ಗುಜರಾತ್ ಟೈಟಾನ್ಸ್ ಕೆಂಪಗೆ ಕಾದ ಉಕ್ಕಿನ ಉರಿ ಚೆಂಡುಗಳ ಜತೆ ಹಾಜರ್ | ಬಲಿಷ್ಟ ಕಬ್ಬಿಣದ ಬ್ಯಾಟ್ ಹಿಡಿದು ವಿಕೆಟ್ ಕವರ್ ಮಾಡಿ ನಿಂತ ರಾಜಸ್ಥಾನ್ ರಾಯಲ್ಸ್ ಫೈನಲ್

ಮುಂಬೈ: ಐಪಿಎಲ್-15 ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗ ಅಗ್ರ ಕ್ರಮಾಂಕ ಪಡೆದು ಹುರುಪಿನಲ್ಲಿ ತಂಡವನ್ನು ಹುರಿಗೊಳಿಸಿಕೊಂಡು ನಿಂತಿರುವ ತಂಡಗಳಾದ ಗುಜರಾತ್ ಟೈಟಾನ್ಸ್ ಹಾಗೂ ಮತ್ತು ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಪಟ್ಟಕ್ಕಾಗಿ ಕೊಂಬು ಮಸೆಯುತ್ತಾ ನಿಂತಿವೆ.

ಗುಜರಾತ್ ನ ಅಹಮದಾಬಾದ್‌ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ಇಂದು ರಾತ್ರಿ 8 ಕ್ಕೆ ಮಾಡಿ ಮಡಿ ಪಂದ್ಯ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ನೂತನವಾಗಿ ಸೇರ್ಪಡೆಗೊಂಡ ಗುಜರಾತ್ ಟೈಟಾನ್ಸ್ ತಂಡವು ಮೊದಲ ಪ್ರಯತ್ನದಲ್ಲೇ ಫೈನಲ್ಸ್ ಪ್ರವೇಶಿಸಿದ್ದು, ಈ ಬಾರಿ ಚಾಂಪಿಯನ್ ಆಗುವ ನಿರೀಕ್ಷೆ ಮೂಡಿಸಿದೆ. ಅತ್ತ 2008ರ ಬಳಿಕ ಫೈನಲ್ ನಿಂದ ತುಂಬಾ ದೂರ ಉಳಿದಿದ್ದ ರಾಜಾಸ್ಥಾನ ರಾಯಲ್ಸ್ ಸಹ 2ನೇ ಬಾರಿಗೆ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಳ್ಳುವ ಆತ್ಮವಿಶ್ವಾಸದಿಂದ ಬೀಗುತ್ತಿದೆ.

ಐಪಿಎಲ್ ಆರಂಭಗೊಂಡಾಗ ಈ ಎರಡೂ ತಂಡಗಳ ಬಗ್ಗೆ ಏನೇನು ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಇವೆರಡು ಟೀಮು ಗಳು ಲೀಗ್‌ನಲ್ಲೇ ಹೊರ ತಳ್ಳಲ್ಪಡುತ್ತದೆ ಎಂಬ ಟೀಕೆಗಳನ್ನು ಮೀರಿ ತಂಡದ ನಾಯಕತ್ವ ಮತ್ತು ಆಟಗಾರರು ತಮ್ಮ ಪ್ರತಿಭೆ ಮತ್ತು ಪರಿಶ್ರಮವನ್ನು ಸಾಬೀತುಪಡಿಸಿದ್ದಾರೆ. ತಂಡದ ನಾಯಕರಾದ ಹಾರ್ದಿಕ್ ಪಾಂಡ್ಯ ಹಾಗೂ ಸಂಜು ಸ್ಯಾಮ್ಸನ್ ಫೈನಲ್‌ವರೆಗೂ ತಮ್ಮ ತಂಡವನ್ನು ಸಮತೋಲಿತವಾಗಿ ಮುನ್ನಡೆಸಿದ್ದಾರೆ.

