ಹೈಕೋರ್ಟ್ ನ್ಯಾಯಮೂರ್ತಿಗಳ ಒಳ ಉಡುಪು ಕೇಸರಿ ಬಣ್ಣದ್ದಾಗಿರುತ್ತದೆ : ಪಿಎಫ್‌ಐ ಮುಖಂಡನ ವಿವಾದಾತ್ಮಕ ಹೇಳಿಕೆ

ಕಳೆದ ವಾರ ಪಿಎಫ್‌ಐ ಅಲಪ್ಪುಳದಲ್ಲಿ ನಡೆದ ಮೆರವಣಿಗೆಯಲ್ಲಿ ಬಾಲಕನೊಬ್ಬ ಹಿಂದೂ ಮತ್ತು ಕ್ರೈಸ್ತರು ಅಂತ್ಯಕ್ರಿಯೆಗಳಿಗೆ ಸಿದ್ಧರಾಗುವಂತೆ ಘೋಷಣೆ ಕೂಗಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಅದರ ಬಗ್ಗೆ ಕೇರಳ ಹೈಕೋರ್ಟ್ ಆತಂಕ ವ್ಯಕ್ತಪಡಿಸಿತ್ತು. ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಮೆರವಣಿಗೆಯ ಆಯೋಜಕರನ್ನೇ ಹೊಣೆಯಾಗಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಹೇಳಿತ್ತು.

 

ಇದಕ್ಕೆ ಪ್ರತಿಯಾಗಿ, ಹೈಕೋರ್ಟ್ ನ್ಯಾಯಮೂರ್ತಿಗಳ ಒಳ ಉಡುಪು ಕೇಸರಿಯಾಗಿರುತ್ತದೆ ಎನ್ನುವ ಮೂಲಕ ಕೇರಳದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮುಖಂಡ ಯಾಹಿಯಾ ತಂಗಾಲ್ ಅವರು ವಿವಾದಾತ್ಮಕ ಹೇಳಿಕೆ ನೀಡಿ, ಈಗ ವಿವಾದ ಸೃಷ್ಟಿ ಮಾಡಿದ್ದಾರೆ.

ಅಲಪ್ಪುಳದಲ್ಲಿ ಶನಿವಾರ ನಡೆದ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ತಂಗಾಲ್, “ನ್ಯಾಯಾಲಯಗಳು ಈಗ ಬಹಳ ಸುಲಭವಾಗಿ ಆಘಾತಕ್ಕೆ ಒಳಗಾಗುತ್ತಿವೆ. ನಮ್ಮ ಅಲಪ್ಪುಳ ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೇಳಿದ ಬಳಿಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಆಘಾತ ಉಂಟಾಗುತ್ತಿದೆ. ಇದಕ್ಕೆ ಕಾರಣ ಏನೆಂದು ನಿಮಗೆ ಗೊತ್ತೇ? ಏಕೆಂದರೆ ಅವರ ಒಳ ಉಡುಪು ಕೇಸರಿ, ಅದು ಕೇಸರಿ ಆಗಿರುವುದರಿಂದ, ಅವರು ಬಹಳ ಬೇಗ ಕೆರಳುತ್ತಾರೆ. ನಿಮಗೆ ಸುಡುವ ಅನುಭವವಾಗುತ್ತದೆ. ಅದು ನಿಮಗೆ ಕಸಿವಿಸಿ ಉಂಟುಮಾಡುತ್ತದೆ” ಎಂದು ನ್ಯಾಯಮೂರ್ತಿಗಳು ಒಳ ಮನಸ್ಸಿನಲ್ಲಿ ಬಿಜೆಪಿ ಹಾಗೂ
ಆರ್‌ಎಸ್ಎಎಸ್ ಪರವಾದ ಒಲವು ಹೊಂದಿದ್ದಾರೆ ಎಂದು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಬಾಲಕ ನೀಡಿದ ಹೇಳಿಕೆಯ ಸಂಬಂಧ ಪೊಲೀಸರು 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು.ಆದರೆ ಕುಟುಂಬ ತಲೆಮರೆಸಿಕೊಂಡಿತ್ತು. ಬಾಲಕನ ತಂದೆಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದರು.

Leave A Reply

Your email address will not be published.