ಈ ಹುಂಜ ಕೂಗುವ ಸ್ಟೈಲ್ ಗೆ ಖಂಡಿತಾ ಬಿದ್ದು ಬಿದ್ದು ನಗ್ತೀರಾ!!! ಸಖತ್ ವೈರಲ್ ಆಗಿರುವ ಈ ವೀಡಿಯೋ ನೋಡೋಕೆ ಒಂದು ಮಜಾ…

ಆ ಕಾಲನೇ ಚೆನ್ನಾಗಿತ್ತು. ಹುಂಜ ಕೂಗಿದರೆ ಮುಂಜಾನೆಯಾಯಿತು ಅನ್ನೋ ಒಂದು ಕಾಲವಿತ್ತು. ಮನೆ ಯಜಮಾನ ಬೆಳಗ್ಗೆ ಎದ್ದು ಮನೆಯಿಂದ ಹೊರಬರುವವರೆಗೆ ಕೋಳಿ ಕೂಗುತ್ತನೇ ಇತ್ತು.
ಹುಂಜ ಕೂಗಿದ ತಕ್ಷಣ ಎಲ್ಲರೂ ತಮ್ಮ ದಿನದ ಕೆಲಸವನ್ನೂ ಆರಂಭಿಸುತ್ತಿದ್ದರು. ಕೋಳಿಯ ಕೂಗಿನೊಂದಿಗೆ ಎಲ್ಲರ ದಿನಚರಿಯೂ ಆರಂಭವಾಗುತ್ತಿತ್ತು. ಇಂದಿಗೂ ಹಳ್ಳಿಗಳಲ್ಲಿ ಈ ಪರಿಪಾಠ ಇದೆ. ಆದರೆ ಸಿಟಿ ಕಡೆ ಇದೆಲ್ಲಾ ಕೇಳೋಕೇ ಸಿಗೋದೇ ಕಮ್ಮಿ ಅಂತಾನೇ ಹೇಳಬಹುದು.

 

ಕೋಳಿ ಯಾವ ರೀತಿ ಕೂಗುತ್ತೆ ಎಂದು ಎಲ್ಲರಿಗೂ ಗೊತ್ತು. ಯಾರಿಗೂ ಇದು ಅಪರಿಚಿತವೇನೂ ಅಲ್ಲ. ಆದರೆ, ಇಲ್ಲೊಂದು ಹುಂಜ ಕೂಗುವ ಸ್ಟೈಲೇ ಡಿಫ್ರೆಂಟ್. ಈ ದೃಶ್ಯ ನೋಡಿದರೆ ನೀವು ನಿಜಕ್ಕೂ ಅಚ್ಚರಿಗೊಳ್ಳುತ್ತೀರಿ…

@TheFigen ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಹುಂಜವೊಂದು ನಿಂತಿರುವ ದೃಶ್ಯದ ಮೂಲಕ 22 ಸೆಕೆಂಡುಗಳ ಈ ದೃಶ್ಯ ಶುರುವಾಗುತ್ತದೆ. ಹೀಗೆ ನಿಂತಿದ್ದ ಹುಂಜ ಕೂಗುವುದಕ್ಕೆ ಶುರು ಮಾಡುತ್ತದೆ. ಆದರೆ, ಇಲ್ಲೇ ಇರುವುದು ಮಜಾ… ಹೀಗೆ ಕೂಗಲು ಶುರು ಮಾಡಿದ್ದ ಕೋಳಿ ತನ್ನ ಕೂಗನ್ನು ತಕ್ಷಣಕ್ಕೆ ನಿಲ್ಲಿಸುವುದೇ ಇಲ್ಲ…! ಒಂದೇ ಉಸಿರಿನಲ್ಲಿ ಈ ಕೋಳಿ ಕೂಗುವುದಕ್ಕೆ ಆರಂಭಿಸುತ್ತದೆ. ಈ ಕೋಳಿ ಅದೆಷ್ಟು ದೀರ್ಘವಾಗಿ ಕೂಗುತ್ತದೆ ಎಂದರೆ ಕೊನೆಗೆ ಉಸಿರುಗಟ್ಟಿ ಬಿದ್ದು ಹೋಗುವಷ್ಟು…! ಅಷ್ಟರಮಟ್ಟಿಗೆ ಇದೆ ಕೋಳಿಯ ಏಕಾಗ್ರತೆ ಮತ್ತು ಕೆಲಸದ ನಿಯತ್ತು!! ಹೀಗೆ ಬಿದ್ದ ಕೋಳಿ ಮತ್ತೆ ಏಳುವಲ್ಲಿಗೆ ಈ ದೃಶ್ಯ ಕೊನೆಯಾಗುತ್ತದೆ…

https://twitter.com/TheFigen/status/1531658216697958402?ref_src=twsrc%5Etfw%7Ctwcamp%5Etweetembed%7Ctwterm%5E1531658216697958402%7Ctwgr%5E%7Ctwcon%5Es1_c10&ref_url=https%3A%2F%2Fd-197676755888040941.ampproject.net%2F2205191749000%2Fframe.html

ಸಹಜವಾಗಿಯೇ ಈ ವೀಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಬಲು ಕುತೂಹಲದಿಂದ ಈ ದೃಶ್ಯವನ್ನು ನೋಡುತ್ತಿದ್ದಾರೆ. ಕೆಲವರು ಇದೇ ಮೊದಲ ಬಾರಿಗೆ ಇಂತಹ ದೃಶ್ಯವನ್ನು ನೋಡುತ್ತಿದ್ದಾರೆ. ಹೀಗಾಗಿ, ಸಹಜವಾಗಿಯೇ ಈ ಕೋಳಿಯ ಕೂಗುವ ಶೈಲಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸದ್ಯ ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನೂ ಗಳಿಸುವಲ್ಲಿಯೂ ಯಶಸ್ವಿಯಾಗಿದೆ. ನಿಮಗೆ ಕೂಡಾ ಈ ದೃಶ್ಯ ಅಚ್ಚರಿ ತಂದಿರಬಹುದು.

Leave A Reply

Your email address will not be published.