ಜಿಟಿಡಿಸಿ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶ ಆರಂಭ

ವಿಜಯನಗರ
ಹೊಸಪೇಟೆ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಪ್ರವೇಶಕ್ಕೆ ಅರ್ಜಿಗಳು ಆಹ್ವಾನಿಸಲಾಗಿದೆ ಎಂದು ಪ್ರಾಚಾರ್ಯ ಶಂಕರ ಆನಂದಲಾಲಿ ತಿಳಿಸಿದರು.
ಈ ಕುರಿತು ಹೊಸಪೇಟೆಯ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಅನುಭವಿ ಪ್ರಾಧ್ಯಾಪಕ ತಂಡ ಅತ್ಯಾಧುನಿಕ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್
ವಿಶ್ವದ ಉನ್ನತ ದರ್ಚೆಯ ಕಂಪನಿಗಳ ನೇರ ಸಂದರ್ಶನ ಸೇರಿದಂತೆ ಖಚಿತ ಉದ್ಯೋಗಾವಕಾಶಗಳನ್ನು ನೀಡುವ ಈ ಕಾರ್ಯಕ್ಕೆ ಹೆಚ್ಚು ವಿದ್ಯಾರ್ಥಿಗಳ ಸೇರಿಕೊಳ್ಳಲು ಸುವರ್ಣಾವಕಾಶ ವಿದ್ಯಾರ್ಥಿಗಳು ಬಳಸಿಕೊಳ್ಳುವಂತೆ ಕರೆ ನೀಡಿದರು.
ಸಂಸ್ಥೆಯಲ್ಲಿ ಈ ವರೆಗೂ ವ್ಯಾಸಂಗ ಮಾಡಿದ ಬಹುತೇಕರು ದೇಶ ವಿದೇಶ ಸೇರಿದಂತೆ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ ಶಿಕ್ಷಣದ ಜೊತೆ ಕೌಶಲಗಳನ್ನು ತಿಳಿಸುವ ಈ ಶಿಕ್ಷಣಕ್ಕೆ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುವಂತೆ ಹಾಗೂ ಭವಿಷ್ಯಕ್ಕೆ ವಿದ್ಯಾರ್ಥಿಗಳು ಸನ್ನದ್ದವಾಗುವಂತೆ ಕರೆ ನೀಡಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಅಂಜಿನಪ್ಪ, ವಿಶ್ವನಾಥ ರೆಡ್ಡಿ, ಮಂಜುನಾಥ ಪಾಲ್ಗೊಂಡಿದ್ದರು.

 

Leave A Reply

Your email address will not be published.