ರಿಷಭ್ ಶೆಟ್ಟಿ ಸಾರಥ್ಯದಲ್ಲಿ ಸೆಟ್ಟೇರಲಿದೆ ‘ಕಿರಿಕ್ ಪಾರ್ಟಿ 2’ ಸಿನಿಮಾ : ರಶ್ಮಿಕಾ‌ ಮಂದಣ್ಣಗೆ ಈ ಸಿನಿಮಾದಲ್ಲಿ ಪಾತ್ರ ಏನು ಗೊತ್ತಾ?

ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ ‘ಕಿರಿಕ್ ಪಾರ್ಟಿ’ ಗಲ್ಲಾ ಪೆಟ್ಟಿಗೆ ದೋಚಿದ್ದು ಸುಳ್ಳಲ್ಲ. ‘ಕಿರಿಕ್ ಪಾರ್ಟಿ’ ಸಿನಿಮಾ ಹಿಟ್ ಸಿನಿಮಾ ಮಾತ್ರ ಅಲ್ಲ, ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವ ಒಂದು ದಾಖಲೆಯನ್ನೇ ಮಾಡಿತು. ಈ ಸಿನಿಮಾ ಎಷ್ಟೋ ಕಲಾವಿದರು, ತಂತ್ರಜ್ಞರನ್ನು ಹುಟ್ಟು ಹಾಕಿದೆ.

 

ಈಗ ‘ಕಿರಿಕ್ ಪಾರ್ಟಿ’ ಚಿತ್ರದ ಬಗ್ಗೆ ಮಾತನಾಡಲು ಕಾರಣ ‘ಕಿರಿಕ್ ಪಾರ್ಟಿ 2’ ಸಿನಿಮಾ ಸೆಟ್ಟೇರಲು ಕಾರಣ ಅಂತ. ‘ಕಿರಿಕ್ ಪಾರ್ಟಿ’ ಸಿನಿಮಾ ಬಂದಾಗಿನಿಂದಲೂ ‘ಕಿರಿಕ್ ಪಾರ್ಟಿ 2’ ಯಾವಾಗ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗ ‘ಕಿರಿಕ್ ಪಾರ್ಟಿ 2’ ಸಿನಿಮಾಕ್ಕೆ ಈಗ ಮುಹೂರ್ತ ಕೂಡಿ ಬಂದಿದೆ.

ಹೌದು, ರಿಷಭ್ ಶೆಟ್ಟಿ ಸಾರಥ್ಯದಲ್ಲಿ ‘ಕಿರಿಕ್ ಪಾರ್ಟಿ 2’ ಸಿನಿಮಾದ ತಯಾರಿಯಲ್ಲಿದೆ ಸಿನಿಮಾ ತಂಡ. ಸಿನಿಮಾ ಯಾವಾಗ ಸೆಟ್ಟೇರಲಿದೆ?, ಚಿತ್ರದ ಕುರಿತು ಹಾಗೂ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಲುಕ್ ಬಗ್ಗೆ ಇಲ್ಲಿದೆ ಕಿರು ಸುದ್ದಿ.

ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಬಂದ ‘ಕಿರಿಕ್ ಪಾರ್ಟಿ’ಗೆ 5 ವರ್ಷ ಆಗಿದೆ. ಈಗ ‘ಕಿರಿಕ್ ಪಾರ್ಟಿ 2’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ, ಈಗಾಗಲೇ ಸಿನಿಮಾದ ಕೆಲಸಗಳನ್ನು ಶುರು ಮಾಡಿದ್ದಾರೆ.
2016 ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು.

“ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಶುರುವಾಗಿವೆ. ಕಥೆಯ ತಯಾರಿ ನಡೆಯುತ್ತಿದೆ. ಈಗಲೇ ಕಥೆಯ ಬಗ್ಗೆ ಹೆಚ್ಚಿನದಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಮುಂದಿನ ವರ್ಷ ‘ಕಿರಿಕ್ ಪಾರ್ಟಿ 2’ ಸೆಟ್ಟೇರಲಿದೆ.” ಎಂದು ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದ್ದಾರೆ.

ಇನ್ನು ರಕ್ಷಿತ್ ಶೆಟ್ಟಿ ಪಾತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರಿಷಬ್ ಶೆಟ್ಟಿ, “ಈಗ ಇರುವ ರಕ್ಷಿತ್ ಶೆಟ್ಟಿ ಲುಕ್ ಸಂಪೂರ್ಣವಾಗಿ ಬದಲಾಗಲಿದೆ. ಈ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಎರಡು, ಮೂರು ಲುಕ್‌ನಲ್ಲಿ ಕಾಣಿಕೊಳ್ಳಲಿದ್ದಾರೆ. ಈ ಸಿನಿಮಾ ಕೂಡ ಕಿರಿಕ್ ಪಾರ್ಟಿ ರೀತಿಯಲ್ಲಿ ಸಿಕ್ಕಾಪಟ್ಟೆ ಮಜಾ ಕೊಡಲಿದೆ. ಇದನ್ನು ಕೇವಲ ಲವ್ ಸ್ಟೋರಿ ಎಂದು ಹೇಳೋಕೆ ಸಾಧ್ಯವಿಲ್ಲ ಎಂದು ನಿರ್ದೇಶಕ, ನಟ ರಿಷಭ್ ಶೆಟ್ಟಿ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

‘ಕಿರಿಕ್ ಪಾರ್ಟಿ’ ಅಂದರೆ ರಕ್ಷಿತ್, ರಿಷಬ್, ಸಂಯುಕ್ತ ಹೆಗ್ಡೆ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಹೆಸರು ತುಂಬಾನೇ ಮುಖ್ಯ. ಕಿರಿಕ್ ಪಾರ್ಟಿ ಮೂಲಕವೆ ನಟಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದು. ಇನ್ನು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕನ್ನಡದ ಯಾವ ಸಿನಿಮಾ ಕೂಡ ಒಪ್ಪಿಕೊಳ್ಳುತ್ತಿಲ್ಲ. ಪರಭಾಷೆಯಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಆದರೆ ಕಿರಿಕ್ ಪಾರ್ಟಿ 2 ಚಿತ್ರಕ್ಕಾಗಿ ನಟಿ ರಶ್ಮಿಕಾ ಮತ್ತೆ ಕನ್ನಡಕ್ಕೆ ಕಮ್ ಬ್ಯಾಕ್ ಮಾಡುತ್ತಾರ ಎನ್ನುವ ಕುತೂಹಲ ಮೂಡಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಚಿತ್ರತಂಡ ಉತ್ತರ ನೀಡಲಿದೆ.

Leave A Reply

Your email address will not be published.