RSS ನ್ನು ಹಾಡಿಹೊಗಳಿದ ನೆಹರು |’ಖಾಕಿ ಚಡ್ಡಿ, ಕಪ್ಪು ಟೋಪಿ, ಕೈಯಲ್ಲೊಂದು ದೊಣ್ಣೆ ಹಿಡಿಯುವವರಿಂದ ದೇಶದ ರಕ್ಷಣೆ ಮಾಡಲು ಸಾಧ್ಯವಿಲ್ಲ’ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಕೋಟಾ ಶ್ರೀನಿವಾಸ ಪೂಜಾರಿ|
‘ಖಾಕಿ ಚಡ್ಡಿ, ಕಪ್ಪು ಟೋಪಿ, ಕೈಯಲ್ಲೊಂದು ದೊಣ್ಣೆ ಹಿಡಿಯುವವರಿಂದ ದೇಶದ ರಕ್ಷಣೆ ಮಾಡಲು ಸಾಧ್ಯವಿಲ್ಲ’ ಎಂಬ ಬಿ.ಕೆ.ಹರಿಪ್ರಸಾದರವರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.
ಅವರು ಸೋಮವಾರದಂದು ಭಟ್ಕಳದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಅಹವಾಲು ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸೇವೆಗೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು 62ರ ಗಣರಾಜ್ಯೋತ್ಸವದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ಆಹ್ವಾನ ನೀಡಿ, ದೇಶ ಸೇವೆಯಲ್ಲಿ ಪಾಲ್ಗೊಂಡ ನೀವು ರಾಷ್ಟ್ರದ ಗಣರಾಜ್ಯೋತ್ಸವದಲ್ಲಿ ನಿಮ್ಮ ಸಮವಸ್ತ್ರದಲ್ಲಿ ಪಥ ಸಂಚಲನ ಮಾಡಬೇಕೆಂದು ಆಹ್ವಾನ ನೀಡಿದ್ದರು. ಹಾಗಾದರೆ ಬಿ.ಕೆ.ಹರಿಪ್ರಸಾದ್ ಹಾಗೂ ಸಿದ್ದರಾಮಯ್ಯನವರೇ ನೀವು ನೆಹರೂವರನ್ನು ಒಪ್ಪುತ್ತಿರೋ? ಇಲ್ಲ ವಿರೋಧಿಸುತ್ತಿರೋ? ವಿರೋಧಿಸುವುದಾದರೆ ಬಹಿರಂಗವಾಗಿ ವಿರೋಧಿಸುತ್ತೇವೆ ಎಂದು ಹೇಳಿ, ಇಲ್ಲವಾದರೆ ನೆಹರೂ ಅವರು ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ನೀಡಿದ ಗೌರವವನ್ನು ನೀವು ಕೂಡ ನೀಡಬೇಕಾಗುತ್ತದೆ. ಅದ ನೀವು ಕಾಂಗ್ರೆಸ್ ಪಕ್ಷದವರಾಗಿದ್ದರೆ ಎಂದು ಹೇಳಿದರು.
ಚೀನಾ ಹಾಗೂ ಭಾರತದ ನಡುವೆ ಯುದ್ಧ ನಡೆದ ವೇಳೆಯಲ್ಲಿ ಸಂಕಷ್ಟದಲ್ಲಿರುವ ಭಾರತೀಯ ಸೇನೆ ಜೊತೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಹೆಗಲಿಗೆ ಹೆಗಲು ಕೊಟ್ಟು ದೇಶಕ್ಕಾಗಿ ಸೈನಿಕರಂತೆ ಹೋರಾಟ ಮಾಡಿದ್ದರು. ಅದಕ್ಕೆ ಅಂದಿನ ಪ್ರಧಾನಿ ನೆಹರೂವರು ಗೌರವಿಸಿದ್ದರು ಎಂದು ಹೇಳಿದರು.