ಅವಳಿ ಮಕ್ಕಳ ಜೊತೆಗೆ ಮೊದಲ ಬಾರಿಗೆ ಕಾಣಿಸಿಕೊಂಡ ಗೋಲ್ಡನ್ ಕ್ವೀನ್ ಅಮೂಲ್ಯ!

ಸ್ಯಾಂಡಲ್‌ವುಡ್‌ನ ಗೋಲ್ಡನ್‌ಕ್ವೀನ್ ನಟಿಅಮೂಲ್ಯ ಈಗ ತಾಯಿ ಖುಷಿನಾ ಅನುಭವಿಸುತ್ತಿದ್ದಾರೆ.‌ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಆಗಿರುವ ಅಮೂಲ್ಯ ಸಿನಿಮಾರಂಗದಿಂದ ದೂರಾಗಿದ್ದಾರೆ. ಇನ್ನು ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಮೂಲ್ಯ ಅವರ ಅಭಿಮಾನಿಗಳಿಗೆ ಖುಷಿಯ ವಿಚಾರವನ್ನು ನೀಡಿದ್ದರು.

 

ಮಕ್ಕಳಾದ ಬಳಿಕ ನಟಿ ಅಮೂಲ್ಯ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಮಕ್ಕಳ ಜೊತೆಗೆ ಪ್ರತ್ಯಕ್ಷ ಆಗಿದ್ದಾರೆ. ದೇವಸ್ಥಾನದಲ್ಲಿ ಮಕ್ಕಳ ಜೊತೆಗೆ ನಟಿ ಅಮೂಲ್ಯ ದಂಪತಿ ಕಾಣಿಸಿಕೊಂಡಿದ್ದಾರೆ.

ನಟಿ ಅಮೂಲ್ಯ ಸಾಮಾಜಿಕ ಜಾಲತಣದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಹಾಗಾಗಿ ತಮ್ಮ ಜೀವನದ ಹಲವು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.

ನಟಿ ಅಮೂಲ್ಯ ಮಕ್ಕಳ ಫೋಟೋಗಳನ್ನು ಯಾವಾಗ ಹಂಚಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಾ ಇದ್ದಾರೆ. ಈಗ ಮೊದಲ ಬಾರಿಗೆ ಅಮೂಲ್ಯ ಮತ್ತು ಮಕ್ಕಳು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಕುಟುಂಬದ ಜೊತೆಗೆ ಅಮೂಲ್ಯ ದಂಪತಿ ಮತ್ತು ಮಕ್ಕಳ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಇರುವ ಅಣ್ಣಮ್ಮ ದೇವಸ್ಥಾನಕ್ಕೆ ನಟಿ ಅಮೂಲ್ಯ ಭೇಟಿ ನೀಡಿದ್ದಾರೆ. ಅಮೂಲ್ಯ ಪತಿ ಮತ್ತು ಮಕ್ಕಳ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಹರಕೆ ತೀರಿಸಿದ್ದಾರೆ. ಮಗು ಆದ ಬಳಿಕ ಇದೆ ಮೊದಲ ಬಾರಿಗೆ ಅಮೂಲ್ಯ ಹೊರಗೆ ಕಾಣಿಸಿಕೊಂಡಿದ್ದಾರೆ. ಇನ್ನು ಮಕ್ಕಳ ಜೊತೆಗೆ ಕಾಣಿಸಿಕೊಂಡಿದ್ದು ಮಾತ್ರ ವಿಶೇಷವಾಗಿತ್ತು.

Leave A Reply

Your email address will not be published.