PFI ಗೆ ಸೇರಿದ 33 ಬ್ಯಾಂಕ್ ಖಾತೆ ಇಡಿ ವಶಕ್ಕೆ!! ಸೋನಿಯಾ, ರಾಹುಲ್ ಗೆ ಸಮನ್ಸ್ ನೀಡಿದ ಬೆನ್ನಲ್ಲೇ ಪಿಎಫ್ ಐ ನತ್ತ ವ್ಯಗ್ರ ನೋಟ ಬೀರಿದ ಇಡಿ
ಪಿಎಫ್ ಐ ಸಂಘಟನೆಗೆ ಸೇರಿದ್ದೆನ್ನಲಾದ ವಿವಿಧ ಬ್ಯಾಂಕುಗಳಲ್ಲಿರುವ 33 ಖಾತೆಗಳನ್ನು ಇಡಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ಹಾಗೂ ಬೇನಾಮಿ ವ್ಯವಹಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.
ವಿದೇಶದಿಂದ ಕದ್ದುಮುಚ್ಚಿ ವರ್ಗಾವಣೆಯಾಗಿರುವ ಹಣದ ಮೂಲ ಮತ್ತು ವ್ಯವಹಾರ ಹಾಗೂ ಉದ್ದೇಶಗಳ ಬಗ್ಗೆ ಲೆಕ್ಕ ಪತ್ರ ಹಾಗೂ ವಿವರಣೆ ನೀಡುವಂತೆ ನೋಟೀಸು ನೀಡಿದ್ದರೂ ವಿಫಲವಾದ ಕಾರಣಕ್ಕಾಗಿ ಇಡಿ ಇಲಾಖೆಯು ಈ ನಿರ್ಧಾರ ಕೈಗೊಂಡಿದೆ ಎಂದು ಖಚಿತ ಮೂಲಗಳು ಸ್ಪಷ್ಟಪಡಿಸಿವೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ(ಪಿಎಫ್ಐ) 59,12,051 ರೂ. ಇರುವ 10 ಖಾತೆಗಳು, ರಿಹಬ್ ಇಂಡಿಯಾ ಫೌಂಡೇಶನ್ನ 9,50,030 ರೂ. ಇರುವ 23 ಖಾತೆಗಳನ್ನು ಫ್ರೀಜ್ ಮಾಡಲಾಗಿದೆ.
ಇಸ್ಲಾಮಿಸ್ಟ್ ಸಂಘಟನೆಯನ್ನು 2006 ರಲ್ಲಿ ಕೇರಳದಲ್ಲಿ ರಚಿಸಲಾಗಿದ್ದು, ದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿದೆ. ಜಾರಿ ನಿರ್ದೇಶನಾಲಯವು ಪಿಎಫ್ಐಗೆ ಕುಣಿಕೆ ಬಿಗಿಗೊಳಿಸಿದೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ದಾಖಲಿಸಿದೆ. ಪಿಎಫ್ಐನ 23 ಬ್ಯಾಂಕ್ ಖಾತೆಗಳು ಮತ್ತು ಪಿಎಫ್ಐನ ಫ್ರೆಂಟ್ ಆರ್ಐಎಫ್ (ರಿಹ್ಯಾಬ್ ಇಂಡಿಯಾ ಫೌಂಡೇಶನ್) ನ 10 ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಸ್ಥಗಿತಗೊಳಿಸಿದೆ.
ಕಳೆದ ತಿಂಗಳ ಆರಂಭದಲ್ಲಿ ಜಾರಿ ನಿರ್ದೇಶನಾಲಯ
ಇಬ್ಬರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ
ನಾಯಕರಾದ ಕೇರಳ ಮೂಲದ ಅಬ್ದುಲ್ ರಜಾಕ್
ಪೀಡಿಯಕ್ಕಲ್ ಅಲಿಯಾಸ್ ಅಬ್ದುಲ್ ರಜಾಕ್ ಬಿಪಿ ಮತ್ತು ಅಶ್ರಫ್ ಖಾದಿರ್ ಅಲಿಯಾಸ್ ಅಶ್ರಫ್ ಎಂಕೆ ವಿರುದ್ಧ 22 ಕೋಟಿ ರೂ. ಅಕ್ರಮ ಹಣ ವರ್ಗಾವಣೆಗಾಗಿ ಪ್ರಕರಣ ದಾಖಲಿಸಿತ್ತು.