ಮಂಗಳೂರು : “ನಾಯಿಂಡೆ ಮೋನೆ” ಎಂದು ಪೊಲೀಸರನ್ನು ನಿಂದಿಸಿದ್ದ SDPI ಕಾರ್ಯಕರ್ತರ ಅರೆಸ್ಟ್ !!!
ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಎಸ್.ಡಿ.ಪಿ.ಐ ಸಭೆಗೆ ಆಗಭಿಸಿದ ಕೆಲವೊಂದು ಕಾರ್ಯಕರ್ತರಿಂದ ಪೊಲೀಸರಿಗೆ ನಿಂದನೆ ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ 6 ಎಸ್ ಡಿಪಿಐ ಕಾರ್ಯಕರ್ತರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದು, ನೌಶಾದ್, ಹೈದರಾಲಿ ಬಂಧಿತ ಮುಖ್ಯ ಆರೋಪಿಗಳು . ಆರೋಪಿಗಳಿಗೆ ಆಶ್ರಯ ನೀಡಿದ ಇತರ ನಾಲ್ವರನ್ನು ಕೂಡ ಬಂಧಿಸಿದ್ದಾರೆ.
ಮೇ.27 ರಂದು ನಗರ ಹೊರವಲಯದ ಕಣ್ಣೂರಿನಲ್ಲಿ ನಡೆದಿದ್ದ ಎಸ್.ಡಿ.ಪಿ.ಐ ಸಮಾವೇಶಕ್ಕೆ ಬೈಕ್ ಮತ್ತು ಕಾರ್ ನಲ್ಲಿ ಬಂದ ಸವಾರ, ಸಹ ಸವಾರದಿಂದ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ವೀಡಿಯೋ ವೈರಲ್ ಆಗಿತ್ತು.
ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸಂಗನ ಗೌಡ ಮೈಮೇಲೆ ಹಾಯಿಸುವಂತೆ ಬೈಕ್ ಸವಾರಿ ಕೂಡ ಮಾಡಿದ್ದರು. ಕರ್ತವ್ಯ ನಿರತ ಪೊಲೀಸರಿಗೆ ಅಡೆತಡೆಯುಂಟು ಮಾಡಿ ನಿಂದಿಸಿದ್ದರು ಎಂದು ಘಟನೆ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
ಒಂದು ಬೈಕ್ ಹಾಗೂ ಕಾರಿನಲ್ಲಿ 11 ಜನರ ಗುಂಪು ಈ ಕೃತ್ಯದಲ್ಲಿ ಭಾಗವಹಿಸಿತ್ತು ಎಂದು ಪೊಲೀಸರು ತಿಳಿಸಿದ್ದರು. ಪಡೀಲ್ ನಿಂದ ಕಾರ್ಯಕ್ರಮ ಸ್ಥಳಕ್ಕೆಅಜಾಗರೂಕತೆ, ಅತಿವೇಗ ಚಾಲನೆ ಮಾಡಿದ್ದಾರೆ, ಚೆಕ್ ಪೋಸ್ಟ್ ಸಿಬ್ಬಂದಿಗಳ ತಪಾಸಣೆಗೂ ಒಳಪಡದೇ ಹೋಗಿದ್ದಾರೆ.
ಈ ಪೊಲೀಸ್ ನಿಂದನೆ ವೈರಲ್ ವೀಡಿಯೋ ಆಧರಿಸಿ ಮೇ.28ರಂದು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಬೆಂಗಳೂರು ಮತ್ತು ಮೈಸೂರಿನಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ, ಆರೋಪಿ ನೌಶಾದ್ ಬೆಂಗಳೂರಿನಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ, ಹೈದರಾಲಿ ಮೈಸೂರಿನಲ್ಲಿ ಜ್ಯೂಸ್ ಸೆಂಟರ್ ನಲ್ಲಿ ಕೆಲಸ ಮಾಡ್ತಿದ್ದ ಎಂದು ಕಮಿಷನರ್ ತಿಳಿಸಿದ್ದಾರೆ.
