ಉಪ್ಪಿನಂಗಡಿ: ಕಾಲೇಜಿನಲ್ಲಿ ಘರ್ಷಣೆಗೆ ಕಾರಣವಾದ ಹಿಜಾಬ್ ವಿವಾದ!! ಮುಸ್ಲಿಂ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ

ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಮತ್ತೊಮ್ಮೆ ಭುಗಿಲೆದ್ದಿದ್ದು, ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಈ ಘಟನೆಯ ವರದಿ ಮಾಡಲು ಬಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಗೂಂಡಾಗಿರಿ ಪ್ರದರ್ಶಿಸಿರುವ ಘಟನೆ ಬೆಳಕಿಗೆ ಬಂದಿದೆ.


Ad Widget

ಅದಲ್ಲದೆ ಮಾಧ್ಯಮ ಪ್ರತಿನಿಧಿಗಳು ಕಾಲೇಜಿನ ಘಟನೆಯನ್ನು ವರದಿ ಮಾಡದಂತೆ ವಿದ್ಯಾರ್ಥಿಗಳು ತಾಕೀತು ಮಾಡಿದ್ದಾರೆ. ವರದಿಗಾಗಿ ಮಾಡಿದ ವಿಡಿಯೋ ಬಲತ್ಕಾರವಾಗಿ ಡಿಲೀಟ್ ಕೂಡ ಮಾಡಿಸಿದ್ದಾರೆ.

ವಿದ್ಯಾರ್ಥಿಗಳು ಮಾಧ್ಯಮ ಪ್ರತಿನಿಧಿಯನ್ನು ರೂಂ ಒಳಗೆ ಕೂಡಿ ಹಾಕಿದ್ದಾರೆ. ಮಾಧ್ಯಮದವರ ಮೇಲೆ ಹಲ್ಲೆಗೆ ಮುಂದಾದ ವಿದ್ಯಾರ್ಥಿಗಳನ್ನು ತಡೆಯಲು ಉಪ್ಪಿನಂಗಡಿ ಪೋಲೀಸರು ಮಾತ್ರ ಸ್ಥಳಕ್ಕೆ ಬರಲಿಲ್ಲ. ಇಷ್ಟು ದೊಡ್ಡ ಘಟನೆ ನಡೆದರೂ ಕ್ಯಾಂಪಸ್ ಗೆ ಕಾಲಿಡದ ಪೊಲೀಸರ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


Ad Widget
error: Content is protected !!
Scroll to Top
%d bloggers like this: