕುಲತಿಲಕ, ರಣಭೋರೇಶ್ವರ, ಅಮ್ಮೆರ್ನ ಮೋಕೆದ ಮುಗ್ಧ ( ಅಪ್ಪನ ಪ್ರೀತಿಯ ಮಗ) ಬಾಲೆ, ನಮ್ಮ ಮೋಕೆದ ಗೆಳೆಯ ಬಿಡದಿಯ ನಿತ್ಯಾನಂದ ಸ್ವಾಮಿಯ ಶಿಷ್ಯ, ಪದಗಳ ಮೂಲಕವೇ ಚೆಂದುಳ್ಳಿ ಪರ್ಲುಗಂಟಿನ (ಚಂದುಳ್ಳಿ) ಹುಡುಗಿಯರ ಹಾಗೂ ಆಂಟಿಯರ ಮನಗೆಲ್ಲುವ ಪ್ರತಿಭಾವಂತ, ಕಣ್ಣ ನೋಟದಿಂದಲೇ ಮೋಡಿ ಮತ್ತು ಮಂಗ ಮಾಡುವ ಕಲಾರಸಿಕ, ಮಂಗಳೂರಿನ ಎಲ್ಲಾ ಪ್ರೇಮಿಗಳ ತಾಣವನ್ನು ಅಣು ಅಣುವಾಗಿ ಅರಿತ ನಾವಿಕ ! ಇದು ಮದುವೆಯಾಗುತ್ತಿರುವ ಹೀರೋನ ಒಂದಿಷ್ಟು ಹಿರಿಮೆ.

ಮದುವೆ ಗಂಡಿನ ಕಲ್ಯಾಣ ಗುಣಗಳು ಇಷ್ಟಕ್ಕೆ ಸೀಮಿತವಾಗಿಲ್ಲ.
ಆತ ಹುಟ್ಟುತ್ತಲೇ ಆಸ್ಪತ್ರೆಯ ನರ್ಸ್ ಮತ್ತು ಇತರ ಹೆಣ್ಣುಮಕ್ಕಳೊಂದಿಗೆ ಸೇಲೆಕಟ್ಟಲು ಶುರು ಮಾಡಿದವನು. ಅದಕ್ಕೇ ಆತನಿಗೆ ಸೇಲೇಶ್ ಎಂದು ನಾಮಕರಣ ಮಾಡಲಾಯಿತು. ಮುಂದೆ ತನ್ನ ಪರಾಕ್ರಮದಿಂದಲೇ ಜಯೇಶ್ (ಊರಿನ ಹೆಸರು ಅಡಗಿಸಲಾಗಿದೆ) ಎಂಬ ಹೆಸರಿನಿಂದ ಜಗತ್ಪ್ರಸಿದ್ಧವಾದರು. ಎಂದು ತಮ್ಮ ಮಿತ್ರ ಬಗ್ಗೆ ಬಗ್ಗೆ ಪೌರಾಣಿಕ ಭಾಷೆಯಲ್ಲಿ ಹೆಮ್ಮೆಯಿಂದ ಬರೆಯುತ್ತಾರೆ ತುಂಟ ಗೆಳೆಯರು.

