ಹೆಚ್ಚುವರಿ ಲಗೇಜ್ ಸಾಗಿಸುವವರಿಗೆ ರೇಲ್ವೆ ಸಚಿವಾಲಯದಿಂದ ಮಹತ್ವದ ಹೇಳಿಕೆ
ರೈಲುಗಳಲ್ಲಿ ಪ್ರಯಾಣಿಸುವ ಜನರು ಹೆಚ್ಚುವರಿ ಲಗೇಜ್ ಸಾಗಿಸುತ್ತಾರೆ. ಸಹ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗುತ್ತಿರುವುದರಿಂದ ಪ್ರಯಾಣಿಸುವಾಗ ಹೆಚ್ಚುವರಿ ಲಗೇಜ್ ಅನ್ನು ಸಾಗಿಸುವ ಬಗ್ಗೆ ರೈಲ್ವೆ ಆಡಳಿತವು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.
ರೈಲ್ವೇಯ ಈಗಿರುವ ನಿಯಮಗಳ ಪ್ರಕಾರ, ರೈಲಿನ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು 40 ರಿಂದ 70 ಕೆಜಿಯಷ್ಟು ಲಗೇಜ್ ಅನ್ನು ಮಾತ್ರ ಸಾಗಿಸಬಹುದು. ವಾಸ್ತವವಾಗಿ, ರೈಲ್ವೇಯ ಕೋಚ್‌ಗೆ ಅನುಗುಣವಾಗಿ ಲಗೇಜ್‌ನ ತೂಕವು ವಿಭಿನ್ನವಾಗಿರುತ್ತದೆ. ಸ್ಲೀಪರ್, ಎಸಿ ಚೇರ್ ಕಾರ್ ಮತ್ತು ಎಸಿ 3 ಟೈಯರ್ ಕೋಚ್‌ಗಳಲ್ಲಿ ಪ್ರಯಾಣಿಕರು 40 ಕೆಜಿ ವರೆಗೆ ಸಾಗಿಸಬಹುದು. 2ನೇ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರು 50 ಕೆಜಿ ಮತ್ತು 1ನೇ ಎಸಿ ದರ್ಜೆಯ ಪ್ರಯಾಣಿಕರು 70 ಕೆಜಿ ವರೆಗೆ ಸಾಗಿಸಬಹುದು. ಸಾಮಾನ್ಯ ವರ್ಗದಲ್ಲಿ ಈ ಮಿತಿ ಕೇವಲ 35 ಕೆ.ಜಿ.ವರೆಗೆ ಇರಲಿದೆ.
ಯಾರಾದರೂ ಹೆಚ್ಚು ಲಗೇಜ್‌ನೊಂದಿಗೆ ಪ್ರಯಾಣಿಸುತ್ತಿರುವುದು ಕಂಡುಬಂದರೆ, ಪ್ರಯಾಣದ ದೂರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುವ ದಂಡದೊಂದಿಗೆ ಹೆಚ್ಚುವರಿ ಲಗೇಜ್‌ಗೆ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ರೈಲ್ವೇ ಸಚಿವಾಲಯ ಎಚ್ಚರಿಸಿದೆ.
ಮೇ 29 ರಂದು, ರೈಲ್ವೇ ಸಚಿವಾಲಯವು ತನ್ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಟ್ವೀಟ್ ಮಾಡುವ ಮೂಲಕ, ಪ್ರಯಾಣದ ಸಮಯದಲ್ಲಿ ಹೆಚ್ಚುವರಿ ಲಗೇಜ್‌ನೊಂದಿಗೆ ಪ್ರಯಾಣಿಸದಂತೆ ಜನರಿಗೆ ಸಲಹೆ ನೀಡಿತ್ತು. ಟ್ವೀಟ್‌ನಲ್ಲಿ ಸಚಿವಾಲಯವು, ‘ಲಗೇಜ್ ಹೆಚ್ಚು ಇದ್ದರೆ ಪ್ರಯಾಣದ ಆನಂದವು ಅರ್ಧದಷ್ಟು ಇರುತ್ತದೆ!. ಹೆಚ್ಚು ಲಗೇಜ್ ಹೊತ್ತುಕೊಂಡು ರೈಲಿನಲ್ಲಿ ಪ್ರಯಾಣಿಸಬೇಡಿ. ಹೆಚ್ಚುವರಿ ಲಗೇಜ್ ಇದ್ದಲ್ಲಿ, ಪಾರ್ಸೆಲ್ ಕಚೇರಿಗೆ ಹೋಗಿ ಲಗೇಜ್ ಬುಕ್ ಮಾಡಿ’ ಎಂದು ತಿಳಿಸಿದೆ.