KCET 2022 ರ ಪಠ್ಯಕ್ರಮ ಪ್ರಕಟ : ಡೌನ್‌ಲೋಡ್ ಮಾಡುವ ಮಾಹಿತಿ ಇಲ್ಲಿದೆ
2022ನೇ ಸಾಲಿನ KCET(ಕರ್ನಾಟಕ ಸಾಮನ್ಯ ಪ್ರವೇಶ ಪರೀಕ್ಷೆ) ಪಠ್ಯಕ್ರಮವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ಅಫೀಶಿಯಲ್ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಉತ್ತಮ ತಯಾರಿಗಾಗಿ ಈ ಪಠ್ಯಕ್ರಮವನ್ನು ಚೆಕ್ ಮಾಡಿಕೊಂಡು ಸಿದ್ಧತೆ ಮಾಡಿಕೊಳ್ಳಬಹುದಾಗಿದೆ.
ಇಂಜಿನಿಯರಿಂಗ್, ತಂತ್ರಜ್ಞಾನ ಕೋರ್ಸ್‌ಗಳು, ಫಾರ್ಮ್ ಸೈನ್ಸ್ ಕೋರ್ಸ್‌ಗಳು, ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನ ಕೋರ್ಸ್‌ಗಳು, ಬಿ ಫಾರ್ಮ್, ಫಾರ್ಮ್ ಡಿ ಮತ್ತು ನ್ಯಾಚುರೋಪತಿ ಮತ್ತು ಯೋಗ ಕೋರ್ಸ್‌ಗಳು ಸೇರಿದಂತೆ ವಿವಿಧ ಕೋರ್ಸ್‌ಗಳ ಪ್ರವೇಶಕ್ಕಾಗಿ ಕೆಸಿಇಟಿ ನಡೆಸಲಾಗುತ್ತದೆ.
KCET 2022 ಪ್ರಶ್ನೆ ಪತ್ರಿಕೆಯು ಪಿಯುಸಿ ಮೊದಲ
ವರ್ಷದ 2020ರ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ಮತ್ತು ದ್ವಿತೀಯ ಪಿಯುಸಿಯ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ, ಪಠ್ಯವನ್ನು ಆಧರಿಸಿರುತ್ತದೆ. ಪಿಯುಸಿ ಮೊದಲ ವರ್ಷದ ಪಠ್ಯದಲ್ಲಿ ಶೇಕಡ 70 ರಷ್ಟು, ಮತ್ತು ದ್ವಿತೀಯ ಪಿಯುಸಿಯ ಸಂಪೂರ್ಣ ಪಠ್ಯಕ್ರಮವನ್ನು ಒಳಗೊಂಡಿರುತ್ತದೆ ಎಂದು ಕೆಇಎ ತಿಳಿಸಿದೆ.
ಸಿಇಟಿ ಪಠ್ಯಕ್ರಮ ಚೆಕ್ ಮಾಡುವ ವಿಧಾನ
• ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ kea.nic.in ಗೆ ಭೇಟಿ ನೀಡಿ. ಓಪನ್ ಆದ ಪೇಜ್‌ನಲ್ಲಿ ಯುಜಿಸಿಇಟಿ-2022 ಪಠ್ಯಕ್ರಮಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಆ ಪುಟದಲ್ಲಿ KCET 2022 ಪಠ್ಯಕ್ರಮವನ್ನು ಚೆಕ್ ಮಾಡಿಕೊಳ್ಳಿ. ಚೆಕ್ ಮಾಡಿದ ಮೇಲೆ, ಡೌನ್‌ಲೋಡ್ ಮಾಡಿಕೊಂಡು ಅಗತ್ಯವಿದ್ದಲ್ಲಿ ಪ್ರಿಂಟ್ ತೆಗೆದುಕೊಳ್ಳಿ.