ಮರದ ಮೇಲಿದ್ದ ಕೋತಿಯನ್ನು ಅದ್ಭುತವಾಗಿ ಜಿಗಿದು ಹಿಡಿದು ತನ್ನ ಬೇಟೆಯನ್ನಾಗಿಸಿಕೊಂಡ ಚಿರತೆ !! |ಭಯಾನಕ ಹಂಟಿಂಗ್ ವೀಡಿಯೋ ವೈರಲ್

Share the Article

ಇದು ಇಂಟರ್ನೆಟ್ ಯುಗ. ನಮಗೆ ಬೇಕಾಗಿದ್ದೆಲ್ಲಾ ಬೆರಳ ತುದಿಯಲ್ಲೇ ಸಿಗುತ್ತದೆ. ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವೀಡಿಯೋಗಳಲ್ಲಿ ಕಾಡಿನ ಪ್ರಾಣಿಗಳ ವೀಡಿಯೋಗಳು ಸೇರಿವೆ. ಇತ್ತೀಚಿಗೆ ಟ್ವಿಟ್ಟರ್‌ನಲ್ಲಿ ಕೋತಿಯನ್ನು ಬೇಟೆಯಾಡಿದ ಚಿರತೆಯ ಅದ್ಭುತ ವೀಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ಅಪರೂಪದ ಭಯಾನಕ ವೀಡಿಯೋವನ್ನು ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವೀಡಿಯೋ ಕ್ಲಿಪ್‌ನಲ್ಲಿ ಹಸಿದ ಚಿರತೆ ಮರವನ್ನು ಹತ್ತಿ ಕೋತಿಯ ಮೇಲೆ ದಾಳಿ ಮಾಡುವುದನ್ನು ಕಾಣಬಹುದು.   ಮರದಿಂದ ಇಳಿಯುವಾಗ ಚಿರತೆ ತನ್ನ ಬೇಟೆಯನ್ನು ಬಾಯಿಯಲ್ಲಿ ಬಿಗಿಯಾಗಿ ಹಿಡಿದುಕೊಂಡಿರುವುದು ಕಂಡುಬರುತ್ತದೆ.

ಪನ್ನಾ ಟೈಗರ್ ರಿಸರ್ವ್ ಅಧಿಕಾರಿಗಳು ಈ ವೀಡಿಯೋವನ್ನು ಚಿತ್ರೀಕರಿಸಿದ್ದಾರೆ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊವನ್ನು ಹಂಚಿಕೊಂಡ ಅವರು, ‘ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿರತೆ ಮಂಗಗಳನ್ನು ಬೇಟೆಯಾಡುವ ಅಪರೂಪದ ದೃಶ್ಯ’ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ, ಈ ವೀಡಿಯೊವನ್ನು ಇದುವರೆಗೂ 3,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇದಲ್ಲದೆ, ನೂರಾರು ನೆಟ್ಟಿಗರು ಇದನ್ನು ಲೈಕ್ ಮಾಡಿದ್ದಾರೆ. ಈ ಭಯಾನಕ ವೀಡಿಯೊವನ್ನು ನೋಡಿದ ತಕ್ಷಣ ಇಂಟರ್ನೆಟ್ ಬಳಕೆದಾರರು ಆಶ್ಚರ್ಯಚಕಿತರಾಗಿದ್ದಾರೆ.

ವೈರಲ್ ವೀಡಿಯೋ
Leave A Reply

Your email address will not be published.