ಹೊಸ ಗೌಪ್ಯತೆ ನೀತಿ ನವೀಕರಿಸಲು ಮುಂದಾದ ಫೇಸ್ಬುಕ್ – ಜುಲೈ 26ರಿಂದಲೇ ಬದಲಾವಣೆ!
ಜನಪ್ರಿಯ ಮಾಧ್ಯಮಗಳಲ್ಲಿ ಒಂದಾದ ಫೇಸ್ಬುಕ್, ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದೆ. ಇದೀಗ ಹೊಸ ಗೌಪ್ಯತೆ ನೀತಿ ನವೀಕರಿಸಲು ಹೊರಟಿದ್ದು, ಜುಲೈ 26 ರಿಂದಲೇ ಅನ್ವಯಿಸಲಿದೆ ಎಂದು ತಿಳಿಸಿದೆ.
ಬಳಕೆದಾರರ ಡೇಟಾ ಮತ್ತು ಗೌಪ್ಯತೆ ನೀತಿಗೆ ಸಂಬಂಧಿಸಿದಂತೆ ಕಳೆದ ಕೆಲವು ತಿಂಗಳುಗಳಿಂದ ಐಫೋನ್ನೊಂದಿಗೆ ವಿವಾದದಲ್ಲಿದ್ದ ಫೇಸ್ಬುಕ್, ಐಫೋನ್ ನ ಕಟ್ಟಿನಿಟ್ಟಿನ ಕ್ರಮದಿಂದಾಗಿ ಸಾಕಷ್ಟು ನಷ್ಟವನ್ನು ಫೇಸ್ಬುಕ್ ಅನುಭವಿಸಿದೆ. ಅಲ್ಲದೆ, ಅದರ ಲಕ್ಷಾಂತರ ಬಳಕೆದಾರರನ್ನು ಕಡಿತಗೊಳಿಸಲಾಗಿದೆ. ನಿರಂತರ ನಷ್ಟಗಳ ಮಧ್ಯೆ, ಈಗ ಮೆಟಾ ಈ ಪ್ಲಾರ್ಟ್ಫಾರ್ಮ್ಗಾಗಿ ಗೌಪ್ಯತೆ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದೆ.
ಇದಕ್ಕೆ ಸಂಬಂಧಿಸಿದಂತೆ, ಕಂಪನಿಯು ಈಗ ಬಳಕೆದಾರರಿಗೆ ಅಧಿಸೂಚನೆಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಮೆಟಾ ತನ್ನ ಗೌಪ್ಯತಾ ನೀತಿಯನ್ನು ನವೀಕರಿಸಲು ಹೊರಟಿದೆ ಎಂದು ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ. ಮೆಟಾ ತನ್ನ ಬಳಕೆದಾರರ ಮಾಹಿತಿಯನ್ನು ಹೇಗೆ ಬಳಸುತ್ತದೆ ಎಂಬುದನ್ನು ಜನರು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ವ್ಯಾಯಾಮವನ್ನು ಮಾಡಲಾಗುತ್ತಿದೆ.
ಭಾರತದಲ್ಲಿ ಬಳಕೆದಾರರಿಗೆ ಮಾಹಿತಿಯನ್ನು ತಿಳಿಸಲು ಕಂಪನಿಯು ಈ ಅಧಿಸೂಚನೆಯನ್ನು ಕಳುಹಿಸುತ್ತಿದೆ ಎಂದು ಸ್ಪಷ್ಟಪಡಿಸಲಾಗಿದ್ದು, ಈ ಅಧಿಸೂಚನೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಬೇಕಾಗಿಲ್ಲ ಎಂದು ಹೇಳಿದೆ. ಆದರೆ ಕಂಪನಿಯ ಹೊಸ ನೀತಿಯು ಭಾರತದಲ್ಲಿ ಬದ್ಧವಾಗಿರುವುದಿಲ್ಲ. ವಾಸ್ತವವಾಗಿ, ಭಾರತ ಸರ್ಕಾರವು ಕಳೆದ ವರ್ಷವೇ ಮೆಟಾಗೆ ಗೌಪ್ಯತೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ನೀಡಿತ್ತು ಮತ್ತು ಜನರ ಗೌಪ್ಯತೆಯನ್ನು ಉಲ್ಲಂಘಿಸುವ ಯಾವುದೇ ನೀತಿಯನ್ನು ಸರ್ಕಾರವು ಸ್ವೀಕರಿಸುವುದಿಲ್ಲ ಎಂದು ಹೇಳಿದೆ.
ವರದಿಯ ಪ್ರಕಾರ, ಈ ಹೊಸ ನೀತಿಯು ಫೇಸ್ಬುಕ್ ಹೊರತುಪಡಿಸಿ ಇನ್ಸ್ಟಾಗ್ರಾಮ್ , ಮೆಸ್ಸೆಂಜರ್ ಮತ್ತು ಇತರ ಮೆಟಾ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಆದರೆ ವಾಟ್ಸ್‌ಆಪ್ ಅನ್ನು ಅದರಿಂದ ಹೊರಗಿಡಲಾಗಿದೆ. ಹೀಗಾಗಿ ವಾಟ್ಸಪ್ ಹಳೆಯ ಗೌಪ್ಯತೆ ನೀತಿಯ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ.