ನಾನು ಸಾಕ್ಷಾತ್ ಪಾರ್ವತಿ ದೇವಿಯ ಅವತಾರ, ಶಿವನನ್ನು ಮದುವೆಯಾಗಲು ಬಂದಿದ್ದೇನೆ | ಗಡಿಯಲ್ಲಿ ಮಹಿಳೆಯಿಂದ ವಿಚಿತ್ರ ಕಿರಿಕ್ !!

ಭಾರತದ ಗಡಿ ಪ್ರದೇಶದಲ್ಲಿ ಮಹಿಳೆಯೊಬ್ಬಳು ಹುಚ್ಚಾಟ ಮೆರೆದಿದ್ದಾಳೆ. ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ನೋದ ಮಹಿಳೆಯೊಬ್ಬರು ತಾನು ಪಾರ್ವತಿ ದೇವಿಯ ಅವತಾರವಾಗಿದ್ದೇನೆ. ಕೈಲಾಸ ಪರ್ವತದಲ್ಲಿರುವ ಶಿವನನ್ನು ತಾನೇ ಮದುವೆಯಾಗುವುದಾಗಿ ಹಠ ಹಿಡಿದು ಕುಳಿತಿರುವ ವಿಚಿತ್ರ ಘಟನೆ ಭಾರತ ಮತ್ತು ಚೀನಾ ಗಡಿಯ ಸಮೀಪವಿರುವ ನಾಭಿದಾಂಗ್‍ವನ ಗುಂಜಿಯಲ್ಲಿ ನಡೆದಿದೆ.

ಹರ್ಮಿಂದರ್ ಕೌರ್ ಎಂಬಾಕೆಯೇ ಕಿರಿಕ್ ಮಹಿಳೆ. ಈಕೆ ಉತ್ತರ ಪ್ರದೇಶದ ಅಲಿಗಂಜ್ ಪ್ರದೇಶದ ನಿವಾಸಿಯಾಗಿದ್ದಾರೆ. ಗುಂಜಿ ಕೈಲಾಸ-ಮಾನಸ ಸರೋವರದ ಹಾದಿಯಲ್ಲಿದೆ. ಇವಳನ್ನು ನಿರ್ಬಂಧಿತ ಪ್ರದೇಶದಿಂದ ಆಚೆ ಹಾಕಲು ಪೊಲೀಸ್ ತಂಡ ಹೋಗಿತ್ತು. ಆದರೆ ಹಮಿರ್ಂದರ್ ಕೌರ್ ಪೊಲೀಸರಿಗೆ ಆತ್ಮಹತ್ಯೆಯ ಬೆದರಿಕೆಯನ್ನು ಹಾಕಿದ್ದಾಳೆ. ಇದರಿಂದಾಗಿ ಆ ಪೊಲೀಸ್ ತಂಡ ವಿಧಿ ಇಲ್ಲದೇ ವಾಪಸ್ ಬರಬೇಕಾಯಿತು.

ಅಷ್ಟೇ ಅಲ್ಲದೇ ಹರ್ಮಿಂದರ್ ತಾನು ಪಾರ್ವತಿ ದೇವಿಯ ಅವತಾರ. ಶಿವನನ್ನು ಮದುವೆಯಾಗಲು ಬಂದಿದಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಇದರಿಂದಾಗಿ ಪೊಲೀಸರು ಹರ್ಮಿಂದರ್ ಅವರು ಮಾನಸಿಕವಾಗಿ ಸ್ಥಿರವಾಗಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಈ ಬಗ್ಗೆ ಅಲ್ಲಿನ ಪೊಲೀಸ್ ಅಧಿಕಾರಿ ಮಾತನಾಡಿ, 15 ದಿನಗಳ ಅನುಮತಿಯ ಮೇರೆಗೆ ತಾಯಿಯೊಂದಿಗೆ ಈ ಪ್ರದೇಶಕ್ಕೆ ಬಂದಿದ್ದರು. ಆದರೆ ಅವರು ಅಲ್ಲಿ ವಾಸವಾಗಲು ಅವಧಿ ಮುಗಿದರೂ ನಿರ್ಬಂಧಿತ ಪ್ರದೇಶವನ್ನು ತೊರೆಯಲು ನಿರಾಕರಿಸಿದ್ದಾರೆ. ಹರ್ಮಿಂದರ್‌ನ್ನು ನಿರ್ಬಂಧಿತ ಪ್ರದೇಶದಿಂದ ಕರೆತರಲು ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳನ್ನು ಒಳಗೊಂಡ ಮೂವರ ಪೊಲೀಸ್ ತಂಡವನ್ನು ಧಾರ್ಚುಲಾದಿಂದ ಕಳುಹಿಸಲಾಗಿತ್ತು ಎಂದರು.

ಹಮಿರ್ಂದರ್ ಕೌರ್‌ನನ್ನು ಬಲವಂತಯವಾಗಿ ಧಾರ್ಚುಲಾಗೆ ಕಳುಹಿಸಲು ನಿರ್ಧಸಿದ್ದೆವು. ಆದರೆ ಪ್ರಯೋಜನವಾಗಲಿಲ್ಲ. ಇದರಿಂದಾಗಿ ನಾವು ಈಗ ಹರ್ಮಿಂದರ್‌ನ್ನು ಮರಳಿ ಕರೆತರಲು ವೈದ್ಯಕೀಯ ಸಿಬ್ಬಂದಿ ಸೇರಿದಂತೆ 12 ಸದಸ್ಯರ ದೊಡ್ಡ ಪೊಲೀಸ್ ತಂಡವನ್ನು ಕಳುಹಿಸಲು ಯೋಜಿಸಿದ್ದೇವೆ ಎಂದು ಹೇಳಿದ್ದಾರೆ.

Leave A Reply

Your email address will not be published.