ಮತ್ತೆ ಸ್ಯಾಟಲೈಟ್ ಫೋನ್ ನ ರಿಂಗಣಕ್ಕೆ ಬೆಚ್ಚಿಬಿದ್ದ ಮಂಗಳೂರು !! | ಕರಾವಳಿಗೆ ಕಾದಿದೆಯೇ ಗ್ರಹಚಾರ ??
ಮಂಗಳೂರು: ರಾಜ್ಯ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮತ್ತೆ ಸ್ಯಟಲೈಟ್ ಫೋನ್ ಮತ್ತೆ ರಿಂಗಣಿಸಿದೆ. ಹತ್ತು ದಿನಗಳ ಅಂತರದಲ್ಲಿ ನಾಲ್ಕೂ ಕಡೆಗಳಲ್ಲಿ ಈ ಸಿಕ್ರೇಟ್ ಫೋನ್‍ನ ಲೊಕೇಷನ್ ಟ್ರೇಸ್ ಆಗಿದೆ. ಮೊದಲೇ ಧರ್ಮ ಯುದ್ಧದಿಂದ ಸಂತ್ರಸ್ತ ಜಿಲ್ಲೆಗಳಲ್ಲಿ ಇದೀಗ ಸ್ಯಾಟಲೈಟ್ ಫೋನ್ ಸದ್ದೆಬ್ಬಿಸಿದೆ.
ರಾಜ್ಯ ಕರಾವಳಿ ಮತ್ತು ಮಲೆನಾಡಿನಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಆಕ್ಟೀವ್ ಆಗಿದೆ. ದಕ್ಷಿಣಕನ್ನಡ ಜಿಲ್ಲೆಯ ಎರಡು ಕಡೆ, ಉತ್ತರಕನ್ನಡ, ಚಿಕ್ಕಮಗಳೂರು ಜಿಲ್ಲೆಯ ಒಂದೊಂದು ಕಡೆ ಈ ಸೀಕ್ರೆಟ್ ಫೋನ್ ರಿಂಗ್ ಆಗಿದೆ. ಕರಾವಳಿಯ ದಟ್ಟಾರಣ್ಯ ಪ್ರದೇಶಗಳಲ್ಲಿ ಸ್ಯಾಟಲೈಟ್ ಫೋನ್ ಇಂಟರ್‍ಸೆಪ್ಟ್ ಆಗಿರುವ ಬಗ್ಗೆ ಆಂತರಿಕ ಭದ್ರತಾ ದಳದ ಅಧಿಕಾರಿಗಳಿಗೆ ಕೇಂದ್ರ ಬೇಹುಗಾರಿಕಾ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಯಲ್ಲಾಪುರ-ಸಿರಸಿಯ ಮಧ್ಯ ಇರುವ ದಟ್ಟಾರಣ್ಯ ಪ್ರದೇಶದಲ್ಲಿ ಇದರ ಲೊಕೇಶನ್ ಟ್ರೇಸ್ ಆಗಿದೆ. ಮಂಗಳೂರಿನಲ್ಲಿ ನಗರ ಹೊರವಲಯದ ನಾಟೆಕಲ್, ಕುಳಾಯಿಯಲ್ಲಿ ನಿಗೂಢ ವ್ಯಕ್ತಿಗಳು ಈ ಫೋನ್ ಮೂಲಕ ಸಂಪರ್ಕ ಸಾಧಿಸಿದ್ದಾರೆ. ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿದ ನಿಗೂಢ ವ್ಯಕ್ತಿಗಳ ಶೋಧ ಕಾರ್ಯಕ್ಕೆ ಆಂತರಿಕ ಭದ್ರತಾ ದಳದ ಅಧಿಕಾರಿಗಳು ಇಳಿದಿದ್ದಾರೆ. ಇದು, ಮೇ 23 ರಿಂದ ಮೇ 29ರ ಅಂತರದಲ್ಲಿ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿರುವ ಮಾಹಿತಿ ಇದೆ. ನೆಟ್ ವರ್ಕ್ ಇಲ್ಲದ ಪ್ರದೇಶಗಳಲ್ಲಿ ಈ ಸ್ಯಾಟಲೈಟ್ ಪೋನ್ ಬಳಕೆ ಕುರಿತಾದ ನಿಗೂಢ ಕರೆಗಳನ್ನು ಭದ್ರತಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.
ಸಾಮಾನ್ಯವಾಗಿ ಹಡಗಿನಲ್ಲಿರುವ ಕ್ಯಾಪ್ಟನ್‍ಗಳಿಗೆ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಈ ಫೋನ್ ಬಳಕೆ ಮಾಡುವುದಕ್ಕೆ ಅವಕಾಶವಿದೆ. ಆದರೆ ದಟ್ಟಾರಣ್ಯ ಪ್ರದೇಶದಲ್ಲಿ ಇಂತಹ ಫೋನ್ ಆಕ್ಟೀವ್ ಆಗಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕರಾವಳಿ ಭಾಗದಲ್ಲಿ ಉಗ್ರರ ಸ್ಲೀಪರ್ ಸೆಲ್‍ಗಳು ವರ್ಕ್ ಮಾಡುತ್ತಿದೆಯಾ ಎಂಬ ಸಂಶಯವನ್ನು ಮೂಡಿಸಿದೆ. ಇದರ ಜೊತೆ ನಕ್ಸಲ್ ಚಟುವಟಿಕೆ ನಡೆಸುತ್ತಿರುವವರು ಈ ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಿದ್ದಾರೆಯ ಎಂಬ ಪ್ರಶ್ನೆಯನ್ನು ಮೂಡಿಸಿದೆ. ಚಿಕ್ಕಮಗಳೂರಿನಲ್ಲಿ ಕಡೂರು-ಬೀರೂರು ನಡುವಿನ ಅರಣ್ಯ ಪ್ರದೇಶದಲ್ಲಿ ಇದು ಯೂಸ್ ಆಗಿರುವುದು ಈ ಸಂಶಯಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ. ಕಳೆದ ವರ್ಷ ಜನವರಿ ತಿಂಗಳಲ್ಲಿ 10 ದಿನಗಳಲ್ಲಿ ಮೂರು ಬಾರಿ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಇದೀಗ ಮತ್ತೆ ಈ ಸ್ಯಾಟಲೈಟ್ ಕರೆ ಸದ್ದು ಮಾಡಿರೋದು ಆತಂಕಕ್ಕೆ ಕಾರಣವಾಗಿದೆ.