ಈ ತಿಂಗಳು ಒಟಿಟಿಗೆ ಲಗ್ಗೆಯಿಟ್ಟ ಮುಖ್ಯ ಸಿನಿಮಾ ಮತ್ತು ಸಿರಿಸ್ ಗಳು

ಕಶ್ಮೀರ್ ಫೈಲ್ಸ್
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದ ಕಶ್ಮೀರ್ ಫೈಲ್ಸ್ ಸಿನಿಮಾ’, ಕಾಶ್ಮೀರಿ ಪಂಡಿತರ ನಿಜ ಜೀವನದಲ್ಲಿ ನಡೆದ ಅತ್ಯಂತ ದಾರುಣ ಘಟನೆಗಳನ್ನು ಆಧರಿಸಿದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ, ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾ ಮೇ 13 ರಂದು, ಜೀ5 ಡಿಜಿಟಲ್ ವೇದಿಕೆಯಲ್ಲಿ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

 

ಥಾರ್
ಅನಿಲ್ ಕಪೂರ್ ಮತ್ತು ಹರ್ಷವರ್ಧನ್ ಕಪೂರ್ ಅಭಿನಯದ ಈ ಬಹು ನಿರೀಕ್ಷಿತ ಆಯಕ್ಷನ್ ಥ್ರಿಲ್ಲರ್ ಮೇ 6 ರಂದು ನೆಟ್‍ಫ್ಲಿಕ್ಸ್‍ನಲ್ಲಿ ಬಿಡುಗಡೆ ಆಗಲಿದೆ. ಫಾತೀಮ ಸಮಾ ಶೇಖ್ ಮತ್ತು ಸತೀಶ್ ಕೌಶಿಕ್ ಅವರು ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಪಂಚಾಯತ್ 2
ಪಂಚಾಯತ್, ದೀಪಕ್ ಕುಮಾರ್ ಮಿಶ್ರಾ ನಿರ್ದೇಶನದ ವೆಬ್ ಸರಣಿ ಇದಾಗಿದ್ದು, ಇದೀಗ ಅದರ ಎರಡನೇ ಸೀಸನ್ ಬಿಡುಗಡೆ ಆಗುತ್ತಿದೆ. ಮೇ 20 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪಂಚಾಯತ್ 2 ಬಿಡುಗಡೆ ಆಗಲಿದ್ದು, ಜಿತೇಂದ್ರ ಕುಮಾರ್, ನೀನಾ ಗುಪ್ತ ಮತ್ತು ರಘುಬೀರ್ ಯಾದವ್ ಇದರಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹನಿಮೂನ್
ಕನ್ನಡದ ವೆಬ್ ಸರಣಿ ‘ಹನಿಮೂನ್’ ಇದೇ ಮೇ 20 ರಿಂದ ಒಟಿಟಿಗೆ ಕಾಲಿಟ್ಟಿದೆ. ನಾಗಭೂಷಣ್ ಹಾಗೂ ಸಂಜನಾ ಆನಂದ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ವೆಬ್ ಸರಣಿಗೆ ಬಂಡವಾಳ ಹೂಡಿರುವುದು ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ. ವೆಬ್ ಸರಣಿಗೆ ಕತೆ-ಚಿತ್ರಕತೆ ಬರೆದಿರುವುದು ಸ್ವತಃ ನಾಗಭೂಷಣ್. ವೆಬ್ ಸರಣಿಯಲ್ಲಿ ‘ಲೂಸಿಯಾ’ ಪವನ್ ಕುಮಾರ್ ಸಹ ನಟಿಸಿದ್ದಾರೆ.

RRR
ತೆಲುಗಿನ ಸೂಪರ್ ಡೂಪರ್ ಹಿಟ್ ಸಿನಿಮಾ ‘RRR’ ಒಟಿಟಿಗೆ ಬಂದಿದೆ. ನೆಟ್‌ಫ್ಲಿಕ್ಸ್ ಹಾಗೂ ಜೀ5 ಎರಡೂ ಒಟಿಟಿಗಳಲ್ಲಿ ಏಕಕಾಲಕ್ಕೆ ‘RRR’ ಸಿನಿಮಾ ಬಿಡುಗಡೆ ಆಗಿದೆ. ಮೇ 20 ರಿಂದ ಎರಡೂ ಒಟಿಟಿಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಚಿತ್ರಮಂದಿರದಲ್ಲಿ ಕತ್ತರಿಸಲಾಗಿದ್ದ ಕೆಲ ದೃಶ್ಯಗಳು ಒಟಿಟಿ ಆವೃತ್ತಿಯಲ್ಲಿ ಇರಲಿವೆ ಎನ್ನಲಾಗುತ್ತಿದೆ. ರಾಜಮೌಳಿ ನಿರ್ದೇಶಿಸಿ, ಜೂ ಎನ್‌ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ನಟಿಸಿರುವ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು.

Leave A Reply

Your email address will not be published.