ವೈದ್ಯಕೀಯ ಸಹಾಯವಿಲ್ಲದೆ ಸಮುದ್ರದ ಅಲೆಗಳ ನಡುವೆ ಮಗುವಿಗೆ ಜನ್ಮ ನೀಡಿದ ಮಹಾತಾಯಿ !!- ವೀಡಿಯೋ ವೈರಲ್
ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡುವುದು ಸುಲಭದ ಮಾತಲ್ಲ. ಮಗುವಿಗೆ ಜನ್ಮ ನೀಡಬೇಕೆಂದರೆ ತಾಯಿ ತನ್ನ ಜೀವವನ್ನೇ ಪಣಕ್ಕಿಡಬೇಕಾಗುತ್ತದೆ. ಆದರೆ ಕೆಲವೊಮ್ಮೆ ಸೃಷ್ಟಿಯ ನಿಯಮವೇ ಬೇರೆ ಇರುತ್ತದೆ. ಯಾವುದೇ ತೊಂದರೆ ಅನುಭವಿಸದೆ, ವೈದ್ಯರ ಸಹಾಯವಿಲ್ಲದೆಯೇ ಸಮುದ್ರದಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು. ಅಚ್ಚರಿಯಾದರೂ ಇದು ಸತ್ಯ. ಯಾವುದೇ ವೈದ್ಯಕೀಯ ಸಹಾಯವಿಲ್ಲದೆ ಮಹಿಳೆಯು ಪೆಸಿಫಿಕ್ ಮಹಾಸಾಗರದಲ್ಲಿ ಗಂಡು ಮಗುವಿಗೆ ಜನ್ಮನೀಡಿದ ವೀಡಿಯೋಗಳನ್ನು ಹಂಚಿಕೊಂಡಿದ್ದು, ಇಂಟರ್ ನೆಟ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಸುಮಾರು 37 ವರ್ಷದ ಜೋಸಿ ಪ್ಯೂಕರ್ಟ್ ಎಂಬಾಕೆ ನಿಕರಾಗುವಾ ಪ್ಲಾಯಾ ಮಜಗುವಲ್ ತೀರದಲ್ಲಿ ತನ್ನ ಹೆರಿಗೆಯ ದಿನದ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾಳೆ.ಯಾವುದೇ ವೈದ್ಯಕೀಯ ಸಹಾಯವಿಲ್ಲದೆ ಮಗುವಿಗೆ ಜನ್ಮನೀಡಿರುವ ಮಹಿಳೆ, ತನ್ನ ಗರ್ಭವಾಸ್ಥೆಯಲ್ಲಿ ಎಲ್ಲಾ ರೀತಿಯ ಸ್ಕ್ಯಾನ್ ಗಳನ್ನು ತಿರಸ್ಕರಿಸಿದ್ದಳಂತೆ. ತಾನು ನನ್ನ ಗರ್ಭವಾಸ್ಥೆಯ ಬಗ್ಗೆ ತುಂಬಾ ಸ್ಟಡಿ ಮಾಡಿದ್ದೇನೆ. ಸುರಕ್ಷಿತವಾಗಿ ಹೆರಿಗೆ ಆಗುವುದಾಗಿ ನನಗೆ ತಿಳಿದಿತ್ತು ಎಂದು ಜೋಸಿ ಪ್ಯೂಕರ್ಟ್ ಹೇಳಿದ್ದಾಳೆ.