ಸ್ಥಗಿತಗೊಂಡಿದ್ದ ನೂಜಿಬಾಳ್ತಿಲ ಗ್ರಾ.ಪಂ. ಸಭಾಂಗಣ ನಿರ್ಮಾಣ ಕಾಮಗಾರಿ ಪ್ರಾರಂಭ
ಹಿಂದಿನ ಆಡಳಿತ ಮಂಡಳಿಯೇ ಕಾಮಗಾರಿ ಸ್ಥಗಿತಕ್ಕೆ ಕಾರಣರಾಗಿದ್ದರು-ಚಂದ್ರಶೇಖರ ಹಳೆನೂಜಿ
ಕಡಬ: 2015-16ರಲ್ಲಿ ನೂಜಿಬಾಳ್ತಿಲ ಗ್ರಾಮಕ್ಕೆ ಗ್ರಾಮವಿಕಾಸ ಯೋಜನೆಯಡಿ ಮಂಜೂರುಗೊಂಡಿದ್ದ ಅನುದಾನದಲ್ಲಿ ಗ್ರಾ.ಪಂ. ಸಭಾಂಗಣ ನಿರ್ಮಾಣ ಕಾಮಗಾರಿ ಬಾಕಿಯಾಗಿದ್ದು ಈ ಕಾಮಗಾರಿಗೆ ಮೇ.29ರಂದು ಚಾಲನೆ ನೀಡಲಾಗಿದೆ.
ಗ್ರಾಮ ವಿಕಾಸ ಯೋಜನೆಯಡಿ ನೂಜಿಬಾಳ್ತಿಲಕ್ಕೆ ಸುಮಾರು 75 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿಗಳು ನಡೆದಿತ್ತು, ಗ್ರಾ.ಪಂ. ಸಭಾಂಗಣ ನಿರ್ಮಾಣ ಕ್ಕೆ 16 ಲಕ್ಷ ಅನುದಾನ ಮೀಸಲಿಟ್ಟಿದ್ದು ಅದರಲ್ಲಿ 4 ಲಕ್ಷದ ಕಾಮಗಾರಿ ನಡೆದಿತ್ತು, ಉಳಿದ ಕಾಮಗಾರಿ ಸ್ಥಗಿತಗೊಂಡಿತ್ತು, ಇದೀಗ 12 ಲಕ್ಷದ ಅನುದಾನದಲ್ಲಿ ಸ್ಲಾಬ್, ಇಂಟರ್ಲಾಕ್ ಸೇರಿದಂತೆ ಸಭಾಂಗಣ ನಿರ್ಮಾಣ ಕಾಮಗಾರಿಯನ್ನು ಮೇ.29ರಂದು ಪ್ರಾರಂಭಿಸಲಾಗಿದೆ.
ಹಿಂದಿನ ಆಡಳಿತ ಮಂಡಳಿಯೇ ಕಾಮಗಾರಿ ಸ್ಥಗಿತಕ್ಕೆ ಕಾರಣರಾಗಿದ್ದರು-ಚಂದ್ರಶೇಖರ ಹಳೆನೂಜಿ
ಈ ಬಗ್ಗೆ ಮಾಹಿತಿ ನೀಡಿದ ನೂಜಿಬಾಳ್ತಿಲ ಗ್ರಾ.ಪಂ. ಸದಸ್ಯ ಚಂದ್ರಶೇಖರ ಹಳೆನೂಜಿಯವರು, ಗ್ರಾಮವಿಕಾಸ ಯೋಜನೆಯ ಸಮಿತಿಯ ಅಧ್ಯಕ್ಷರಾಗಿದ್ದ ಅಂದು ಶಾಸಕರಾಗಿದ್ದ ಎಸ್. ಅಂಗಾರ ಅವರನ್ನು ಹಿಂದಿನ ಆಡಳಿತ ಮಂಡಳಿ ವಿಶ್ವಾಸಕ್ಕೆ ತೆಗೆದುಕೊಳ್ಳದ ಹಿನ್ನಲೆಯಲ್ಲಿ ಅಂದು ಕಾಮಗಾರಿ ಅರ್ಧಕ್ಕೆ ನಿಂತಿತ್ತು, ಇದೀಗ ಈಗೀನ ಆಡಳಿತ ಮಂಡಳಿ ಕ್ಷೇತ್ರದ ಶಾಸಕ, ಸಚಿವ ಎಸ್.ಅಂಗಾರ ಅವರಿಗೆ ಒತ್ತಡ ಹಾಕಿ ಕಾಮಗಾರಿ ನಡೆಸಲು ಅನುದಾನ ಮಂಜೂರುಗೊಳಿಸಲಾಗಿದೆ, 2015-16ರಲ್ಲಿ ಪ್ರಾರಂಭವಾಗಬೇಕಿದ್ದ ಕಾಮಗಾರಿ ಹಿಂದಿನ ಆಡಳಿತ ಮಂಡಳಿಯ ಇಚ್ಚಾಶಕ್ತಿ ಕೊರತೆಯಿಂದಲೇ ಬಾಕಿಯಾಗಿದೆ, ಇದೀಗ ನಮ್ಮ ಪ್ರಯತ್ನದಿಂದ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.