ಕೊಕ್ಕಡ : ಆಟೋಚಾಲಕನ ಲವ್ ಜಿಹಾದ್ ಪ್ರಕರಣ ಹಿನ್ನೆಲೆ | ಹಿಂದೂಯೇತರ ವಾಹನಗಳಿಗೆ ಸೌತಡ್ಕ ದೇವಸ್ಥಾನಕ್ಕೆ ಪ್ರವೇಶ ನಿಷೇಧ

ಬಯಲು ಗಣಪನಿರುವ ಪುಣ್ಯ ಕ್ಷೇತ್ರ ಸೌತಡ್ಕ ದೇವಸ್ಥಾನಕ್ಕೆ ಹಿಂದೂಯೇತರರ ವಾಹನಗಳು ಪ್ರವೇಶಿಸಬಾರದು ಎಂದು ಸೌತಡ್ಕದಲ್ಲಿ ಬ್ಯಾನರ್ ಅಳವಡಿಸಲಾಗಿದೆ.

ಹಿಂದೂಗಳ‌ ಶ್ರದ್ಧಾ ಕೇಂದ್ರವಾದ ಪುಣ್ಯ ಕ್ಷೇತ್ರ ಸೌತಡ್ಕದಲ್ಲಿ ಅನ್ಯ ಕೋಮಿನನವರು ಪ್ರವೇಶವನ್ನು ಮಾಡಿ ಭಕ್ತಾಧಿಗಳೊಂದಿಗೆ ಲವ್ ಜಿಹಾದ್ ಹಾಗೂ ದುಷ್ಕೃತ್ಯ ನಡೆಸಿರುವುದು ಕಂಡು ಬಂದಿರುವುದರಿಂದ ಹಿಂದುಯೇತರ ಜನರ ಆಟೋ& ಟ್ಯಾಕ್ಸಿ ಇನ್ನಿತರ ಯಾವುದೇ ವಾಹನಗಳ ಪ್ರವೇಶಕ್ಕೆ ‌ನಿರ್ಭಂಧ ವಿಧಿಸಲಾಗುವುದಾಗಿ ಬೈಠಕ್ ನಲ್ಲಿ ಹಿರಿಯರ ಸಲಹೆ ಪಡೆದು ಸೌತಡ್ಕದಲ್ಲಿ ಬ್ಯಾನರ್ ಅಳವಡಿಸಲಾಗಿದೆ.

ನಿರ್ಣಯಕ್ಕೆ ಕಾರಣ !?

ಕೊಕ್ಕಡದಲ್ಲಿ ಆಟೋ ಚಾಲಕನಾಗಿದ್ದ ಮಲ್ಲಿಗೆ ಮಜಲಿನ ಮುಸ್ಲಿಂ ಯುವಕ ಸಮೀರ್(27) ಎಂಬಾತ ಬೆಂಗಳೂರಿನ ಹಿಂದೂ ಯುವತಿ ಬಸಮ್ಮ ರಕ್ಕಸಗಿ(22) ಎಂಬಾಕೆಯನ್ನು ಪರಿಚಯಿಸಿಕೊಂಡು, ಫೋನ್ ನಂಬರ್ ಪಡೆದು ಪ್ರೀತಿಯ ಬಲೆಗೆ ಬೀಳಿಸಿದ್ದನು. ಇವರಿಬ್ಬರು ಮೇ ತಿಂಗಳಿನಲ್ಲಿ ರಿಜಿಸ್ಟ್ರಾರ್ ಮದುವೆಯಾದ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದೊಂದು ಲವ್ ಜಿಹಾದ್ ಷಡ್ಯಂತ್ರ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.

ಕೊಕ್ಕಡದ ಮುಸ್ಲಿಂ ಆಟೋ ಚಾಲಕರು ಪ್ರವಾಸಿ ಭಕ್ತರ ಬಳಿ, ಅದರಲ್ಲೂ ಮಹಿಳೆಯರು-ಯುವತಿಯರ ಮೊಬೈಲ್ ನಂಬರ್ ಕೇಳಿ ಪಡೆಯುತ್ತಿದ್ದರು ಎಂದು ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೊಕ್ಕಡದಲ್ಲಿ ಕೋಮು ಘರ್ಷಣೆ ಕೂಡ ನಡೆದಿತ್ತು.

ಇನ್ನು ಇಂತಹ ಕೃತ್ಯಗಳು ಕಂಡುಬಂದಲ್ಲಿ ಹಿಂದುಗಳ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಇದೇ ರೀತಿಯಲ್ಲಿ ನಿರ್ಬಂಧ ವಿಧಿಸಲಾಗುವುದು ಎಂದು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.

Leave A Reply

Your email address will not be published.