ಬರೋಬ್ಬರಿ 6 ಕೋಟಿಗೂ ಅಧಿಕ ಬೆಲೆಗೆ ಹರಾಜಾದ “ಮುತ್ತಿನ” ನೆಕ್ಲೆಸ್ ; ಅಷ್ಟಕ್ಕೂ ಅಂಥದ್ದೇನಿದೆ ಇದರಲ್ಲಿ?
ಮುತ್ತು ಬಲು ಬೆಳೆಬಾಳುವ ಆಭರಣ ಎಂದರೆ ತಪ್ಪಿಲ್ಲ. ಅಂತಹ ಒಂದು ಅಪರೂಪದ ಆಭರಣದ ಹಾರವೊಂದು ಕೋಟಿಗಟ್ಟಲೇ ಬೆಲೆಗೆ ಹರಾಜಾಗಿದೆ ಅಂದರೆ ನಂಬುತ್ತೀರಾ ? ಅದು ಕೂಡಾ ಬರೋಬ್ಬರಿ 6 ಕೋಟಿಗಿಂತ ಅಧಿಕ.
ಇತ್ತೀಚೆಗೆ ಆನ್‌ಲೈನ್ ಹರಾಜೊಂದರಲ್ಲಿ ಅಪರೂಪದ, ನೈಸರ್ಗಿಕ ಮುತ್ತಿನ ಹಾರವೊಂದು 6 ಕೋಟಿಗೂ ಹೆಚ್ಚು ಬೆಲೆಗೆ ಮಾರಾಟವಾಗಿದೆ. ಇವುಗಳು ಅತೀ ಅಪರೂಪದ ಮುತ್ತು. ಈ ನೈಸರ್ಗಿಕ ಮುತ್ತುಗಳ ಆಭರಣಗಳು ವಿಂಟೇಜ್ ಮತ್ತು ಚರಾಸ್ತಿ ಆಭರಣಗಳ ಸಂಗ್ರಹಕಾರರಿಂದ ಹೆಚ್ಚು ಬೇಡಿಕೆಯಲ್ಲಿರುವ ಆಭರಣ ಎಂದರೆ ತಪ್ಪಾಗಲಾರದು.
ಈ ಮೂರು ಸಾಲಿನ ನೈಸರ್ಗಿಕ ಮುತ್ತಿನ ಹಾರ 6,24,91,000 ರೂ.ಗೆ ಹರಾಜಾಗಿದೆ. ಈ ನೆಕ್ಲಸ್ ಅಸ್ತಾಗುರು ಹೇರ್‌ಲೂಮ್ ಆಭರಣದ ಭಾಗವಾಗಿದೆ. ಅಸ್ತಾಗುರು ಅವರ ಚರಾಸ್ತಿ ಆಭರಣ ಇದಾಗಿದೆ. ಬೆಳ್ಳಿ ಮತ್ತು ಟೈಮ್‌ಪೀಸ್‌ಗಳು ಈ ನೆಕ್ಲೆಸ್‌ನ ಭಾಗವಾಗಿದ್ದು, ಹಳೆಯ ಕಟ್ ವಜ್ರಗಳ ಜೊತೆ ಚಿನ್ನದ ಕೊಕ್ಕೆ ಮುಖದ ಸ್ಫಟಿಕ ಡಿಸ್ಕ್‌ಗಳು ಹಾಗೂ ಅಂತರ್ಗತವಾಗಿರುವ ನೈಸರ್ಗಿಕ ಉಪ್ಪು ನೀರಿನ ಈ ನೆಕ್ಲಸ್ ಇದು.
ಎರಡು ವಿಭಿನ್ನ ಬಣ್ಣಗಳನ್ನು ಹೊಂದಿರುವ ಈ ನೈಸರ್ಗಿಕ ಮುತ್ತುಗಳನ್ನು ತುಂಬಾ ಅಪರೂಪದ ಶೋಧನೆ ಎಂದು ಹೇಳಲಾಗುತ್ತಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಈ ಮುತ್ತುಗಳ ಕೊರತೆ ಇದೆಯಂತೆ. ಹಾಗಾಗಿ ನೈಸರ್ಗಿಕ ಮುತ್ತುಗಳ ಆಭರಣಗಳು ವಿಂಟೇಜ್ ಮತ್ತು ಚರಾಸ್ತಿ ಆಭರಣಗಳ ಸಂಗ್ರಹಕಾರರಿಂದ ಬಹಳಷ್ಟು ಅಷ್ಟೇ ಏಕೇ ಹೆಚ್ಚು ಬೇಡಿಕೆ ಇದೆ ಎಂದು ಹೇಳಬಹುದು. ಇದು ನೆಕ್ಲೇಸ್ ಹರಾಜಿನಲ್ಲಿಯೇ ಅತ್ಯಂತ ಮಹತ್ವದ ಮಾರಾಟವಾಗಿದೆ. ಇದು ಹರಾಜು ಕ್ಯಾಟಲಾಗ್‌ನ ಮುಖಪುಟದಲ್ಲಿಯೂ ಕಾಣಿಸಿಕೊಂಡಿದೆ.
ಈ ಹರಾಜಿನಲ್ಲಿ 1,48,00,500 ರೂ.ಗಳಲ್ಲಿ ಸ್ವಾಧೀನಪಡಿಸಿಕೊಂಡ ಮತ್ತೊಂದು ಸೊಗಸಾದ ಐದು ಸಾಲುಗಳ ನೈಸರ್ಗಿಕ ಮುತ್ತಿನ ಹಾರವನ್ನು ಹರಾಜಿಗಿಡಲಾಯಿತು. ಈ ನೆಕ್ಲೇಸ್ ಅನ್ನು 453 ನೈಸರ್ಗಿಕ ಮುತ್ತುಗಳನ್ನು ಬಳಸಿ ನಿರ್ಮಿಸಲಾಗಿತ್ತು.