ಸ್ಯಾಂಡಲ್ ವುಡ್ ಹಿರಿಯ ನಟ ‘ಉದಯ್ ಹುತ್ತಿನಗದ್ದೆ’ ಇನ್ನಿಲ್ಲ

ಇತ್ತೀಚೆಗಷ್ಟೇ ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ( ಕೆಕೆ) ಅವರ ನಿಧನ ಚಿತ್ರರಂಗದವರಿಗೆ ದಿಗ್ಭ್ರಮೆ ಮೂಡಿಸಿದೆ. ಈ ನೋವು ಮಾಸುವ ಮುನ್ನವೇ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಉದಯ್ ಹುತ್ತಿನಗದ್ದೆ ವಿಧಿವಶರಾಗಿದ್ದಾರೆ.

 

ನಟ ಉದಯ್ ಹುತ್ತಿನಗದ್ದೆ ನಿಧನರಾಗಿದ್ದಾರೆ. ಬೆಂಗಳೂರಿನ ರಾಜಾಜಿನಗರದ ತಮ್ಮ ಸ್ವಗೃಹದಲ್ಲಿ ನಟ ಉದಯ್ ಹುತ್ತಿನಗದ್ದೆ ಕೊನೆಯುಸಿರೆಳೆದಿದ್ದಾರೆ.

ಸ್ಯಾಂಡಲ್ ವುಡ್ ನ ಹಿರಿಯ ನಟ ಉದಯ್ ಹುತ್ತಿನಗದ್ದೆ (62) ಉಸಿರಾಟದ ಸಮಸ್ಯೆಯಿಂದ ಗುರುವಾರ ಸಂಜೆ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.

1987 ರಲ್ಲಿ ಬಿಡುಗಡೆಯಾದ ಆರಂಭ ಸಿನಿಮಾದ ಮೂಲಕ ನಾಯಕನಾಗಿ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಅವರು ಶಿವಯೋಗಿ ಅಕ್ಕಮಹಾದೇವಿ,ಅಮೃತ ಬಿಂದು, ಉದ್ಭವ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಉಂಡು ಹೋದ ಕೊಂಡೂ ಹೋದ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ನಟನೆಯಿಂದ ದೂರ ಉಳಿದ ಅವರು, ಬಳಿಕ ಕಲರ್ ಲ್ಯಾಬ್ ನಡೆಸುತ್ತಿದ್ದರು. ಗುರುವಾರ ಸಂಜೆ ಉಸಿರಾಟದ ಸಮಸ್ಯೆಯಿಂದಾಗಿ ತಮ್ಮ ಮನೆಯಲ್ಲೇ ಮೃತಪಟ್ಟಿದ್ದಾರೆ. ಉದಯ್ ಹುತ್ತಿನಗದ್ದೆ ಅವರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.