ಅಲ್ಪ ಏರಿಕೆ ಕಂಡ ಚಿನ್ನ | ಇಂದಿನ ಬೆಳ್ಳಿ ದರ ಎಷ್ಟು ? ಇಲ್ಲಿದೆ ಕಂಪ್ಲೀಟ್ ವಿವರ
ಕಳೆದೆರಡು ತಿಂಗಳಿನಿಂದ ಏರಿಳಿತ ಕಾಣುತ್ತಿರುವ ಚಿನ್ನದ ದರದಲ್ಲಿ ಮಂಗಳವಾರ ಏರಿಕೆಯಾಗಿದೆ. 24 ಕ್ಯಾರೆಟ್ ಹಾಗೂ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ ರೂ.100 ಏರಿಕೆಯಾಗಿದೆ. ಆ ಮೂಲಕ ಸತತ ಎರಡನೇ ದಿನವೂ ಚಿನ್ನದ ದರದಲ್ಲಿ ತಲಾ ರೂ.100 ರಷ್ಟು ಏರಿಕೆಯಾಗಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆಗೆ 47,150 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 51,430 ರೂಪಾಯಿ ದಾಖಲಾಗಿದೆ.
ಇಂದು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ :
ಬೆಂಗಳೂರು : ರೂ.47,150 (22 ಕ್ಯಾರೆಟ್) 51,430 – (24 ಕ್ಯಾರೆಟ್)
ಚೆನ್ನೈ: ರೂ.48,370 (22 ಕ್ಯಾರೆಟ್) – ರೂ.52,760 (24ಕ್ಯಾರೆಟ್)
ದಿಲ್ಲಿ: ರೂ.47,150 (22 ಕ್ಯಾರೆಟ್) – ರೂ.51,430 (24 ಕ್ಯಾರೆಟ್
ಕೋಲ್ಕತಾ: ರೂ.47,150 (22 ಕ್ಯಾರೆಟ್) -ರೂ.51,430 (24ಕ್ಯಾರೆಟ್)
ಮಂಗಳೂರು: ರೂ.47,150 (22 ಕ್ಯಾರೆಟ್) – ರೂ.51,430 (24 ಕ್ಯಾರೆಟ್)
ಮುಂಬಯಿ: ರೂ. 47,150 (22ಕ್ಯಾರೆಟ್)-ರೂ.51,430 (24 ಕ್ಯಾರೆಟ್)
ಮೈಸೂರು: ರೂ.47,150 (22 ಕ್ಯಾರೆಟ್) -ರೂ.51,430 (24 ಕ್ಯಾರೆಟ್)
ಕೇರಳ : ರೂ. 47, 150 ( 22 ಕ್ಯಾರೆಟ್)- ರೂ.51,430 ( 24 ಕ್ಯಾರೆಟ್)
ಸೂರತ್ : ರೂ. 47,200( 22 ಕ್ಯಾರೆಟ್)- ರೂ.51,500 ( 24 ಕ್ಯಾರೆಟ್)
ಒಂದು ವಾರದಿಂದ ಭಾರತದಲ್ಲಿ ಬೆಳ್ಳಿ ದರದಲ್ಲಿ ಏರಿಳಿತ ಕಂಡುಬಂದಿದೆ. ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಸ್ವಲ್ಪ ಏರಿಕೆಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಬೆಳ್ಳಿ ಬೆಲೆ 62,100 ರೂ. ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ
ಪ್ರಸ್ತುತ, ಬೆಂಗಳೂರು ನಗರದಲ್ಲಿ ಇಂದು 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 665, ರೂ. 6,650 ಹಾಗೂ ರೂ. 66,500 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 66,500 ಆಗಿದ್ದರೆ ದೆಹಲಿಯಲ್ಲಿ ರೂ. 62,100 ಮುಂಬೈನಲ್ಲಿ ರೂ. 62,100 ಹಾಗೂ ಕೊಲ್ಕತ್ತದಲ್ಲೂ ರೂ. 62,100 ಗಳಾಗಿದೆ.