ಮದರಸಾ ಬಿಟ್ಟು ಓಡಿ ಹೋಗಬಾರದೆಂದು ಬಾಲಕನ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಕೂಡಿಹಾಕಿದ ಮೌಲಾನಾ !!

Share the Article

ಮದರಸಾದಲ್ಲಿ ಓದಿನ ಜೊತೆಗೆ ಮಕ್ಕಳಿಗೆ ಚಿತ್ರಹಿಂಸೆ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ‌ ಮದರಸಾ ಬಿಟ್ಟು ಓಡಿ ಹೋಗಬಾರದೆಂದು ಇಬ್ಬರು ಬಾಲಕರ ಕಾಲಿಗೆ ಮೌಲಾನಾ ಕಬ್ಬಿಣದ ಸರಪಳಿಯನ್ನು ಕಟ್ಟಿ ಕೂಡಿಹಾಕಿದ್ದಾರೆ ಎಂಬ ಗಂಭೀರ ಆರೋಪ ಉತ್ತರ ಪ್ರದೇಶದ ಲಕ್ನೋದಲ್ಲಿ ಕೇಳಿಬಂದಿದೆ.

ಸ್ಥಳೀಯರೊಬ್ಬರು ಈ ಚಿತ್ರಹಿಂಸೆಯ ವೀಡಿಯೋವನ್ನು ಸೆರೆ ಹಿಡಿದು ಪೊಲೀಸರಿಗೆ ಕಳುಹಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಮೌಲಾನಾ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಬಯಸುವುದಿಲ್ಲ ಎಂದು ಬಾಲಕರ ಪೋಷಕರು ಲಿಖಿತ ಅರ್ಜಿ ಸಲ್ಲಿಸಿದ್ದಾರೆ.

ಓದುವುದರಿಂದ ತಪ್ಪಿಸಿಕೊಳ್ಳಲು ತಮ್ಮ ಮಕ್ಕಳು ಹಲವು ಬಾರಿ ಓಡಿಹೋಗಲು ಪ್ರಯತ್ನಿಸುತ್ತಿದ್ದರು. ಇದರಿಂದಾಗಿ ಮೌಲಾನಾ ಮಕ್ಕಳೊಂದಿಗೆ ಕಟ್ಟುನಿಟ್ಟಾಗಿ ವರ್ತಿಸುತ್ತಿದ್ದರು ಎಂದು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಓದಲು ಬಾರದ ಕಾರಣ ಮಕ್ಕಳು ಓಡಿಹೋಗಲು ಯತ್ನಿಸುತ್ತಿದ್ದರು. ಅಲ್ಲದೇ ಓದುವುದರಿಂದ ತಪ್ಪಿಸಿಕೊಳ್ಳಲು ಓರ್ವ ಬಾಲಕ ಶೌಚಾಲಯದಲ್ಲಿ ಅಡಗಿ ಕುಳಿತುಕೊಂಡಿದ್ದನು ಎಂದು ಹೇಳಿದ್ದಾರೆ.

ಮದರಸಾ ಶಿಕ್ಷಣಕ್ಕಾಗಿ ಪೋಷಕರೇ ತಮ್ಮ ಮಕ್ಕಳನ್ನು ಹಿಂಸಿಸುತ್ತಿರುವ ಮೌಲಾನಾ ಗೆ ಸಪೋರ್ಟ್ ಮಾಡುತ್ತಿರುವುದು ಬೇಸರದ ಸಂಗತಿ. ಶಿಕ್ಷಣದ ವಿಷಯದಲ್ಲಿ ಮಕ್ಕಳಿಗೆ ಈ ರೀತಿ ಚಿತ್ರಹಿಂಸೆ ಕೊಡುತ್ತಿರುವುದು ಯಾವ ದೃಷ್ಟಿಯಲ್ಲೂ ಸರಿಯಿಲ್ಲ.

Leave A Reply