ಟೈಟಾನ್ಸ್ ಬೌಲಿಂಗ್, ರಾಯಲ್ಸ್ ಬ್ಯಾಟಿಂಗ್:
ರಾಜಾಸ್ಥಾನ್‌ ರಾಯಲ್ಸ್‌ನ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾನ್ಸನ್, ದೇವದತ್ ಪಡಿಕ್ಕಲ್, ಶಿಮೊನ್ ಹೆಟ್ಮಾಯರ್ ರಾಜಾಸ್ಥಾನ್ ರಾಯಲ್ಸ್‌ನ ಕಬ್ಬಿಣದ ಬ್ಯಾಟಿಂಗ್ ಶಕ್ತಿಯ ಬಲಿಷ್ಠ ಬ್ಯಾಟರ್‌ಗಳು ಅಂತರಿಕ್ಷಕ್ಕೆ ಬಾಲ್ ಎಗರಿಸಿ ಮಾಯ ಮಾಡಲಿದ್ದಾರೆ. ಅದಕ್ಕೆ ಪ್ರತಿಯಾಗಿ ಉಕ್ಕಿನ ಉರಿ ಚೆಂಡುಗಳನ್ನು ಗುಜರಾತ್ ಟೈಟಾನ್ಸ್ ರೆಡಿ ಮಾಡಿ ಕಾವು ಕೊಟ್ಟು ಕೆಂಪಗೆ ಕಾಯಿಸಿ ಹೊಂಚು ಹಾಕಿ ಕೂತಿವೆ. ಗುಜರಾತ್ ಟೈಟಾನ್ಸ್ ನ ಮೊಹಮದ್ ಶಮಿ, ರಶೀದ್ ಖಾನ್, ಅಲ್ವಾರಿ ಜೋಸೆಫ್, ಯಶ್ ದಯಾಳ್, ಸಾಯಿ ಕಿಶೋರ್‌ರ ಬೌಲರ್‌ಗಳ ವೇಗ ಮತ್ತು ಯುಕ್ತಿ ಪಿಚ್ ಪೂರಾ ಉಡೀಸ್ ಆಗೋದ್ರಲ್ಲಿ ಯಾವ ಅನುಮಾನವೂ ಇಲ್ಲ.

ಅತ್ತ 818 ರನ್‌ಗಳನ್ನು ಗಳಿಸಿ ಆರೆಂಜ್‌ಕ್ಯಾಪ್ ಮುಡಿಗೇರಿಸಿಕೊಂಡಿರುವ ಜೋಸ್ ಬಟ್ಲರ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವರನ್ನು ತಡೆಯುವುದು ಎಂಥಹಾ ಬೌಲರ್‌ಗಳಿಗೂ ಸವಾಲಾಗಿದೆ. ಈಗಾಗಲೇ ಮುಖಾಮುಖಿಯಾಗಿರುವ 2 ಪಂದ್ಯಗಳಲ್ಲಿ ಟೈಟಾನ್ಸ್ ಗೆಲುವು ಸಾಧಿಸಿದ್ದು, ಅಂತಿಮ ಫೈನಲ್‌ ಪಂದ್ಯದಲ್ಲಿ ಆರ್‌ಆರ್ ಸೇಡು ತೀರಿಸಿಕೊಳ್ಳುವ ಹಠ ತೊರಲಿದೆಯೆ, ಗೆಲುವಿನ ಮೆಟ್ಟಿಲೇರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಭಾರತದ ಅಷ್ಟೇ ಅಲ್ಲ ಪ್ರಪಂಚದ ಎಲ್ಲಾ ಕ್ರಿಕೆಟ್ ಪ್ರಿಯರು.

ಯಾರು ಈ ಹಿಂದಿನ ಚಾಂಪಿಯನ್ ಗಳು?
2008 – ರಾಜಸ್ಥಾನ ರಾಯಲ್ಸ್
2009 – ಡೆಕ್ಕನ್ ಚಾರ್ಜರ್
2010 – ಚೆನ್ನೈ ಸೂಪರ್ ಕಿಂಗ್ಸ್
2011 – ಚೆನ್ನೈ ಸೂಪರ್‌ಕಿಂಗ್ಸ್
2012 – ಕೋಲ್ಕತ್ತಾ ನೈಟ್ ರೈಡರ್
2013 – ಮುಂಬೈ ಇಂಡಿಯನ್ಸ್
2014 – ಕೋಲ್ಕತ್ತಾ ನೈಟ್ ರೈಡರ್
2015 – ಮುಂಬೈ ಇಂಡಿಯನ್ಸ್
2016 – ಸನ್‌ರೈಸರ್ಸ್‌ ಹೈದರಾಬಾದ್
2017 – ಮುಂಬೈ ಇಂಡಿಯನ್ಸ್
2018 – ಚೆನ್ನೈ ಸೂಪರ್ ಕಿಂಗ್ಸ್
2019 – ಮುಂಬೈ ಇಂಡಿಯನ್ಸ್
2020 – ಮುಂಬೈ ಇಂಡಿಯನ್ಸ್
2021 – ಚೆನ್ನೈ ಸೂಪರ್‌ಕಿಂಗ್ಸ್

Leave A Reply

Your email address will not be published.