ಪ್ರಭಾವಿ ಕಾಂಗ್ರೆಸ್ ಮುಖಂಡನೋರ್ವನ ಲವ್ವಿ ಡವ್ವಿ | ಹೆಂಡತಿಗೆ ಗೊತ್ತಾದಾಗ ನಡೆಯಿತು ನೋಡಿ ಡಿಶುಂ ಡಿಶುಂ….ವೀಡಿಯೋ ವೈರಲ್

ಪವರ್ ಇದ್ದಾಗ ಏನು ಬೇಕಾದರೂ ಮಾಡಬಹುದು ಯಾವ ಅನೈತಿಕ ಕೆಲಸ ಬೇಕಾದರೂ ಮಾಡಬಹುದು ಎನ್ನುವವರು ಖಂಡಿತಾ ಈ ವಿಷಯ ಓದಲೇಬೇಕು. ಗಂಡನಾದವನು ತನ್ನ ಹೆಂಡ್ತಿ ಜೊತೆ ಇರಬೇಕಾದ ರೀತಿಯಲ್ಲಿ ಇರದೆ ಇನ್ನೊಬ್ಬರ ಜೊತೆ ಸರಸ ಸಲ್ಲಾಪ ಮಾಡುತ್ತಾ ಇದ್ದರೆ ಹೆಂಡತಿ ರಣಚಂಡಿಯಾಗುತ್ತಾಳೆ ಎನ್ನೋದಕ್ಕೆ ಇದೊಂದು ಘಟನೆ ಸಾಕ್ಷಿಯಾಗುತ್ತೆ ಅಂತಾನೇ ಹೇಳಬಹುದು.

 

ಹೆಂಡ್ತಿ ಕೈಯಲ್ಲೇ ಯುವತಿ ಜೊತೆ ಕೈ ಲೀಡರ್ ಓರ್ವರು ಸಿಕ್ಕಿಬಿದ್ದಿದ್ದು, ಲವ್ವಿಡವ್ವಿ ಆಡಿದ ಕೇಂದ್ರದ ಮಾಜಿ ಸಚಿವ ಭರತ್ ಸಿಂಗ್ ಸೋಲಂಕಿ ಸಿಕ್ಕಾಕಿಕೊಂಡಿದ್ದಾರೆ. ಸೋಲಂಕಿ ಗುಜರಾತ್‌ನಲ್ಲಿ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದು, ಯುವತಿಯೊಬ್ಬಳ ಜೊತೆ ಏಕಾಂತದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಪತ್ನಿ ಎಂಟ್ರಿ ಕೊಟ್ಟಾಗ ಪತ್ನಿ ಮೇಲೆ ಸೋಲಂಕಿ ಎಗರಾಡಿದ್ದು, ನಾನು ಗಂಡಸು, ಎಷ್ಟು ಜನ ಬೇಕಾದ್ರೂ ಇಡ್ಕೊತೀನಿ, ನಿನ್ನಿಂದೇನೂ ಮಾಡಕ್ಕಾಗಲ್ಲ ಅಂತ ಗದರಿಸಿದ್ದಾರೆ. ಸೋಲಂಕಿ ದರ್ಪದಿಂದ ಸಿಟ್ಟಿಗೆದ್ದು ಚಾಮುಂಡಿಯಾದ ಪತ್ನಿ, ಇಡ್ಕೊತೀಯಾ, ತಗೋ ಇಸ್ಕೊ ಅಂತ ಭರ್ಜರಿ ಒದೆ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸೋಲಂಕಿ ಸಾಹಸ ಫುಲ್ ವೈರಲ್ ಆಗುತ್ತಿದೆ. ಸೋಲಂಕಿ ಕಾಮಪುರಾಣ ಇಷ್ಟಕ್ಕೇ ನಿಲ್ಲಲ್ಲ ಗುಜರಾತ್ ಕಾಂಗ್ರೆಸ್‌ನಲ್ಲಿ ಸೋಲಂಕಿ ಕಥೆ ಫುಲ್ ಫೇಮಸ್ ಆಗಿದ್ದು, ಕಾಂಗ್ರೆಸ್ ನಾಯಕಿಯರು ಸೋಲಂಕಿ ಅಂದ್ರೆ ಮಾರು ದೂರ ಓಡುತ್ತಾರೆ.

https://twitter.com/follow_amj/status/1531928314889248770?ref_src=twsrc%5Etfw%7Ctwcamp%5Etweetembed%7Ctwterm%5E1531928314889248770%7Ctwgr%5E%7Ctwcon%5Es1_c10&ref_url=http%3A%2F%2Fapi-news.dailyhunt.in%2F

ಪತ್ನಿ ಕೈಯಲ್ಲೇ ಸೋಲಂಕಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಭರತ್ ಸಿಂಗ್ ಸೋಲಂಕಿ ಹಲವು ರಾಜ್ಯಗಳಲ್ಲಿ ಪ್ರಭಾವ ವಿಸ್ತರಿಸಿದ್ದು, ಗುಜರಾತ್‌ನ ಮಾಜಿ ಸಿಎಂ ಮಾಧವ್ ಸಿಂಗ್ ಸೋಲಂಕಿಯ ಪುತ್ರ ಆಗಿದ್ದಾರೆ. ಇದೀಗ ಸೋಲಂಕಿ ವಿಡಿಯೋ ಕಾಂಗ್ರೆಸ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Leave A Reply

Your email address will not be published.