ಡಿ.ಕೆ ಶಿವಕುಮಾರ್ ಗೆ ಮತ್ತೊಂದು ಕಂಟಕ! ಡಿಕೆಶಿ ವಿರುದ್ಧ ಚಾರ್ಜ್ ಶಿಟ್ ಸಲ್ಲಿಸಿದ ಇಡಿ
ಜಾರಿ ನಿರ್ದೇಶನಾಲಯ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ವಿರುದ್ಧ ಹೊಸದಾಗಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ನಿರಂತರ ಆದಾಯ ಹೆಚ್ಚಳ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ ಅಧಿಕಾರಿಗಳು ಗುರುವಾರ ದೆಹಲಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಬೆಂಗಳೂರು ನಿವಾಸ ಸೇರಿದಂತೆ ದೆಹಲಿ, ಮುಂಬೈ ಸೇರಿ ಹಲವು ನಗರಗಳಲ್ಲಿ ಆಸ್ತಿ ಸಂಪಾದನೆ, ಹಲವು ವರ್ಷಗಳಿಂದ ನಿರಂತರ ಆದಾಯ ಹೆಚ್ಚಳ ಆರೋಪದ ಮೇಲೆ ಈ ಹಿಂದೆ ಇಡಿ ದಾಳಿ ಆಗಿತ್ತು. ಜಾಮೀನು ಪಡೆದು ಜೈಲಿನಿಂದ ಡಿಕೆಶಿ ಹೊರ ಬಂದಿದ್ದರು. ಈ ಪ್ರಕರಣ ಸಂಬಂಧ ಇಂದು(ಗುರುವಾರ) ಇಡಿ ಅಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
2019ರಲ್ಲಿ ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದೆಹಲಿಯಲ್ಲಿ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಿದ್ದರು. 50 ದಿನಗಳ ಕಾಲ ದೆಹಲಿಯ ತಿಹಾರ್ ಜೈಲಿನಲ್ಲಿದ್ದು ನಂತರ ದೆಹಲಿ ಹೈಕೋರ್ಟ್ ನಿಂದ ಜಾಮೀನು ಮೇಲೆ ಹೊರಬಂದಿದ್ದರು.