ರಷ್ಯಾ ಅಧ್ಯಕ್ಷ ಪುಟಿನ್ ಜೀವಿತಾವಧಿ ಇನ್ನು ಕೇವಲ 3 ವರ್ಷವಂತೆ !!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಅವರು ಇನ್ನು ಗರಿಷ್ಠವೆಂದರೆ ಮೂರು ವರ್ಷಗಳ ಕಾಲ ಬದುಕಬಹುದಂತೆ. ಹೀಗೆಂದು ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್ ಎಸ್ ಬಿಯ ಸ್ಫೋಟಕ ವರದಿಯೊಂದು ಹೇಳಿದೆ.

 

ವ್ಲಾಡಿಮಿರ್ ಪುಟಿನ್ ಗರಿಷ್ಠ ಮೂರು ವರ್ಷ ಬದುಕಬಹುದೆಂದು ವೈದ್ಯರು ಹೇಳಿರುವುದಾಗಿ ಗುಪ್ತಚರ ಸಂಸ್ಥೆಯ ಮೂಲವನ್ನು ಉಲ್ಲೇಖಿಸಿ ಮಿರರ್ ವರದಿ ಮಾಡಿದೆ. 69 ವರ್ಷದ ರಷ್ಯಾದ ಅಧ್ಯಕ್ಷರು ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಮಿರರ್ ವರದಿ ಮಾಡಿದೆ. ಪುಟಿನ್ ಅವರ ಕಣ್ಣಿನ ದೃಷ್ಟಿ ಗಂಭೀರವಾಗಿ ಹದಗೆಟ್ಟಿದೆ. ಅವರ ಬೆರಳುಗಳು ಕೂಡಾ ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ವರದಿಯಲ್ಲಿ ಹೇಳಿದೆ.

ಗುಪ್ತಚರ ಸಂಸ್ಥೆಯ ವರದಿಯನ್ನು ಬ್ರಿಟನ್ನಲ್ಲಿ ಪುಟಿನ್ ಹತ್ಯೆ ಮಾಡಲು ಸಂಚು ರೂಪಿಸಿರುವವರಿಗೆ ತಿಳಿಯದಂತೆ ಬಚ್ಚಿಡಲಾಗಿದೆ. ದುರ್ಬಲತೆಗೆ ಕಾರಣವಾಗುತ್ತದೆ ಎಂಬ ಭಯದಿಂದ ಗ್ಲಾಸ್ ಧರಿಸಲು ಪುಟಿನ್ ತಿರಸ್ಕರಿಸುತ್ತಿದ್ದಾರೆ. ತನ್ನ ಕೆಳಗೆ ಕೆಲಸ ಮಾಡುವವರ ವಿರುದ್ಧ ಅವರು ಇತ್ತೀಚೆಗೆ ಅನಿಯಂತ್ರಿತ ಕೋಪದಿಂದ ವಾಗ್ದಾಳಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ರಷ್ಯಾದ ಟೆಲಿಗ್ರಾ ಚಾನೆಲ್ ವೊಂದರಿಂದ ಪುಟಿನ್ ಆರೋಗ್ಯ ಕ್ಷೀಣದ ಮಾಹಿತಿ ಹೊರಗೆ ಬಂದ ನಂತರ ಈ ಬೆಳವಣಿಗೆ ನಡೆದಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ. ಪುಟಿನ್ ಇದೇ ತಿಂಗಳಲ್ಲಿ ಕ್ಯಾನ್ಸರ್ ಸರ್ಜರಿಗೆ ಒಳಗಾಗಿದ್ದರು. ವೈದರ ಸಲಹೆ, ಚಿಕಿತ್ಸೆಯಿಂದ ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಟೆಲಿಗ್ರಾಮ್ ಚಾನೆಲ್ ಜನರಲ್ ಎಸ್ ವಿಆರ್ ವರದಿ ಮಾಡಿದೆ.

Leave A Reply

Your email address will not be published.