ಕಾಮುಕನ ಅಟ್ಟಹಾಸ: ಶಾಲಾ ಮೈದಾನದಲ್ಲಿ ಆಡುತ್ತಿದ್ದ ಆರು ವರ್ಷದ ಬಾಲಕಿ ಮೇಲೆ ಶಾಲಾ ಪ್ಯೂನ್ ನಿಂದ ಅತ್ಯಾಚಾರ !!!

ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಶಾಲೆಯೊಂದರ 51 ವರ್ಷದ ಪ್ಯೂನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸೋಮವಾರ ನಡೆದಿದ್ದು, ಮುಂಬೈನ ನವಘರ್ ನಲ್ಲಿ ಈ ಘಟನೆ ನಡೆದಿದೆ.

 

ಬೇಸಿಗೆ ರಜೆಯೆಂದು ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ ಕೆಲವು ಸಿಬ್ಬಂದಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಶಾಲಾ ಮೈದಾನದಲ್ಲಿ ಬಾಲಕಿ ಒಬ್ಬಳೇ ಆಟವಾಡುತ್ತಿದ್ದಳು ಎನ್ನಲಾಗಿದೆ. ಈ ಸಮಯದಲ್ಲಿ ಮುಲುಂಡ್ ಇಸ್ಟ್ ಸ್ಕೂಲಿನ ಪ್ಯೂನ್ ಬಾಲಕಿ ಒಂಟಿಯಾಗಿ ಆಟವಾಡುತ್ತಿರುವುದನ್ನು ಗಮನಿಸಿ ಆಕೆಯನ್ನು ಕರೆದು ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಅಷ್ಟು ಮಾತ್ರವಲ್ಲದೇ ಬೆದರಿಕೆ ಕೂಡಾ ಹಾಕಿದ್ದಾನೆ.

ಹೇಮಂತ್ ವೈಟಿ (51) ಎಂಬಾತನೇ ಶಾಲಾ ಫ್ಯೂನ್ ಆರೋಪಿ.

ಶಾಲೆಯಿಂದ ಮನೆಗೆ ಹೋಗಿದ್ದ ಬಾಲಕಿ ಮೌನವಾಗಿದ್ದಾಳೆ. ಬಾಲಕಿ ಮೊದಲು ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿರಲಿಲ್ಲ. ತಾಯಿ ಮೌನಕ್ಕೆ ಕಾರಣ ಕೇಳಿದಾಗ ಬಳಿಕ ನಡೆದ ಘಟನೆಯನ್ನು ಬಾಲಕಿ ವಿವರಿಸಿದ್ದಾಳೆ. ಆಕೆಯ ತಾಯಿ ಕೂಡಲೇ ಬಾಲಕಿಯ ತಂದೆಗೆ ಮಾಹಿತಿ ನೀಡಿದ್ದು, ಅವರು ದೂರು ದಾಖಲಿಸಿಕೊಳ್ಳಲು ಇಬ್ಬರನ್ನೂ ನವಘರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಶೀಘ್ರದಲ್ಲೇ ಕಾರ್ಯಾಚರಣೆ ಮಾಡಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

Leave A Reply

Your email address will not be published.