ವಿದೇಶಿ ವಿದ್ಯಾಭ್ಯಾಸದ ಕನಸು ಕಂಡಿದ್ದೀರಾ? ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳಬೇಕು ಎನ್ನುವವರು ಈ ವಿಷಯಗಳ ಬಗ್ಗೆ ತಪ್ಪದೆ ತಿಳಿದುಕೊಳ್ಳಿ

ಸಾಮಾನ್ಯವಾಗಿ ವಿದ್ಯಾರ್ಥಿಗಳು ವಿದೇಶದಲ್ಲಿ ಓದಬೇಕು ಎನ್ನುವ ಹಂಬಲ ಸಾಧಾರಣವಾಗಿ ಇಟ್ಟುಕೊಂಡಿರುತ್ತಾರೆ. ಆದರೆ ವಿದೇಶದಲ್ಲಿ ಅಧ್ಯಯನಕ್ಕಾಗಿ ಹೋಗುವಾಗ ಕೆಲವೊಂದು ಮಾಹಿತಿಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಉತ್ತಮ. ದೇಶದಿಂದ ದೇಶಕ್ಕೆ ತೆರಳುತ್ತಿರುವ ಕಾರಣ ಮಾನಸಿಕವಾಗಿಯೂ ಸದೃಢರಾಗಿರುವುದು ಬಹು ಮುಖ್ಯ. ನೀವು ವಿದೇಶಕ್ಕೆ ಅಧ್ಯಯನಕ್ಕೆ ತೆರಳುವ ಮುನ್ನ ಈ ಕೆಳಗಿನ ವಿಷಯಗಳನ್ನು ನೀವು ಸಂಪೂರ್ಣವಾಗಿ ತಿಳಿದುಕೊಂಡರೆ ಒಳಿತು.

 

  1. ನಮ್ಮ ಊರಿನಿಂದ ಇನ್ನೊಂದು ಊರಿಗೇ ಹೋಗಿ ಜೀವನ ನಡೆಸುವುದೇ ಕಷ್ಟ. ಅಂತಹುದರಲ್ಲಿ ಯಾವುದೇ ಗೊತ್ತು ಗುರಿಯಿಲ್ಲದ ದೇಶ, ನಗರಕ್ಕೆ ತೆರಳಿ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ನೀವು ಹೋಗಬೇಕಿರುವ ದೇಶ ಮತ್ತು ನಗರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡರೆ ಉತ್ತಮ. ಆ ದೇಶದ ಸಂಸ್ಕೃತಿ, ಊಟ, ಭಾಷೆಗಳ ಬಗ್ಗೆ ತಿಳಿದುಕೊಳ್ಳಿ. ನೀವು ಉಳಿದುಕೊಳ್ಳಲು ಯಾವ ನಗರ ಸೂಕ್ತ ಎನ್ನುವುದನ್ನು ತಿಳಿದುಕೊಳ್ಳಿ. ಈ ಎಲ್ಲಾ ವಿಚಾರಗಳನ್ನು ಆಯಾ ನಗರಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಎಲ್ಲಾ ಮಾಹಿತಿಗಳನ್ನು ನೀಡಲಾಗಿರುತ್ತದೆ. ಅಲ್ಲಿ ಓದಿ ಮೊದಲೇ ತಿಳಿದುಕೊಂಡರೆ ಉತ್ತಮ
  2. ‘ಇಂಗ್ಲೀಷ್ ಭಾಷೆ’ ಗೊತ್ತಿದ್ದರೆ ಉತ್ತಮ. ಈ ಭಾಷೆಯನ್ನು ಜಗತ್ತಿನ ಎಲ್ಲಾ ದೇಶಗಳಲ್ಲಿ ಮಾತನಾಡುತ್ತಾರೆ. ಆದರೂ ನೀವು ಯಾವ ದೇಶಕ್ಕೆ ಹೋಗಬೇಕು ಎಂಬ ಪ್ಲ್ಯಾನ್ ಮಾಡ್ತೀರೋ, ಆ ದೇಶದ ಭಾಷೆಯನ್ನು ಕಲಿತರೆ ಉತ್ತಮವಾಗಿರುತ್ತದೆ. ಏಕೆಂದರೆ ನಾವು ಅಲ್ಲಿನ ಜನರೊಂದಿಗೆ ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಿದರೆ ಹೆಚ್ಚು ಸಹಾಯಕವಾಗುತ್ತದೆ. ಶಾಪಿಂಗ್ ಹೋದಾಗ, ಆಸ್ಪತ್ರೆಗೆ ಹೋದಾಗ ಮತ್ತು ನಿಮ್ಮ ಪ್ರಾಧ್ಯಾಪಕರು ಅಥವಾ ಸಹಪಾಠಿಗಳೊಂದಿಗೆ ನೀವು ಸ್ಥಳೀಯ ಭಾಷೆಯಲ್ಲಿ ಮಾತನಾಡಿದರೆ, ಬಹುಬೇಗ ಅವರ ಜೊತೆ ಸಂಪರ್ಕ ಬೆಳೆಸಲು ಸಹಕಾರಿಯಾಗುತ್ತದೆ.

ಇನ್ನೊಂದು ಆಯಾ ದೇಶದ ತಾಪಮಾನ. ಪ್ರಪಂಚದಾದ್ಯಂತ ತಾಪಮಾನವು
ಬದಲಾಗುತ್ತಲೇ ಇರುತ್ತದೆ. ನೀವು ಅಧ್ಯಯನ ಮಾಡಲು ವಿದೇಶಕ್ಕೆ ತೆರಳುತ್ತಿರುವ ದೇಶದ ತಾಪಮಾನವು ನಾವು ವಾಸಿಸುವ ದೇಶಕ್ಕಿಂತ ಹೆಚ್ಚು ಬದಲಾಗಬಹುದು. ಆದ್ದರಿಂದ, ನೀವು ಉನ್ನತ ವ್ಯಾಸಂಗಕ್ಕಾಗಿ ತೆರಳುತ್ತಿರುವ ದೇಶದ ಹವಾಮಾನಕ್ಕೆ ಸೂಕ್ತವಾದ ಬಟ್ಟೆಗಳನ್ನು ಪಡೆಯುವುದು ಅವಶ್ಯಕವಾಗಿರುತ್ತದೆ.

ಉನ್ನತ ಶಿಕ್ಷಣವನ್ನು ವಿದೇಶದಲ್ಲಿ ಮಾಡುವುದು ನಿಮ್ಮ ಜೀವನದ ಅತ್ಯಂತ ಪ್ರಮುಖ ನಿರ್ಧಾರವಾಗಿದ್ದರೇ, ವಿದೇಶದಲ್ಲಿ ಎಚ್ಚರಿಕೆಯಿಂದ ಕಾಲೇಜುಗಳನ್ನು ಆಯ್ಕೆ ಮಾಡಿ. ವಿದೇಶಿ ಶಿಕ್ಷಣ ದುಬಾರಿಯಾದ್ದರಿಂದ ಹಣಕಾಸಿನ ವ್ಯವಸ್ಥೆಯ ಬಗ್ಗೆ ಹಿರಿಯರೊಡನೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಂಡರೆ ಇನ್ನೂ ಉತ್ತಮ.

Leave A Reply

Your email address will not be published.