ಬೈಕ್ ನಲ್ಲಿ ಬಂದ ಬುರ್ಖಾಧಾರಿಗಳಿಂದ 8 ಲೀಟರ್ ಹಾಲು ಕಳ್ಳತನ !! | ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ರಾಜ್ಯದಲ್ಲಿ ಹಿಜಾಬ್ ವಿವಾದ ಇನ್ನು ಮುಗಿದಿಲ್ಲ. ಆಗಾಗ ಕಾಣಿಸಿಕೊಳ್ಳುತ್ತಲೇ ಇದೆ. ಹೀಗಿರುವಾಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬುರ್ಖಾ ಧರಿಸಿದ ಕಳ್ಳರು 8 ಲೀಟರ್ ಹಾಲು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

 

ಆಲ್ದೂರು ಪಟ್ಟಣದ ಅಂಬೇಡ್ಕರ್ ಸರ್ಕಲ್‍ನ ಪೊಲೀಸ್ ಸ್ಟೇಷನ್ ಮುಂಭಾಗ ಕ್ರೇಟ್‍ನಲ್ಲಿ ಹಾಲನ್ನು ಇಡಲಾಗಿತ್ತು. ನಸುಕಿನ ಜಾವ ಬೈಕ್‍ನಲ್ಲಿ ಬಂದ ಇಬ್ಬರು ಬುರ್ಖಾಧಾರಿಗಳು ಕ್ರೇಟ್‍ನಲ್ಲಿಟ್ಟಿದ್ದ ಹಾಲನ್ನು ಕದ್ದು ಪರಾರಿಯಾಗಿದ್ದಾರೆ.

ಬುರ್ಖಾ ಧರಿಸಿ ಕಳ್ಳತನ ಮಾಡುತ್ತಿರುವುದು ಇದೇನು ಮೊದಲಲ್ಲ. ಇಂತಹ ಹಲವಾರು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿವೆ. ಚಿಕ್ಕಮಂಗಳೂರಿನ ಈ ಬುರ್ಖಾ ಕಳ್ಳರ ಕೃತ್ಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Leave A Reply

Your email address will not be published.