ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ , 11 ನವಜಾತ ಶಿಶುಗಳ ಸಜೀವ ಮಾರಣಹೋಮ!

ಆಸ್ಪತ್ರೆಗೆ ಬೆಂಕಿ ಬಿದ್ದ ಪರಿಣಾಮ 11 ಎಳೆ ಕೂಸುಗಳು ಬೆಂಕಿಯಲ್ಲೇ ಹೊತ್ತಿ ಉರಿದು ಸಜೀವ ದಹನಗೊಂಡ ಘಟನೆಯೊಂದು ಡಾಕರ್ ನಲ್ಲಿ ಸಂಭವಿಸಿದೆ.

 

ಪಶ್ಚಿಮ ಸೆನೆಗಲ್ ನ ಟಿವೌವಾನ್ ನಗರದಲ್ಲಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು 11 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ದೇಶದ ಅಧ್ಯಕ್ಷರು ಬುಧವಾರ ತಡರಾತ್ರಿ ತಿಳಿಸಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗದಲ್ಲಿ ಬೆಂಕಿಯಲ್ಲಿ 11 ನವಜಾತ ಶಿಶುಗಳು ಸಾವನ್ನಪ್ಪಿದ ಘಟನೆ ನೋವು ತಂದಿದೆ ಎಂದು ಅಧ್ಯಕ್ಷ ಮ್ಯಾಕಿ ಸಾಲ್ ಟ್ವಿಟರ್ ನಲ್ಲಿ ಹೇಳಿದ್ದಾರೆ.

ರಾಜಧಾನಿ ಡಾಕರ್ ನಿಂದ ಪೂರ್ವಕ್ಕೆ 120 ಕಿಮೀ ದೂರದಲ್ಲಿರುವ ಟಿವಾವಾನ್ ಪಟ್ಟಣದ ಪ್ರಾದೇಶಿಕ ಆಸ್ಪತ್ರೆಯ ನವಜಾತ ಶಿಶುವಿನ ವಿಭಾಗದಲ್ಲಿ ಸಂಭವಿಸಿದ ಬೆಂಕಿಯಲ್ಲಿ 11 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ಸೆನೆಗಲ್ ಅಧ್ಯಕ್ಷ ಮ್ಯಾಕಿ ಸಾಲ್ ತಿಳಿಸಿದ್ದಾರೆ. ಬೆಂಕಿ ತಗುಲಲು ಕಾರವೇನೆಂಬುದನ್ನು ಅವರು ತಿಳಿಸಿಲ್ಲ

Leave A Reply

Your email address will not be published.