ಒಂಭತ್ತು ವರ್ಷಗಳ ಪ್ರೀತಿಗೆ ಕೈಕೊಟ್ಟ ಯುವತಿ!! ಮನನೊಂದು ಆತ್ಮಹತ್ಯೆಗೆ ಶರಣಾದ ಯುವಕನ ಡೆತ್ ನೋಟ್ ನಲ್ಲಿತ್ತು ಆಕೆಗಾಗಿ ಮಾಡಿದ ಖರ್ಚು

ಒಂಭತ್ತು ವರ್ಷಗಳ ಕಾಲ ಪ್ರೀತಿಸಿ ಕೈಕೊಟ್ಟ ಯುವತಿಯಿಂದಾಗಿ ಮುನಿಸಿಕೊಂಡ ಯುವಕನೊಬ್ಬ ಆಕೆಗೆ ಮಾಡಿದ ಖರ್ಚು ವೆಚ್ಚಗಳ ವಿವರಗಳ ಸಹಿತ ಸಾವಿಗೆ ಕಾರಣಗಳನ್ನು ಬರೆದಿಟ್ಟು ನೇಣಿಗೆ ಶರಣಾದ ಘಟನೆಯೊಂದು ಎನ್.ಆರ್.ಪುರ ತಾಲೂಕಿನ ಶಂಕರಪುರ ಎಂಬಲ್ಲಿ ನಡೆದಿದೆ.

 

ಮೃತ ಯುವಕನನ್ನು ಚೇತನ್ ಎಂದು ಗುರುತಿಸಲಾಗಿದ್ದು, ಈತನು ಸುಮಾರು ಒಂಭತ್ತು ವರ್ಷಗಳಿಂದ ನೆರೆಯ ಗ್ರಾಮದ ಗಾನವಿ ಎಂಬಾಕೆಯನ್ನು ಪ್ರೀತಿಸುತ್ತಿದ್ದೂ, ಆಕೆಯೊಂದಿಗೆ ಹಲವೆಡೆಗಳಲ್ಲಿ ಸುತ್ತಾಡಿದ್ದ.

ಆದರೆ ಕೆಲ ದಿನಗಳ ಹಿಂದೆ ಯುವತಿಯ ಸಹೋದರನ ಕಿರುಕುಳಕ್ಕೆ ಬೇಸತ್ತ ಯುವತಿ ಈತನನ್ನು ತ್ಯಜಿಸಿದ್ದು, ಇದರಿಂದ ಮನನೊಂದ ಚೇತನ್ ಸಾಯಲು ಮುಂದಾಗಿದ್ದಾನೆ. ತನ್ನ ಸಾವಿಗೆ ಆಕೆ ಹಾಗೂ ಆಕೆಯ ಮನೆಯವರು ನೇರ ಕಾರಣವಾಗಿದ್ದು, ಈ ವರೆಗೆ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿಸಿದ್ದಾಳೆ. ನನ್ನ ಚಿತೆಗೆ ಆಕೆಯೇ ಕೊಳ್ಳಿ ಇಡಬೇಕು, ಆಕೆ ಬರುವ ವರೆಗೆ ಹೆಣ ಕೆಳಗಿಳಿಸಬೇಡಿ,ನನ್ನ ಸಾವಿಗೆ ಕಾರಣಳಾದ ಆಕೆಗೆ ಸರಿಯಾದ ಶಿಕ್ಷೆಯಾಗಲಿ ಎಂದೆಲ್ಲಾ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದು, ಮೃತನ ಕುಟುಂಭಸ್ಥರ ರೋಧನೆ ಮುಗಿಲು ಮುಟ್ಟಿತ್ತು.

Leave A Reply

Your email address will not be published.