ಮೊದಲ ಪತಿಗೆ ಡಿವೋರ್ಸ್ ನೀಡಿ, 10 ವರ್ಷಗಳ ಬಳಿಕ ಮಕ್ಕಳ ಸಮ್ಮುಖದಲ್ಲಿ ಅದ್ಧೂರಿ ವಿವಾಹವಾದ ಬಾಲಿವುಡ್ ಖ್ಯಾತ ಗಾಯಕಿ !!

Share the Article

ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ತಮ್ಮ ಮದುವೆಯ ವಿಚಾರವಾಗಿ ಇದೀಗ ಸುದ್ದಿಯಲ್ಲಿದ್ದಾರೆ. ಮೊದಲ ಪತಿಗೆ ಡಿವೋರ್ಸ್ ನೀಡಿ, ಹತ್ತು ವರ್ಷಗಳ ನಂತರ ಉದ್ಯಮಿ ಗೌತಮ್ ಜೊತೆ ಕನ್ನಿಕಾ ಕಪೂರ್ ಹಸೆಮಣೆ ಏರಿದ್ದು, ಈ ಮದುವೆಗೆ ಸ್ವತಃ ಕನ್ನಿಕಾ ಮಕ್ಕಳು ಸಾಕ್ಷಿಯಾಗಿದ್ದಾರೆ.

ಸಾಕಷ್ಟು ಬಾಲಿವುಡ್ ಹಾಡುಗಳಿಗೆ ಧ್ವನಿಯಾಗಿದ್ದ ಕನ್ನಿಕಾ, ತಮ್ಮ ವಯಕ್ತಿಕ ವಿಚಾರದಲ್ಲಿ ಕುಸಿದಿದ್ದರು. 1998ರಲ್ಲಿ ರಾಜ್ ಎಂಬುವವರ ಜೊತೆ ಕನ್ನಿಕಾ ಮದುವೆ ನಡೆದಿತ್ತು. ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಪುತ್ರ ಇದ್ದಾನೆ. 2012ರಲ್ಲಿ ಕನ್ನಿಕಾ, ರಾಜ್ ವಿಚ್ಛೇದನ ಪಡೆದಿದ್ದು, ನಂತರ ಮೂವರು ಮಕ್ಕಳನ್ನು ಕನ್ನಿಕಾ ಅವರೇ ಬೆಳೆಸಿದರು. ಇದೀಗ ಮಕ್ಕಳ ಸಮ್ಮತಿ ಪಡೆದು, ಗುರುಹಿರಿಯರ ಸಮ್ಮುಖದಲ್ಲಿ ಉದ್ಯಮಿ ಗೌತಮ್ ಜೊತೆ ಹಸೆಮಣೆ ಏರಿದ್ದಾರೆ. ಅಷ್ಟೇ ಅಲ್ಲ, ತಾಯಿ ಸಪ್ತಪದಿ ತುಳಿಯುವ ವೇಳೆ ಮಕ್ಕಳು ಲವಲವಿಕೆಯಿಂದ ಎಲ್ಲಾ ಕಾರ್ಯಗಳಲ್ಲೂ ಭಾಗಿಯಾಗಿದ್ದಾರೆ.

ನಿಮ್ಮ ಬದುಕಲ್ಲೂ ಮ್ಯಾಜಿಕ್ ನಡೆಯುತ್ತದೆ, ಅದನ್ನು ನಂಬೋದನ್ನು ನೀವು ನಿಲ್ಲಿಸಬೇಡಿ. ಒಂದು ದಿನ ಕನಸುಗಳು ಈಡೇರುತ್ತವೆ. ನನ್ನ ರಾಜನನ್ನು ನಾನು ಹುಡುಕಿಕೊಂಡೆ. ನಮ್ಮಿಬ್ಬರನ್ನು ಭೇಟಿ ಮಾಡಿಸಿದ ಯುನಿವರ್ಸ್ಗೆ ಧನ್ಯವಾದಗಳು. ನಿನ್ನ ಜೊತೆ ಹೊಸ ಜರ್ನಿ ಮಾಡಲು, ನಿನ್ನ ಜೊತೆ ಜೊತೆ ಬೆಳೆಯಲು, ಕಲಿಯಲು, ನಿನ್ನ ಜೊತೆಗೆ ನಗಲು ಬಹಳ ಉತ್ಸುಕತೆಯಿಂದಿರುವೆ. ಪ್ರತಿದಿನ ನನ್ನನ್ನು ನಗಿಸುತ್ತಿರುವುದಕ್ಕೆ ಧನ್ಯವಾದಗಳು. ನನ್ನ ಸ್ನೇಹಿತ, ನನ್ನ ಸಂಗಾತಿ, ನನ್ನ ಹೀರೋ ಎಂದು ಪತಿ ಗೌತಮ್ ಕುರಿತು ಕನ್ನಿಕಾ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇನ್ನು ಗಾಯಕಿ ಕನ್ನಿಕಾಗೆ ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು ಶುಭಹಾರೈಸಿದ್ದಾರೆ.

https://www.instagram.com/p/Cd0amo-N1d5/?igshid=YmMyMTA2M2Y=
Leave A Reply

Your email address will not be published.