ನೌಶಾದ್ ಬಂಧನಕ್ಕೆ ತೆರಳಿದಾಗ ತಪ್ಪಿಸಲು ಯತ್ನಿಸಿದ್ದಾನೆ ,ಪಿ.ಎಸ್.ಐ ತಳ್ಳಿ ಸಿಬ್ಬಂದಿಗೆ ಗಾಯವಾಗಿದೆ. ಈ ಕುರಿತು ಬೆಂಗಳೂರು ಮಡಿವಾಳ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ನೇರ ಭಾಗಿಯಾದವರ ಇತರ ಒಂಭತ್ತು ಜನರ ಬಂಧನ ,ಯಾರು ಏನು ಎಂಬ ಎಲ್ಲ ಮಾಹಿತಿ ಸಿಕ್ಕಿದೆ, ಶೀಘ್ರವಾಗಿ ಎಲ್ಲರ ಬಂಧನ ಆಗುತ್ತೆ ಎಂದು ಮಂಗಳೂರಿನಲ್ಲಿ ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.
ಆಗಿದ್ದೇನು?: ಎಸ್‌ಡಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗಳಿಗೆ ನಿಂದಿಸಿ, ಆರೋಪಿಗಳ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳವಾರ ಆರೋಪಿಗಳನ್ನು ಮತ್ತು ಅವರಿಗೆ ಆಶ್ರಯ ನೀಡಿದವರನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ, ಪ್ರಮುಖ ಆರೋಪಿತರಾದ ನೌಷಾದ್ ಮತ್ತು ಹೈದರಾಲಿ ಇತ್ತೀಚೆಗೆ ಕೇರಳದ ಅಲಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರಿಗೆ ಬೈಯ್ಯುವ ವೀಡಿಯೋಗಳು ವಾಟ್ಸಪ್‌ನಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿ ಪ್ರಭಾವಿತರಾಗಿದ್ದು ಮತ್ತು ಕಣ್ಣೂರು ಕಾರ್ಯಕ್ರಮದ ಸಂದರ್ಭದಲ್ಲಿ ಸ್ಥಳೀಯ ಎಸ್.ಡಿ.ಪಿ.ಐ. ನಾಯಕರು ಮತ್ತು ಕಾರ್ಯಕ್ರಮದ ಆಯೋಜಕರುಗಳು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಅದಕ್ಕೆ ದಾರಿಯುದ್ದಕ್ಕೂ ಸಂಘಟನೆಗಳ ವಿರುದ್ಧ ಮತ್ತು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಬೇಕು, ನಿಮಗೆ ಏನಾದರೂ ತೊಂದರೆಯಾದಲ್ಲಿ ನಿಮಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡಿ ನಿಮ್ಮನ್ನು ರಕ್ಷಿಸುವ ಜವಾಬ್ದಾರಿ ನಮ್ಮದು ಎಂದು ತಮ್ಮನ್ನು ಹುರಿದುಂಬಿಸಿರುವುದಾಗಿ ಪೊಲೀಸರಿಗೆ ತಿಳಿಸಿದರು.
ಅಲ್ಲದೇ ತಾವು ಕಾರ್ಯಕ್ರಮ ಮುಗಿದ ಕೂಡಲೇ ಮೈಸೂರು ಮತ್ತು ಬೆಂಗಳೂರಿಗೆ ಹೋಗಿ ಪೊಲೀಸರ ಕಣ್ತಪ್ಪಿಸಿ ಅಡಗಿ ಕುಳಿತು ಅಲ್ಲಿಂದ ಮುಂದೆ ಕೇರಳ, ಕಾಸರಗೋಡು ಪರಿಸರದಲ್ಲಿ ಆಶ್ರಯ ಪಡೆದು ಪೊಲೀಸರಿಗೆ ಸಿಗದಂತೆ ಯೋಜನೆ ರೂಪಿಸಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.