ಈಗ ಮದುವೆಯಾಗುತ್ತಿರುವ ಜೀವದ ಗೆಳೆಯ ಅಂತಿಂಥವನಲ್ಲ. ಕರಾವಳಿಯ ಪ್ರಸಿದ್ಧ ಪುಂಡಿಸ್ ( ತುಂಬಾ ಹೆಚ್ಚು ಹೊತ್ತು ಹುಡುಗಿಯರಲ್ಲಿ ಮಾತನಾಡುತ್ತಾ ಫೋನಿನಲ್ಲಿ ಕಾಳ ಕಳೆಯುವವರಿಗೆ ಪುಂಡಿ ಬೇಯಿಸುವವರು ಎನ್ನುವುದು.  ಯುವ ತುಳು ನಿಘಂಟಿನ ಒಂದು ಭಾಗ ಈ ಪುಂಡಿ. ಪುಂಡಿ ಅಂದರೆ ಕಡುಬು. ಕಡುಬು ಬೇಯಿಸಲು ಜಾಸ್ತಿ ಸಮಯ ಹಿಡಿಯುತ್ತದೆ, ಹಾಗೆಯೇ ಹುಡುಗ ಹುಡುಗಿ ಮಾತಾಡಿದ್ರೆ ಸಮಯ ಜಾಸ್ತಿ ಹೋಗುತ್ತೆ !! ) ವಿಶ್ವವಿದ್ಯಾನಿಲಯದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದು ಪುಂಡಿ ಲೋಕದಲ್ಲಿ ಮಿಂಚಿ ಭೂತಕ್ಕೆ ಬಿಟ್ಟ ಬೋರಿಯಂತೆ (ಗೂಳಿಯಂತೆ) ಮೇಯ್ಕೊಂಡು ಇದ್ದ ನಮ್ಮ ಬೋರಿಗೆ ಇಂದು ಮದುವೆಯ ಸಂಭ್ರಮ. ಇದೀಗ ಇವೆಲ್ಲ ರಂಪಾಟಕ್ಕೆ ಬ್ರೇಕ್ ಹಾಕಿ ಕೆಜೆ ಮಹಾ ಗ್ರೂಪಿನ ನಾವೆಲ್ಲರೂ ಮೂಗುದಾರ ಹಾಕುವ ಸಮಯ ಎಂದಿದ್ದಾರೆ ಕಿಲಾಡಿ ತರುಣರು.
“ಬ್ರೋ, ಪೋಡಿಯುನ ದಾಲ ಇಜ್ಜಿ ( ಹೆದರುವುದಕ್ಕೆ ಏನೂ ಇಲ್ಲ), ಏಕಾಗ್ರತೆ, ನೇರದೃಷ್ಟಿ ಕೋನ, ಆತ್ಮ ವಿಶ್ವಾಸ ಬೊಕ್ಕ ಕಾರ್‌ದ ಪೊಟ್ಟೆ‌ಡ್ ಬಲ ( ಕಾಲಿನ ಮೀನಖಂಡ ದಲ್ಲಿ ಶಕ್ತಿ), ಸುತ್ತು ಲೆಕ್ಕ ಮಲ್ಪರ ಆಪುನ ಫ್ಯಾನ್ ಇತ್ತಂಡ ಆಂಡ್.
ಇನ್ಸ್ಟಾಗ್ರಾಮ್ ನಲ್ಲಿ ಮೇಸಜ್ ಮಾಡಿ, ಫೇಸ್ಬುಕ್ ನಲ್ಲಿ ರಿಕ್ವೆಸ್ಟ್ ಕಳಿಸಿ, ವಾಟ್ಸಪ್ ನಲ್ಲಿ ಫೋನ್ ನಂಬರ್ ನಟ್ಟಿ ಕೈಚೆಲ್ಲಿ ಕುಳಿತ ನಮ್ಮ ಕುವರನ ಬಾಳಿಗೆ ಮಹಾಲಕ್ಷ್ಮಿಯ ಆಗಮನ, ನಿನ್ನ ಮುಂದಿನ ಜೀವನ ಸುಖವಾಗಿರಲೆಂದು ಹಾರೈಸಿದ್ದಾರೆ. ಅಲ್ಲದೆ, ಮದುವೆಯ ದಿನವಾದ ನಿನ್ನೆಯಿಂದ ಇನ್ನೊಂದು ತಿಂಗಳು ಅವರ ಊರಿನ ಪರಿಸರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆಯಂತೆ. ಕಾರಣ ಏನೆಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಬ್ಯಾನರ್ ಗಮನಿಸಿ. ಹೀಗೆ, ಕುಶಾಲ್ ಜವನೆರ್ – ಕೆ.ಜೆ. ಎಂದು ಬ್ಯಾನರ್ ಪ್ರಿಂಟ್ ಮಾಡಿ, ರಸ್ತೆಯಲ್ಲಿ ಪೋಸ್ಟರ್ ಹಾಕಿ ಗೆಳೆಯನಿಗೆ ಮದುವೆ ಶುಭಾಶಯ ಕೋರಿದ್ದಾರೆ. ಅವರ ಮಾತುಗಳಲ್ಲಿ ಬಹಳಷ್ಟು ಹುಡುಗುತನ, ಒಂದಷ್ಟು ಪೋಲಿತನ, ಮತ್ತಿಷ್ಟು ಸಾಹಿತ್ಯಿಕ ಅಂಶಗಳಿರುವ ಕಾರಣ ಈ ಮೂಲಕ ಆ ಗೆಳೆಯರ ಗುಂಪಿಗೆ ನಮ್ಮದೂ ಒಂದು ಹೊಸ ಸೇರ್ಪಡೆ.

Leave A Reply

Your email address will not be published.