ಚೌಡಮ್ಮನ ದೇವಸ್ಥಾನದಲ್ಲಿ ಹೆಣ್ಣುಮಗು ಪತ್ತೆ | ಮಹಿಳಾ ಮತ್ತು ಮಕ್ಕಳ ಆರೋಗ್ಯ ಇಲಾಖೆಗೆ ರವಾನೆ

Share the Article

ಜಗಳೂರ ತಾಲ್ಲೂಕಿನ ಗೊಪಗೂಂಡನಹಳ್ಳಿಯ ಮುಖ್ಯ ರಸ್ತೆ ಪಕ್ಕದಲ್ಲಿರುವ ಚೌಡಮ್ಮನ ದೇವಸ್ಥಾನದಲ್ಲಿ ಬೆಳಿಗ್ಗೆ ಒಂದು ಹೆಣ್ಣು ಮಗು ಕಂಡುಬಂದಿದೆ.

ಮಗು ಆರೋಗ್ಯ ವಾಗಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ನಾಗರಾಜ್ ರವರು ತಿಳಿಸಿದ್ದಾರೆ. ಮಗುವನ್ನು ಮಹಿಳಾ ಮತ್ತು ಮಕ್ಕಳ ಆರೋಗ್ಯ ಅಭಿವೃದ್ಧಿ ಇಲಾಖೆಯು ತಮ್ಮ ಸುಪರ್ದಿಗೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ಇನ್ನು ಮಗುವಿನ ವಾರಸುದಾರರ ಬಗ್ಗೆ ತನಿಖೆಯಿಂದ ತಿಳಿಯಬೇಕಾಗಿದೆ.

Leave A Reply