ಮಂಗಳೂರಿನಲ್ಲಿ ಎಸ್‌ಡಿಪಿಐ ನಿಂದ ಬೃಹತ್ ಜನಾಧಿಕಾರ ಸಮಾವೇಶಕ್ಕೆ ಸುಳ್ಯ ಕ್ಷೇತ್ರದ ಸಂಪಾಜೆ, ಸುಳ್ಯ, ಬೆಳ್ಳಾರೆ, ಸವಣೂರಿನಿಂದ ಸಾವಿರಾರು ಮಂದಿ ಭಾಗಿ

ಸುಳ್ಯ, ಮೇ28:- ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮೇ‌‌ 27 ರಂದು ಮಂಗಳೂರಿನ ಅಡ್ಯಾರ್ ಕಣ್ಣೂರಿನಲ್ಲಿ ನಡೆದ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಸಂಪಾಜೆ, ಸುಳ್ಯ ಹಾಗೂ ಬೆಳ್ಳಾರೆಯಿಂದ ಸಾವಿರಾರು ಮಂದಿ ಭಾಗಿಯಾಗಿದ್ದಾರೆ.

 

ಸುಳ್ಯ,ಬೆಳ್ಳಾರೆ,ಎಣ್ಮೂರು,ಹಾಗೂ ಸವಣೂರು ಕಡೆಯಿಂದ ಮತ್ತು ಪುತ್ತೂರು ತಾಲೂಕಿನ ಹಲವು ಕಡೆಯಿಂದ ಹೊರಟ ಬಸ್ ಗಳು ಪುತ್ತೂರಿನ ಬೈಪಾಸ್ ನ ದುಗ್ಗಮ್ಮ-ದೇರಣ್ಣ ಹಾಲ್ ಬಳಿ ಒಟ್ಟುಗೂಡಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಯವರು ಪುತ್ತೂರು ವಿಧಾನ ಸಭಾ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ರವರಿಗೆ ಮತ್ತು ಸುಳ್ಯ ವಿಧಾನಸಭಾ ಕಾರ್ಯದರ್ಶಿ ರಫೀಕ್ ಎಂ.ಎ ರವರಿಗೆ ಧ್ವಜ ಹಸ್ತಾಂತರ ಮಾಡುವ ಮೂಲಕ ಪ್ರಯಾಣಕ್ಕೆ ಚಾಲನೆ ನೀಡಿದರು.
ಬೃಹತ್ ಸಮಾವೇಶದಲ್ಲಿ ಸಾಕ್ಷಿಯಾದ ಕ್ಷೇತ್ರದ ಎಲ್ಲಾ ಪಕ್ಷದ ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಮತ್ತು ಬೆಂಬಲಿಗರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಉವೈಸ್ ಸಂಪಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

Leave A Reply

Your email address will not be published.