ರೈಲ್ವೆಯಲ್ಲಿ ಭರ್ಜರಿ ಉದ್ಯೋಗವಕಾಶ | ಬರೋಬ್ಬರಿ 3612 ಹುದ್ದೆಗಳು | SSLC, ಐಟಿಐ ಪಾಸಾದವರಿಗೆ ಆದ್ಯತೆ
ರೈಲ್ವೆ ನೇಮಕಾತಿ ವಿಭಾಗ, ಪಶ್ಚಿಮ ರೈಲ್ವೆ, ಮುಂಬೈ ಇಲ್ಲಿ ಅಗತ್ಯ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಗೆ ಜೂನ್ 27 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಹೆಸರು : ಅಪ್ರೆಂಟಿಸ್ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ : 3612
ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :28-05-2022
ಆನ್‌ಲೈನ್ ಮೂಲಕ ಅರ್ಜಿಯನ್ನು ಜೂನ್ 27, 2022 ರ ಸಂಜೆ 05 ಗಂಟೆವರೆಗೆ ಸಲ್ಲಿಸಬಹುದು.
ಟ್ರೇಡ್‌ವಾರು ಅಪ್ರೆಂಟಿಸ್ ಹುದ್ದೆಗಳ ವಿವರ
ಫಿಟ್ಟರ್ : 941
ವೆಲ್ಡರ್ : 378
ಕಾರ್ಪೆಂಟರ್: 221
ಪೇಂಟರ್: 213
ಡೀಸೆಲ್ ಮೆಕ್ಯಾನಿಕ್ : 209
ಮೆಕ್ಯಾನಿಕ್ ಮೋಟಾರ್ ವೆಹಿಕಲ್: 15
ಇಲೆಕ್ಟಿಷಿಯನ್ : 639
ವೈಯರ್‌ಮೆನ್ : 14
ಇಲೆಕ್ಟ್ರಾನಿಕ್ ಮೆಕ್ಯಾನಿಕ್ : 112
ರೆಫ್ರಿಜೆರೇಟರ್ (ಎಸಿ-ಮೆಕ್ಯಾನಿಕ್): 147
ಪೈಪ್ ಫಿಟ್ಟರ್: 186
ಪ್ಲಂಬರ್: 126
ಡ್ರಾಫ್ಟ್‌ಮನ್ (ಸಿವಿಲ್): 88
ಪಿಎಸ್‌ಎಸ್‌ಎ: 252
ಸ್ಟೆನೋಗ್ರಾಫರ್ : 08
ಮೆಕ್ಯಾನಿಸ್ : 26
ಟರ್ನರ್ : 37
ವಿದ್ಯಾರ್ಹತೆ : ಅಭ್ಯರ್ಥಿಗಳು 10ನೇ ತರಗತಿ ಪಾಸ್ ಜತೆಗೆ ಐಟಿಐ ವಿದ್ಯಾರ್ಹತೆ ಸರ್ಟಿಫಿಕೇಟ್ ಅನ್ನು NCVT | SCVT ಇಂದ ಪಡೆದಿರಬೇಕು. ಹುದ್ದೆಗಳಿಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಪಡೆದವರು, ಆಯಾ ಟ್ರೇಡ್‌ಗೆ ಅರ್ಜಿ ಹಾಕಬೇಕು.
ವಯೋಮಿತಿ : ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ಕೇಂದ್ರ ಸರ್ಕಾರದ ಅಪ್ರೆಂಟಿಸ್ ನಿಯಮಗಳ ಪ್ರಕಾರ ಜಾತಿವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಆನ್ಲೈನ್ ಅಪ್ಲೈ ಗಾಗಿ ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