” ಧರ್ಮ ದಂಗಲ್ ” ಗೆ ಸಜ್ಜು : ಜೂನ್ 4ಕ್ಕೆ ಮಸೀದಿ ಪ್ರವೇಶಿಸ್ತಾರಂತೆ ಹನುಮ ಭಕ್ತರು!!!

ಇನ್ನೊಂದು ಧರ್ಮ ದಂಗಲ್ ಗೆ ರಾಜ್ಯದ ಒಂದು ಜಿಲ್ಲೆ ಸಜ್ಜಾಗುತ್ತಿರುವ ಲಕ್ಷಣ ಕಾಣುತ್ತಿದೆ. ಯಾವಾಗ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ವೀಡಿಯೋ ಚಿತ್ರೀಕರಣಕ್ಕೆ ನ್ಯಾಯಾಲಯ ಅವಕಾಶ ಕೊಟ್ಟಿತೋ, ಆಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯ ಮಸೀದಿ ವಿವಾದ ಮುನ್ನಲೆಗೆ ಬಂದಿದೆ.

 

ಜೂನ್ 4 ರಂದು ಹನುಮ ಭಕ್ತರು ಜಾಮಿಯ ಮಸೀದಿ ಪ್ರವೇಶ ಮಾಡಲು ಸಿದ್ಧತೆ ಮಾಡಿಕೊಳ್ತಿದ್ದಾರೆ. ಈ ಅಷ್ಟಕ್ಕೂ ಹಿಂದೂ ಪರ ಸಂಘಟನೆಗಳ ವಾದವೇನು? ಅವರು ಪಾದ ಯಾತ್ರೆ ಮಾಡೋಕು ಅಂತಿರೋದು ಯಾಕೆ? ಈ ಬಗ್ಗೆ ಕಂಪ್ಲೇಂಟ್ ರಿಪೋರ್ಟ್ ಇಲ್ಲಿದೆ

ಈ ಹಿಂದೆ ಜಾಮಿಯ ಮಸೀದಿ ಮೂಡಲ ಬಾಗಿಲು ಆಂಜನೇಯ ದೇವಾಲಯವಾಗಿತ್ತು. ಈ ಹಿನ್ನೆಲೆ ಜಾಮಿಯ ಮಸೀದಿಯ ವೀಡಿಯೋ ಆಗಬೇಕು ಹಾಗೂ ಈ ಬಾರಿಯ ಹನುಮ ಜಯಂತಿಗೆ ಹನುಮ ಮಾಲಾಧಾರಿಗಳು ಪ್ರವೇಶ ಮಾಡಲು ಅವಕಾಶ ಮಾಡಿ ಕೊಡ್ಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ಇನ್ನು ಇದೇ ಮೇ 20 ರಂದು ವಿಶ್ವ ಹಿಂದೂ ಪರಿಷತ್
ಹಾಗೂ ಬಜರಂಗದಳದ ವತಿಯಿಂದ ಜಿಲ್ಲಾಡಳಿತಕ್ಕೆ ಹಾಗೂ ಪ್ರಾಚೀನ ಪುರಾತತ್ವ ಇಲಾಖೆಗೆ ಮನವಿಯೊಂದನ್ನು ನೀಡಿದರೂ, ಜಾಮಿಯ ಮಸೀದಿಯಲ್ಲಿ ಅಕ್ರಮವಾಗಿ ಮದರಸವನ್ನು ನಡೆಸುತ್ತಿದ್ದಾರೆ. ಅಲ್ಲೇ ವಾಸ ಮಾಡುತ್ತಿದ್ದಾರೆ. ಹಾಗಾಗಿ ಅವರನ್ನು ಆದಷ್ಟು ಬೇಗ ತೆರವು ಗೊಳಿಸುವಂತೆ ಮನವಿ ಮಾಡಿದರೂ, ಸ್ಪಂದನೆ ಸಿಗದೇ ಇದ್ದುದರಿಂದ ಅಭಿಯಾನಕ್ಕೆ ಕರೆ ನೀಡಲಾಗಿದೆ.

ಇನ್ನು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವ ಹಿಂದು ಪರ ಮುಖಂಡರ ಜೊತೆ ಜಿಲ್ಲಾಡಳಿತ ಮಾತುಕತೆ ಮಾಡುವ ಪ್ರಯತ್ನ ಮಾಡಿದೆ. ಜೂನ್ 4 ರ ಶ್ರೀರಂಗಪಟ್ಟಣ ಚಲೋ ಕೈ ಬಿಡುವಂತೆ ತಿಳಿಸಿದೆ. ಆದರೆ ಈಗಾಗಲೇ ಹಿಂದೂಪರ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿರುವುದರಿಂದ ಹನುಮ ಮಂದಿರ ಇತ್ತು ಎಂಬ ಜಾಮಿಯಾ ಮಸೀದಿಗೆ
ಹೋಗುವುದಾಗಿ ಪಟ್ಟು ಹಿಡಿದಿದ್ದಾರೆ.

ಜಾಮಿಯ ಮಸೀದಿಯ ವಿವಾದ ತಾರಕಕ್ಕೆ ಏರುತ್ತಿದೆ. ಇತ್ತ ಹಿಂದೂ ಪರ ಸಂಘಟನೆಗಳು ಮೂಡಲ ಬಾಗಿಲು ಆಂಜನೇಯ ದೇವಾಲಯವನ್ನ ಪಡೆದೆ ತೀರುತ್ತೇವೆಂದು ಪಟ್ಟು ಹಿಡಿದಿದ್ದು, ಇತ್ತ ಇದು ನಮ್ಮ ಮಸೀದಿ ನಾವು ಬಿಟ್ಟು ಕೊಡುವುದಿಲ್ಲವೆಂದು ಹಠ ಹಿಡಿದಿದೆ.

ಇನ್ನು ಈ ಪಾದಯಾತ್ರೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಒಂದು ತಡೆಯೋ ಪ್ರಯತ್ನ ಮಾಡಿದ್ರೆ ಉಗ್ರ ಹೋರಾಟದ ಸೂಚನೆಯನ್ನ ಹಿಂದುಪರ ಸಂಘಟನೆಗಳು ನೀಡಿವೆ.

ಈ ಧರ್ಮ ದಂಗಲ್ ಮುಂದೆ ಯಾವ ಹಂತಕ್ಕೆ ಹೋಗಲಿದೆ ಎಂದು ಕಾದು ನೋಡ ಬೇಕಿದೆ

Leave A Reply

Your email address will not be published.