ಮಾಜಿ ನಗರಸಭಾ ಸದಸ್ಯರು/ ಅಧಿಕಾರಿಗಳಿಂದ
ಸರ್ಕಾರಿ ಭೂ ಕಬಳಿಕೆ : ಮತ್ತೆ ದಾಖಲಾಯಿತು ಪೊಲೀಸ್ ಪ್ರಕರಣ.

ವಿಜಯನಗರ
ಹೊಸಪೇಟೆ ಮೇ25: ಬೇಲಿನೆ ಎದ್ದು ಹೊಲವನ್ನು ಮೇದಂಗಾದ ಮತ್ತೊಂದು ಪ್ರಕರಣ ಹೊಸಪೇಟೆ ನಗರಸಭೆಯಲ್ಲಿ ಬೆಳಕಿಗೆ ಬಂದಿದೆ.
ಈ ಹಿಂದೆ ಬೇರೆಯವರ ಹೆಸರಿನ ಫಾರ್ಮ್ ನಂ 3 ಹಂಚಿಕೆಯಲ್ಲಿ ನಗರಸಭೆಯ ಅಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡ ಪ್ರಕರಣದ ನಂತರ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ.
ಸರ್ಕಾರಿ ಜಾಗವನ್ನು ರಕ್ಷಿಸಿ ನಿವಾಸಿಗಳಿಗೆ ರಕ್ಷಣೆ ಹಾಗೂ ಸೌಕರ್ಯವನ್ನು ನೀಡಬೇಕಾದ ಸದಸ್ಯರು ಮತ್ತು ಅಧಿಕಾರಿಗಳು ತಾವುಗಳೇ ಸರ್ಕಾರಿ ಭೂಮಿಯನ್ನು ಗುರುತಿಸಿ
ಸರ್ಕಾರಿ ಭೂವಿಯ ನಕಲಿದಾಖಲೆ ಸೃಷ್ಟಿ ಮಾಡಿ ಪರಬಾರೆ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಮಾಜಿ ನಗರಸಭೆಯ ಸದಸ್ಯರು, ಹಾಗೂ ಸಿಬ್ಬಂದಿಗಳ ಮೇಲೆ ಹೊಸಪೇಟೆ ನಗರ ಪೊಲೀಸಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಪೇಟೆಯ ತಾಲೂಕು ಕಚೇರಿಯ ಕಂದಾಯ ನಿರೀಕ್ಷಕ ಗುರುಬಸವರಾಜ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಿ ಸರ್ವೆ ನಂ 302/ಬಿ2 ನಲ್ಲಿ .82 ಸೆಂಟ್ಸ ನಕಲಿದಾಖಲೆ ಸೃಷ್ಟಿ ಮಾಡಿ ತಮ್ಮ ಹೆಸರುಗಳಿಗೆ ವರ್ಗಾಹಿಸಿಕೊಂಡಿದ್ದಾರೆ ಎಂದ ಒಂದು ಪ್ರಕರಣ ಮತ್ತೊಂದು ಪ್ರಕರಣದಲ್ಲಿ ಸರ್ವೆ ನಂ 148 ರ ಸಂಕ್ಲಾಪುರ ದ 2.17 ಏಕರೆ ಭೂಮಿ ನಕಲಿದಾಖಲೆ ಸೃಷ್ಟಿ ಹಾಗೂ ತಮ್ಮ ಹೆಸರಿಗೆ ಹಸ್ತಾಂತರ ಮಾಡಿಕೊಂಡ ಪ್ರಕರಣಗಳಲ್ಲಿ ಮಾಜಿ ನಗರಸಭಾ ಸದಸ್ಯ ಡಿ.ವೇಣುಗೋಪಾಲ, ಮಲ್ಲಿಕಾರ್ಜುನ, ಚೇಂಟ್ ರಾಮ್, ಟಿ.ಸೋಮಪ್ಪ, , ಬೆಳಗೋಡ ಅಂಬಣ್ಣ, ಗಣೇಶ, ತಾಯಪ್ಪ ಹಾಗೂ ಡಿ.ಪಾರ್ವತಿ ಎಂಬುವವರ ಮೇಲೆ‌ ಪ್ರಕರಣ ದಾಖಲಿಸಿದ್ದಾರೆ.
ಮತ್ತೇರಡು ಪ್ರಕರಣಗಳಲ್ಲಿ ನಗರಸಭೆಯ ಪೌರಾಯುಕ್ತ ರಮೇಶ ಶರಣಪ್ಪ ನಗರಸಭೆಯ ನಕಲಿದಾಖಲೆಗಳ ಸೃಷ್ಟಿಸಲು ಸಹಾಯ ಹಾಗೂ ಪರಭಾರೆಗೆ ಕಾರಣವಾದ ಪ್ರಕರಣಗಳಿಗೆ ಸಂಬಂದಿಸಿದಂತೆ ಪೌರಾಯುಕ್ತ ಬಿ.ಸಿ.ಪೂಜಾರ್, ಕಂದಾಯ ಅಧೀಕ್ಷಕ ಬಿ.ಎಸ್.ಅಜಿತ್ ಸಿಂಗ್, ಕರ ವಸೂಲಾಧಿಕಾರಿ ನೀಲಕಂಠ, ಮಂಜುನಾಥ ದಳವಾಯಿ, ನಾಗರಾಜ್, ರಮೇಶ್, ಎಸ್.ಸುರೇಶ್ ಹಾಗೂ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅಪರಿಚಿತ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಪಾಲ್ಗೊಂಡು ಸರ್ಕಾರಿ ಜಾಗವನ್ನು ಪರಭಾರೆಗೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಹೊಸಪೇಟೆ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಸರ್ಕಾರಿ ಭೂಮಿ ಪರಭಾರೆ ಹಾಗೂ
ಸೃಷ್ಠಿ ಪ್ರಕರಣ ದಾಖಲಿಸಲಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ತಿಳಿಸಿದ್ದಾರೆ.

ಹೊಸಪೇಟೆ ನಗರಸಭೆಯ ಆಸ್ತಿ ಪರಭಾರೆ ಮತ್ತು ದಾಖಲೆ ಬದಲಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಕಂದಾಯ ಇಲಾಖೆ ಮತ್ತು ನಗರಸಭೆಯ ಗಮನಕ್ಕೆ ಬರುತ್ತಿದ್ದಂತೆ ಇಲಾಖೆ ಕ್ರಮಕ್ಕೆ ಮುಂದಾಗಿದೆ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲಾ, ನಗರಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave A Reply

Your email address will not be published.