ಫ್ರೆಂಡ್ ಶಿಪ್ ಅಂದರೆ ಇದೆ ತಾನೇ!!! ಗಾಲಿಕುರ್ಚಿಯಲ್ಲಿದ್ದ ತನ್ನ ಸ್ನೇಹಿತನನ್ನು ಆಟಕ್ಕೆ ಸೇರಿಸಿದ ಸ್ನೇಹಿತ: ಇಬ್ಬರು ಸ್ನೇಹಿತರ ಮನಮುಟ್ಟುವ ವೀಡಿಯೋ ವೈರಲ್

ಇದೊಂದು ನಿಷ್ಕಲ್ಮಶ ಸ್ನೇಹ. ಯಾಕೆ ಗೊತ್ತಾ ? ಇಲ್ಲಿ ಯಾವುದೇ ಕಪಟವಿಲ್ಲ. ಶಾಲೆಯ ಆಟಗಳಲ್ಲಿ ಭಾಗವಹಿಸಲು ಸಾಧ್ಯವಾಗದ ತನ್ನ ಸ್ನೇಹಿತನಿಗೆ ಸಹಾಯ ಮಾಡುವ ಬಾಲಕನ ಹೃದಯಸ್ಪರ್ಶಿ ವೀಡಿಯೋ ಇದಾಗಿದೆ.

ಗಾಲಿಕುರ್ಚಿಯಲ್ಲಿ ಕುಳಿತುಕೊಂಡು ಸುಮ್ಮನೆ ಉಳಿದ ಮಕ್ಕಳು ಆಡುತ್ತಿರುವುದನ್ನು ನೋಡುತ್ತಾ ಇದ್ದ ಬಾಲಕನೋರ್ವನಿಗೆ ಆತನ ಸ್ನೇಹಿತ, ಆತನನ್ನು ಗಾಲಿಕುರ್ಚಿ ಸಮೇತ ಆಟ ಆಡೋಕೆ ಸಹಾಯ ಮಾಡಿದ್ದು ಕಂಡರೆ ಇದಲ್ಲವೇ ನಿರ್ಮಲ ಸ್ನೇಹ ಅಂತ ಹೇಳುವುದು ಅಂತ ಯಾರಿಗೂ ಅನಿಸದೇ ಇರದು. ಎಂತವರ ಹೃದಯ ತಟ್ಟುತ್ತೆ ಈ ವೀಡಿಯೋ.

ಮಕ್ಕಳು ಅತ್ತಿಂದಿತ್ತ ಓಡಾಡುತ್ತಿದ್ದರೆ, ಗಾಲಿಕುರ್ಚಿಯಲ್ಲಿದ್ದ ಬಾಲಕ ಮಾತ್ರ ಕುಳಿತೇ ಇದ್ದ.
ತನ್ನ ವಿಕಲಚೇತನ ಸ್ನೇಹಿತ ಯಾವುದೇ ವಿನೋದವನ್ನು ಕಳೆದುಕೊಳ್ಳಬಾರದು ಎಂದು ಬಯಸಿದ ಬಾಲಕ ಆತನನ್ನು ಸಹ ಆಟದಲ್ಲಿ ಸೇರಿಸಿಕೊಂಡಿದ್ದಾನೆ.

https://mobile.twitter.com/FredSchultz35/status/1528354053666787329

ಈ ವಿಡಿಯೋವನ್ನು ಫ್ರೆಡ್ ಷುಲ್ಟ್ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೆ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಗುಂಪಿನ ಚಟುವಟಿಕೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಗುಂಪನ್ನು ವಿಡಿಯೋ ತೋರಿಸುತ್ತದೆ. ಈ ಹುಡುಗ ಗಾಲಿಕುರ್ಚಿಯನ್ನು ತಳ್ಳುವ ಮೂಲಕ ತನ್ನ ಸ್ನೇಹಿತನಿಗೆ ಸಹಾಯ ಮಾಡಿದ್ದಾನೆ. ಅಂತಿಮ ಹಂತವನ್ನು ತಲುಪಲು ಓಡುತ್ತಿದ್ದ ಇತರ ಮಕ್ಕಳೊಂದಿಗೆ ಸ್ಪರ್ಧಿಸಿದ್ದಾನೆ.

ಸಹಜವಾಗಿ, ನೆಟ್ಟಿಗರು ಈ ಹೃದಯಸ್ಪರ್ಶಿ ಕ್ಷಣವನ್ನು ಇಷ್ಟಪಟ್ಟಿದ್ದಾರೆ. ಬಾಲಕನ ಬಗ್ಗೆ ಜನರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಮನಸ್ಸು ಬಹಳ ಪರಿಶುದ್ಧವಾಗಿರುತ್ತದೆ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Leave A Reply

Your email address will not be published.