ರಾಖಿಸಾವಂತ್ ಗೆ BMW ಕಾರು ಗಿಫ್ಟ್ ನೀಡಿದ ಬಳಿಕ, “ಮನೆ” ಗಿಫ್ಟ್ | ಭರ್ಜರಿ ಉಡುಗೊರೆ ನೀಡಿದ ಆದಿಲ್

ಕ್ವಾಂಟ್ರವರ್ಸಿ ನಟಿ ಎಂದೇ ಗುರುತಿಸಿಕೊಂಡಿರುವ ರಾಖಿ ಸಾವಂತ್ ಇತ್ತೀಚೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ತನಗೊಬ್ಬ ಬಾಯ್ ಫ್ರೆಂಡ್ ಸಿಕ್ಕ ಖುಷಿಯಲ್ಲಿದ್ದಾರೆ ರಾಖಿ.

 

ಅಂದಹಾಗೆ ರಾಖಿ ಸಾವಂತ್ ಮೈಸೂರು ಮೂಲದ ಉದ್ಯಮಿ, ತನಗಿಂತ ಪ್ರಾಯದಲ್ಲಿ 6 ವರ್ಷ ಸಣ್ಣವನಾದ ಆದಿಲ್ ಖಾನ್ ದುರಾನಿ ಜೊತೆ ಪ್ರೀತಿಯಲ್ಲಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಿರುವಂಥದ್ದೇ. ಮೈಸೂರು ಮೂಲದ ಆದಿಲ್ ಮುಂಬೈನಲ್ಲಿ ನೆಲೆಸಿದ್ದಾರೆ. ಕಾರಿನ ಬ್ಯುಸಿನೆಸ್ ಮಾಡುತ್ತಿರುವುದಾಗಿ ರಾಖ್ ಸಾವಂತ್ ಈಗಾಗಲೇ ಪರಿಚಯ ಮಾಡಿಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ಆದಿಲ್ ತನ್ನ ಪ್ರೇಯಸಿ ರಾಖಿ ಸಾವಂತ್‌ಗೆ ಬಿಎಂಡಬ್ಲ್ಯು ಕಾರನ್ನು ಗಿಫ್ಟ್ ಮಾಡಿ ಪ್ರಪೋಸ್ ಮಾಡಿದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದ ರಾಖಿ, ‘ನನಗೆ ಕಾರನ್ನು ಗಿಫ್ಟ್ ಮಾಡಿದ ನನ್ನ ಆತ್ಮೀಯ ಸ್ನೇಹಿತ ಆದಿಲ್‌ಗೆ ಧನ್ಯವಾದಗಳು. ಇಂತ ದೊಡ್ಡ ಸರ್ಪ್ರೈಸ್ ಗೆ ಧನ್ಯವಾದಗಳು’ ಎಂದು ಹೇಳಿದ್ದರು. ಆದರೆ ಇದೀಗ ಆದಿಲ್ ಮತ್ತೊಂದು ದುಬಾರಿ ಉಡುಗೊರೆಯೊಂದನ್ನು ರಾಖಿಗೆ ನೀಡಿದ್ದಾರೆ.

ಕರ್ನಾಟಕದ ಹುಡುಗ ಆದಿಲ್ ತನ್ನ ಪ್ರೇಯಸಿ ರಾಖಿ ಸಾವಂತ್‌ಗೆ ಮನೆ ಗಿಫ್ಟ್ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ರಾಖಿ ಸಾವಂತ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಆದಿಲ್ ನನ್ನ ಹೆಸರಿನಲ್ಲಿ ದುಬೈನಲ್ಲಿ ಮನೆ ಖರೀದಿಸಿದ್ದಾರೆ. ಅವನ ಪ್ರೀತಿಯೇ ನನ್ನ ಸಂಪತ್ತು. ಅವನ ಪ್ರೀತಿ ನಿಜ. ಅವನು ನಿಷ್ಠಾವಂತ ಎಂದು ಕೊಂಡಾಡಿದ್ದಾರೆ.

Leave A Reply

Your email address will not be published.