8 ಬಾಟ್ಲಿ ಮದ್ಯ, ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ ಖ್ಯಾತ ನಟಿ !!!

ಗ್ಲಾಮರಸ್ ಲೋಕದ ಸಾವಿನ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ. ಖಿನ್ನತೆಯೋ ಅಥವಾ ಇನ್ಯಾವುದೋ ಕಾರಣದಿಂದಾಗಿ ಈ ಸಿನಿರಂಗದಲ್ಲಿ ಆತ್ಮಹತ್ಯೆ ಅಥವಾ ಸಾವು ಎಷ್ಟು ನಡೆಯುತ್ತೋ ಗೊತ್ತಿಲ್ಲ.

 

ಟಾಲಿವುಡ್ ನ ಕಿರುತೆರೆ ಕಲಾವಿದೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಭಾರೀ ಪ್ರಮಾಣದ ಮದ್ಯದೊಂದಿಗೆ ನಿದ್ರೆ ಮಾತ್ರೆ ಬೆರೆಸಿ ಸೇವಿಸುವ ಮೂಲಕ ಟಾಲಿವುಡ್‌ನ ಕಿರುತೆರೆ ಕಲಾವಿದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ನಟಿ ಮೈಥಿಲಿ ರೆಡ್ಡಿ ಹೈದರಾಬಾದ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಮೈಥಿಲಿ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಆಕೆಯ ಫೋನ್ ಸಿಗ್ನಲ್ ಜಾಡು ಹಿಡಿದು ಪಂಜಗುಟ್ಟ ಠಾಣಾ ಪೊಲೀಸರು ಆಕೆಯ ಮನೆಗೆ ಧಾವಿಸಿದ್ದಾರೆ. ಈ ವೇಳೆ ಮೈಥಿಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಪೊಲೀಸರು ನೋಡುತ್ತಾರೆ. ಇದಲ್ಲದೆ, ಆಕೆಯ ಪಕ್ಕದಲ್ಲೇ 8 ಮದ್ಯದ ಬಾಟಲ್ ಮತ್ತು ನಿದ್ದೆ ಮಾತ್ರೆಗಳು ಇದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

8 ಬಾಟಲ್ ಮದ್ಯದ ಜತೆ ನಿದ್ದೆ ಮಾತ್ರೆ ಬೆರೆಸಿ ಕುಡಿದಿರುವುದು ಮನೆಯಲ್ಲಿ ಸಿಕ್ಕ ಸಾಕ್ಷಿಗಳಿಂದ ತಿಳಿದುಬಂದಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಮೈಥಿಲಿಯನ್ನು ಸಮೀಪದ ಆಸ್ಪತ್ರೆಗೆ ಪೊಲೀಸರು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಅಲ್ಲದೆ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ ತನಿಖೆ ಕೈಗೊಂಡಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ, 2021ರ ಸೆಪ್ಟೆಂಬರ್ 27ರಂದು ಮೈಥಿಲಿ ತನ್ನ ಗಂಡ ಶ್ರೀಧರ್ ರೆಡ್ಡಿ ಮತ್ತು ಇತರೆ ನಾಲ್ವರ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಕಿರುಕುಳದ ದೂರು ನೀಡಿದ್ದರು. ಇದರ ಪ್ರಕಾರ ಪತಿ ಮಾನಸಿಕ ಹಿಂಸೆ ಜೊತೆಗೆ ವರದಕ್ಷಿಣೆ ಹಿಂಸೆ ನೀಡುತ್ತಿದ್ದಾರೆ ಎಂಬ ಉಲ್ಲೇಖ ಇದೆ. ಅಷ್ಟು ಮಾತ್ರವಲ್ಲದೇ ನನ್ನ ಪತಿ ಶ್ರೀಧರ್ ರೆಡ್ಡಿ ಮದುವೆಗೂ ಮುನ್ನ ರಜಿತಾ ಎಂಬ ಹುಡುಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರದಲ್ಲಿ ನಮ್ಮ
ಪತಿ ಆಗಾಗ ನನಗೆ ಕಿರುಕುಳ ನೀಡುತ್ತಿದ್ದ. ನನಗೆ ಮೋಸ ಮಾಡಿರುವ ಪತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮೈಥಿಲಿ ಆಗ್ರಹಿಸಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪಂಜಗುಟ್ಟ ಠಾಣಾ ಪೊಲೀಸರು ನಟಿಯ ಆತ್ಮಹತ್ಯೆ ಯತ್ನಕ್ಕೆ ಆಕೆಯ ಪತಿ ಮತ್ತು ಆತನ ಕುಟುಂಬಕ್ಕೆ ನಂಟು ಇದೆಯೇ ಅಥವಾ ಆಕೆ ಈ ಕೃತ್ಯ ಎಸಗಲು ಬೇರೆ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.